ಜಿಲ್ಲೆ

ಸಮಾಜ ಸುಧಾರಣೆಗೆ ಶ್ರಮ

ಕೋಲಾರ ಡೆಸ್ಕ್

ಕೋಲಾರ; ಸಮಾಜದಲ್ಲಿನ ತೊಡಕುಗಳನ್ನು ಹೋಗಲಾಡಿಸಿ ಸುಧಾರಣೆಗಳನ್ನು ಜಾರಿಗೆ ತಂದು, ಪ್ರತಿಯೊಬ್ಬರಿಗೂ ಸಮಾನ ಹಕ್ಕು ಕಲ್ಪಿಸಲು ಶ್ರಮಿಸಿದವರು ಡಾ.ಅಂಬೇಡ್ಕರ್​. ಅವರ ತತ್ವ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಹೇಳಿದರು.

ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿದ್ದ ಅಂಬೇಡ್ಕರ್​ ಜಯಂತಿಯಲ್ಲಿ ಮಾತನಾಡಿ, ಎಲ್ಲರಿಗೂ ಸಮಾನ ಹಕ್ಕುಗಳು ದೊರಕುವ ಸಮಾಜ ನಿರ್ಮಾಣವಾಗಬೇಕೆಂಬುದು ಆಗಿತ್ತು. ಮಹಿಳೆಯರಿಗೂ ಸಮಾನ ಶಿಣ, ಗೌರವ ಹಾಗೂ ಅವಕಾಶಗಳು ಸಿಗಬೇಕು ಎಂಬ ಅವರ ದೃಷ್ಟಿಕೋನವನ್ನು ಈಗಿನ ಸರ್ಕಾರ ಹಂತ ಹಂತವಾಗಿ ಸಾಕಾರಗೊಳಿಸುತ್ತಿದೆ ಎಂದರು.

ವಿಧಾನ ಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ ಕುಮಾರ್​ ಮಾತನಾಡಿ, ಅಂಬೇಡ್ಕರ್​ ತಾವು ಅನುಭವಿಸಿದ ಅಸಮಾನತೆಗಳನ್ನು ನಿಭಾಯಿಸಿ, ಎಲ್ಲರ ಸಮಾನತೆಯಿಗಾಗಿ ತಮ್ಮ ಜೀವನ ಅರ್ಪಿಸಿದ ಮಹಾನ್​ ವ್ಯಕ್ತಿ. ಎಲ್ಲ ಧರ್ಮಗ್ರಂಥಗಳ ಅಧ್ಯಯನ ಮಾಡಿ, ಯಾವುದೇ ಜಾತಿ ಧರ್ಮದ ಮಿತಿಗೆ ಒಳಪಟ್ಟಿಲ್ಲ. ಅವರ ಪುಸ್ತಕ ಓದುವ ಅಭ್ಯಾಸ ಎಷ್ಟರಮಟ್ಟಿಗೆ ಇತ್ತು ಎಂದರೆ ತಮ್ಮ ಮನೆಯಲ್ಲಿಯೇ 50,000ಕ್ಕೂ ಅಧಿಕ ಗ್ರಂಥಗಳ ಸಂಗ್ರಹಣೆಯ ಗ್ರಂಥಾಲಯವಿತ್ತು ಎಂದು ಹೇಳಿದರು.

ಉಪನ್ಯಾಸಕ ಡಾ.ಕುಪ್ಪನಹಳ್ಳಿ ಭೈರಪ್ಪ ಮಾತನಾಡಿ, ಇಂದಿನ ಜನರು ಅಂಬೇಡ್ಕರ್​ವಾದಿಗಳೆಂದು ಹೇಳಿಕೊಳ್ಳುವುದಕ್ಕಿಂತ ಅವರ ತತ್ವಗಳನ್ನು ಪಾಲಿಸುವದು ಮುಖ್ಯ. ಮೀಸಲಾತಿಯ ಹಕ್ಕನ್ನು ಪಡೆದಿರುವವರು ಮತ್ತು ಮಹಿಳೆಯರು ಎಲ್ಲ ೇತ್ರಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಸಿಕ್ಕಿರಲು ಮುಖ್ಯ ಕಾರಣ ಅಂಬೇಡ್ಕರ್​ ಎಂದರು.

ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಎಸ್​ಎಸ್​ಎಲ್​ಸಿ ಮತ್ತು ದ್ವೀತಿಯ ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.