ಯಲಬುರ್ಗಾ ತಾಲೂಕು ಹಿರೇವಂಕಲಕುಂಟಾದಲ್ಲಿ ಹಮ್ಮಿಕೊಂಡಿದ್ದ ಗಣೇಶ ಸಂಜೀವಿನಿ ಮಹಿಳಾ ಒಕ್ಕೂಟದ ಪದಾಧಿಕಾರಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು. ಎನ್‌ಆರ್‌ಎಲ್‌ಎಂ ತಾಲೂಕು ಸಂಯೋಜಕ ಉದಯಕುಮಾರ್, ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಬಸವರಾಜ ತಳವಾರ್, ಸದಸ್ಯೆ ಹುಸೇನ್‌ಬಿ ಹುಸೇನ್‌ಸಾಬ್ ಅತ್ತಾರ, ನಿವೃತ್ತ ಉಪಪ್ರಾಚಾರ್ಯ ಚಂದ್ರಕಾಂತಯ್ಯ ಕಲ್ಯಾಣಮಠ, ವಲಯ ಸಂಪನ್ಮೂಲ ವ್ಯಕ್ತಿ ಶರಣಪ್ಪ ಮಾದಿನೂರು ಇತರರಿದ್ದರು. 
ಜಿಲ್ಲೆ

ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನ

ರುದ್ರಪ್ಪ ವಾಲಿ

ಯಲಬುರ್ಗಾ: ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಸರ್ಕಾರ ಅನುದಾನ ನೀಡುತ್ತಿದೆ ಎಂದು ಎನ್‌ಆರ್‌ಎಲ್‌ಎಂ ತಾಲೂಕು ಸಂಯೋಜಕ ಉದಯಕುಮಾರ ಹೇಳಿದರು.

ತಾಲೂಕಿನ ಹಿರೇವಂಕಲಕುಂಟಾ ಈಶ್ವರ ಕಲ್ಯಾಣ ಮಂಟಪ ಸಭಾ ಭವನದಲ್ಲಿ ಗ್ರಾಮೀಣ ಜೀವನೋಪಾಯ ಸಂವರ್ಧನೆ ಸಂಸ್ಥೆ, ಗಣೇಶ ಸಂಜೀವಿನಿ ಮಹಿಳಾ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಒಕ್ಕೂಟದ ಪದಾಧಿಕಾರಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಯೋಜನೆ ನಿಯಮಾನುಸಾರ ಸಮುದಾಯ ಬಂಡವಾಳ ನಿಧಿಯನ್ನು ಸಾಲದ ರೂಪದಲ್ಲಿ ನೀಡಿ ಉತ್ತೇಜಿಸುವ ಮೂಲಕ ಉದ್ಯಮಿಗಳನ್ನಾಗಿಸಲಾಗುತ್ತಿದೆ. ಕೌಶಲಗಳಿಗೆ ಸಂಜೀವಿನಿ ಯೋಜನೆ ಪ್ರೋತ್ಸಾಹಿಸುತ್ತಿದೆ. ಗುಂಪುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡುವುದರ ಜತೆಗೆ ಸ್ವಾವಲಂಬಿ ಜೀವನಕ್ಕೆ ಪ್ರೋತ್ಸಾಹಿಸಲಾಗುತ್ತಿದೆ.

ಮಹಿಳೆಯರನ್ನು ಹೆಚ್ಚಾಗಿ ಸಂಘಗಳಿಗೆ ಸೇರ್ಪಡೆ ಮಾಡಿ, ಅವರನ್ನು ಮುಖ್ಯವಾಹಿನಿಗೆ ತರಬೇಕು ಎಂದರು. ವಲಯ ಸಂಪನ್ಮೂಲ ವ್ಯಕ್ತಿ ಶರಣಪ್ಪ ಮಾದಿನೂರು ಮಾತನಾಡಿ, ಹಿರೇವಂಕವಕುಂಟಾ ಗ್ರಾಪಂ ಒಕ್ಕೂಟದಲ್ಲಿ 104 ಸ್ವಸಹಾಯ ಸಂಘಗಳಿವೆ. ಅದರಲ್ಲಿ ಒಟ್ಟು 1,055 ಫಲಾನುಭವಿಗಳಿದ್ದಾರೆ. ಸಮುದಾಯ ಬಂಡವಾಳನಿಧಿ 61 ಲಕ್ಷ ರೂ.ಗಳಲ್ಲಿ ಸಮುದಾಯದ ಬಡ್ಡಿ 27 ಲಕ್ಷ ರೂ. ಬಂದಿದೆ. 2023-2024ರಲ್ಲಿ 38 ಲಕ್ಷ ರೂ. ಸ್ವಸಹಾಯ ಗುಂಪುಗಳಿಗೆ ಸಾಲ ವಿತರಿಸಲಾಗಿದೆ ಎಂದರು.

ಶಿಕ್ಷಕ ಗಂಗಾಧರ ಶೆಟ್ಟರ, ಸಂಘದ ಸದಸ್ಯರಾದ ಗೀತಾ ಈಳಿಗೇರ, ಮಲ್ಲಮ್ಮ ಬಂಗಾರಿ, ಮಹಾಂತಮ್ಮ ಬಡಿಗೇರ, ಫರವೀನ್ ಮುಲ್ಲಾರ್, ಮಹಾದೇವಿ, ಶಿಕ್ಷಕ ಗಂಗಾಧರ ಶೆಟ್ಟರ, ಸಂಜೀವಿನಿ ಒಕ್ಕೂಟದ ಎಂಬಿಕೆ ಗಿರಿಜಾ ಕೆರಿ, ಗೀತಾ ಸಜ್ಜನ, ದೀಪಾ ಗೊಂದಳೆ ಇತರರಿದ್ದರು.