ಜಿಲ್ಲೆ

ವೀರಶೈವ ಸಮಾಜದ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಪ್ರಯತ್ನ

ಹಿರೇಕೆರೂರ: ವೀರಶೈವ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಿದ್ಯಾರ್ಥಿ ನಿಲಯದ ಅವಶ್ಯಕತೆಯಿದ್ದು, ಇದರ ನಿರ್ವಣಕ್ಕಾಗಿ ಪ್ರಯತ್ನಿಸಲಾಗುವುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ, ಹಿರೇಕೆರೂರ, ರಟ್ಟಿಹಳ್ಳಿ ತಾಲೂಕು ಘಟಕದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಘಟಕದ ಸಭೆ, ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಾಸಭಾದ ವತಿಯಿಂದ ಹೊಸ ಕಾರ್ಯಕ್ರಮ ಮತ್ತು ಸಮಾಜದ ಅಭಿವೃದ್ಧಿಗೆ ಪೂರಕವಾಗುವಂತಹ ಯೋಜನೆಗಳನ್ನು ರೂಪಿಸಲಾಗುವುದು. ಇದಕ್ಕೆ ಎಲ್ಲರ ಸಹಾಯ, ಸಹಕಾರ ಅತಿ ಮುಖ್ಯ. ನೂತನ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಮಹಾಸಭಾ ಮೂಲಕ ಉತ್ತಮ ಕೆಲಸ ಮಾಡಲು ನಮ್ಮೊಂದಿಗೆ ಕೈಜೋಡಿಸಬೇಕು ಎಂದರು.

ತಿಪ್ಪಾಯಿಕೊಪ್ಪ ಗುರು ಮೂಕಪ್ಪ ಶಿವಯೋಗಿಗಳ ನಿಕಟ ಪೂರ್ವ ಪೀಠಾಧಿಪತಿ ವಿರೂಪಾಕ್ಷ ಮಹಾಸ್ವಾಮಿಗಳು ಲಿಂಗ್ಯಕ್ಯರಾದ ನಿಮಿತ್ತ ಅವರಿಗೆ ಮಹಾಸಭಾದ ವತಿಯಿಂದ ಶ್ರದ್ದಾಂಜಲಿ ಅರ್ಪಿಸಲಾಯಿತು.

ಜಿಲ್ಲಾ ಆಖಿಲ ಭಾರತ ವೀರಶೈವ ಮಹಾಸಭಾ ಸದಸ್ಯ ಗುರುಶಾಂತ ಯತ್ತಿನಹಳ್ಳಿ, ತಾಲೂಕು ಘಟಕದ ಪದಾಧಿಕಾರಿಗಳಾದ ಎಂ.ಡಿ. ಸೀಮಿಕೇರಿ, ಈಶ್ವರಪ್ಪ ಸಿರಿಗೌಡ್ರ, ಜೆ.ವಿ. ಅಂಗಡಿ, ಎನ್.ಎಸ್. ಹೆಗ್ಗೇರಿ, ಮುತ್ತಣ್ಣ ಬಾಸೂರ, ಪುಟ್ಟಪ್ಪ ವಾಲಿ, ಪ್ರಶಾಂತ ಹೆಡಿಯಾಲ, ಸಿದ್ದು ತಂಬಾಕದ, ಕಂಠಾಧರ ಅಂಗಡಿ, ಮಹೇಂದ್ರ ಬಣಕಾರ, ರುದ್ರೇಶ ಬೆತೂರ, ಅರುಣಾ ಹಂಪಾಳಿ, ರೇಣು ಮಾರೇರ, ಲತಾ ಬಣಕಾರ, ಲತಾ ಗೌಡರ, ರತ್ನಮ್ಮ ಹನುಮರೆಡ್ಡೇರ, ಲಲಿತಾ ಕೆಳಗಿನಮನಿ ಇದ್ದರು.