ಸಿಂಧನೂರಿನಲ್ಲಿ ಕನ್ನಡ ಭಾಷಾ ಬೋಧನೆ ಕಾರ್ಯಾಗಾರದಲ್ಲಿ ಬಿಇಒ ಸೋಮಶೇಖರಗೌಡ ಮಾತನಾಡಿದರು. ಪ್ರಾಚಾರ್ಯ ರಾಘವೇಂದ್ರ, ಕನ್ನಡ ಭಾಷಾ ವಿಷಯ ಬೋಧಕರ ವೇದಿಕೆ ಅಧ್ಯಕ್ಷ ಬಸವರಾಜ ಬಿಳೇಕಲ್ಲ, ಉಪಾಧ್ಯಕ್ಷೆ ರಮಾ, ಎಸ್ಸೆಸ್ಸೆಲ್ಸಿ ತಾಲೂಕು ನೋಡಲ್ ಅಧಿಕಾರಿ ಅಮರೇಶ, 
ಜಿಲ್ಲೆ

ಪರಿಣಾಮಕಾರಿಯಾಗಿ ಬೋಧನೆ ಮಾಡಿ

Gangavati - Desk - Veeresh S Ullagaddi

ಸಿಂಧನೂರು: ಶಿಕ್ಷಕರಿಗೆ ಕನ್ನಡ ಸಾಹಿತ್ಯ, ಎಲ್ಲ ಮತ, ಧರ್ಮ, ಸಾಂಸ್ಕೃತಿಕ ಕ್ಷೇತ್ರದ ಪರಿಚಯ ಇರಬೇಕೆಂದು ಬಿಇಒ ಸೋಮಶೇಖರಗೌಡ ಹೇಳಿದರು.


ನಗರದ ಮುರಾರ್ಜಿ ವಸತಿ ಶಾಲೆಯಲ್ಲಿ ಕನ್ನಡ ಭಾಷಾ ಬೋಧಕರ ವೇದಿಕೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಭಾಷಾ ಬೋಧನೆ ಕಾರ್ಯಾಗಾರದಲ್ಲಿ ಶುಕ್ರವಾರ ಮಾತನಾಡಿದರು

ಶಿಕ್ಷಕರು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧನೆ ಮಾಡಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಬರುವಂತೆ ನೋಡಿಕೊಳ್ಳಬೇಕು. ಉನ್ನತ ಹುದ್ದೆಯ ಗುರಿ ಹೊಂದುವಂತೆ ಪ್ರೋತ್ಸಾಹಿಸಬೇಕು ಎಂದರು.
ಪ್ರಮುಖರಾದ ಬಸವರಾಜ ಹೊಸಳ್ಳಿ, ರಾಮರಡ್ಡಿ ಹುಡಾ, ನಾಗರಾಜ ದಿದ್ದಗಿ ಇದ್ದರು.