ವಿಜಯವಾಣಿ ಸುದ್ದಿಜಾಲ ಉಡುಪಿ
ತೆಂಕನಿಡಿಯೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಅಭ್ಯುದಯ ಸಮಾಜಕಾರ್ಯ ವೇದಿಕೆ ಹಾಗೂ ಸಂಚಲನ ಮಹಿಳಾ ತರಬೇತುದಾರರ ಒಕ್ಕೂಟ ಕರ್ನಾಟಕ ಇವರ ಆಶ್ರಯದಲ್ಲಿ ಮಾ.25ರಂದು ಲಿಂಗತ್ವ ಸಂವೇದನೆ-ಅರಿವಿನ ಪಯಣ ಕಾರ್ಯಾಗಾರ ಆಯೋಜಿಸಲಾಗಿತ್ತು.
ಆಶಾಲತಾ ಹೊಸಬೆಟ್ಟು ಹಾಗೂ ತಂಡದವರು ಏಕವ್ಯಕ್ತಿ ಪ್ರದರ್ಶನ, ಜಾಗೃತಿ ಗೀತೆ ಮತ್ತು ಸಂವಾದ ನಡೆಸುವ ಮೂಲಕ ಲಿಂಗತ್ವ ಸಂವೇದನೆಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಬಿಎಸ್ಡಬ್ಲ್ಯು ವಿಭಾಗದಲ್ಲಿ ಪ್ರಥಮ ಸ್ಥಾನ ವಿಜೇತೆ ಶ್ರೀನಿಧಿ ಬಿ.ಎಸ್. ಮತ್ತು ಎಂಎಸ್ಡಬ್ಲ್ಯು ವಿಭಾಗದ ದ್ವಿತೀಯ ಸ್ಥಾನ ವಿಜೇತೆ ಭವ್ಯಶ್ರೀ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಪ್ರೊ. ನಿತ್ಯಾನಂದ ವಿ. ಗಾಂವಕರ ಅಧ್ಯಕ್ಷತೆ ವಹಿಸಿದ್ದರು. ತೆಂಕನಿಡಿಯೂರು ಗ್ರಾಪಂ ಅಧ್ಯಕ್ಷೆ ಶೋಭಾ ಡಿ. ನಾಯ್ಕ, ಅಭ್ಯುದಯ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಮಮತಾ, ಸಹಾಯಕ ಪ್ರಾಧ್ಯಾಪಕಿ ರುಖಿಯತ್, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಸುಷ್ಮಾ ಟಿ., ಸಂಚಲನ ತಂಡದ ಪ್ರೇಮಿ ಫೆರ್ನಾಂಡಿಸ್, ಮಲ್ಲಿಕಾ ಜ್ಯೋತಿಗುಡ್ಡೆ, ಶೈಲಜಾ, ಲೀಲಾವತಿ, ಸಮಾಜಕಾರ್ಯ ವೇದಿಕೆಯ ಅಧ್ಯಕ್ಷೆ ಸೋನಿ ವಿಲ್ಮ ಸಾಲಿನ್ಸ್ ಉಪಸ್ಥಿತರಿದ್ದರು.
ಹಿರಿಯ ಉಪನ್ಯಾಸಕಿ ಡಾ. ಪ್ರಮೀಳಾ ಜೆ. ವಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌತಮಿ ಜಿ. ಸುವರ್ಣ ಸ್ವಾಗತಿಸಿದರು. ಅಭಿಷೇಕ ಬಿ.ಎಸ್. ವಂದಿಸಿದರು. ಮಹಮ್ಮದ್ ಸಹದ್ ಕಾರ್ಯಕ್ರಮ ನಿರೂಪಿಸಿದರು.