ಕಾನಹೊಸಹಳ್ಳಿಯಲ್ಲಿ ಬಾಲಕಿಯರ ವಸತಿ ನಿಲಯ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೂಮಿಪೂಜೆ ನೆರವೇರಿಸಿದರು. ಗ್ರಾಪಂ ಅಧ್ಯಕ್ಷ ಕೆ.ಜಿ.ಸಿದ್ದನಗೌಡ, ಉಪಾಧ್ಯಕ್ಷೆ ಲಕ್ಷ್ಮೀ ರಜನೀಕಾಂತ್, ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ, ಕೆ.ಜಿ.ಕುಮಾರ್‌ಗೌಡ, ಬಿಸಿಎಂ ಜಿಲ್ಲಾ ಅಧಿಕಾರಿ ಶಶಿಕಲಾ. ತಾಪಂ ಇಒ ನರಸಪ್ಪ, ಶ್ಯಾಮಣ್ಣ ಇದ್ದರು. 
ಜಿಲ್ಲೆ

ಶೈಕ್ಷಣಿಕ ಪ್ರಗತಿಗೆ ಅಗತ್ಯ ಸೌಲಭ್ಯ

Kopala - Desk - Eraveni

ಕಾನಹೊಸಹಳ್ಳಿ: ಕೂಡ್ಲಿಗಿ ತಾಲೂಕು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಪ್ರಗತಿ ಕಾಣಲು ಗುಣಮಟ್ಟದ ಶಿಕ್ಷಣ ಜತೆಗೆ ಸೌಲಭ್ಯ ಕಲ್ಪಿಸುವುದು ಅಗತ್ಯ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.

ಕಾನಹೊಸಹಳ್ಳಿಯಲ್ಲಿ ಸೋಮವಾರ 5ಕೋಟಿ ರೂ.ವೆಚ್ಚದ ನೂತನ ಬಾಲಕಿಯರ ವಸತಿ ನಿಲಯ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕೂಡ್ಲಿಗಿ ಕ್ಷೇತ್ರದಲ್ಲಿ 14ವಸತಿ ನಿಲಯಗಳಿದ್ದು ಈ ಪೈಕಿ ಕಾನಹೊಸಹಳ್ಳಿ ಶೈಕ್ಷಣಿಕ ಅಭಿವೃದ್ಧಿಯಲ್ಲಿ ತಾಲೂಕು ಮಟ್ಟದಲ್ಲಿದೆ. ಆದರೆ, ಈ ಗ್ರಾಮದಲ್ಲಿ ಎರಡು ಬಾಲಕಿಯರ ವಸತಿ ನಿಲಯಗಳಿಗೆ ಸ್ವಂತ ಕಟ್ಟಡವಿರಲಿಲ್ಲ.

ಶಾಸಕನಾದ ಮೇಲೆ ಜಾಗ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೆಕೆಆರ್‌ಡಿಬಿಯಿಂದ ಅನುದಾನ ತರಲಾಗಿದೆ. ಇಲ್ಲಿನ ನಾಡಕಚೇರಿಗೆ ಸ್ವಂತ ಕಟ್ಟಡವಿರಲಿಲ್ಲ ಈಗ ಕಾಮಗಾರಿ ಪೂರ್ಣವಾಗಿದ್ದು, ಮುಂಬರುವ ದಿನಗಳಲ್ಲಿ ಕಚೇರಿ ಉದ್ಘಾಟನೆ ಮಾಡಲಾಗುವುದು ಎಂದರು.

ಕಾರ್ಮಿಕ ಇಲಾಖೆಯಿಂದ ಹೊಸ ಮುರಾರ್ಜಿ ಶಾಲೆಗೆ ಅನುಮೋದನೆ ಸಿಕ್ಕಿದೆ. ಈ ಸಂಬಂಧ ಶಿವಪುರ ಬಳಿ 9ಎಕರೆ ಜಮೀನು ಗುರುತಿಸಿದೆ. ಈ ಶಾಲೆಯಲ್ಲಿ 700 ವಿದ್ಯಾರ್ಥಿಗಳಿಗೆ, 6ನೇ ತರಗತಿಯಿಂದ 12ನೇ ತರಗತಿವರಗೆ ವ್ಯಾಸಂಗ ಅವಕಾಶವಿದೆ. ತಾಲೂಕಿಗೆ ಎರಡು ಪಬ್ಲಿಕ್ ಶಾಲೆ ನೀಡುವಂತೆ ಕೋರಲಾಗಿದೆ.

ವಸತಿ ನಿಲಯಗಳ ಅವಶ್ಯಕತೆ ಬಗ್ಗೆ ಸರ್ಕಾರ ಮುಂದೆ ಅಂಕಿಸಂಖ್ಯೆಗಳೊಂದಿಗೆ ಬೇಡಿಕೆ ಇಟ್ಟಿರುವೆ. ಹಳೆಯ ವಸತಿ ನಿಲಯ ದುರಸ್ತಿಗೆ ಕ್ರಮವಹಿಸುವೆ ಎಂದರು.

ತಾಲೂಕು ಬಿಸಿಎಂ ಅಧಿಕಾರಿ ಶ್ಯಾಮಣ್ಣ ವಸತಿ ನಿಲಯಗಳ ಅಭಿವೃದ್ಧಿ ಕುರಿತು ವಿವರಿಸಿದರು.

ಗ್ರಾಪಂ ಅಧ್ಯಕ್ಷ ಕೆ.ಜಿ.ಸಿದ್ದನಗೌಡ, ಉಪಾಧ್ಯಕ್ಷೆ ಲಕ್ಷ್ಮೀ ರಜನೀಕಾಂತ್, ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ, ಮಾಜಿ ಉಪಾಧ್ಯಕ್ಷ ಎಚ್.ದುರುಗೇಶ, ಡಾ.ಟಿ.ಓಂಕಾರಪ್ಪ, ಬಿಸಿಎಂ ಜಿಲ್ಲಾ ಅಧಿಕಾರಿ ಶಶಿಕಲಾ, ತಾಪಂ ಇಒ ನರಸಪ್ಪ, ನಿಲಯ ಪಾಲಕ ರಾಚಪ್ಪ, ಪ್ರಮುಖರಾದ ಬಳೆಗಾರ ಜಗದೀಶ್, ಕೆ.ಜಿ.ಕುಮಾರ್‌ಗೌಡ, ಬೊಮ್ಮಣ್ಣ, ಹುಲಿಕೆರೆ ಮಾರಪ್ಪ, ಸೂರ್ಯಪ್ರಕಾಶ, ಜಿ.ಒಬಣ್ಣ, ಹೊನ್ನೂರಸ್ವಾಮಿ, ಎಳನೀರು ಗಂಗಣ್ಣ, ಮಲ್ಲಪ್ಪ, ಸಹನಾ, ಪ್ರಕಾಶ್, ಸುಮಾ ಇತರರಿದ್ದರು.