ಮೈನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕಾ ಸಾಮಗ್ರಿಗಳನ್ನು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ವಿತರಿಸಿದರು. ಪ್ರಮುಖರಾದ ಸಾಹಿತಿ ಡಾ.ಷಣ್ಮುಖಯ್ಯ ತೋಟದ, ಮಹೇಂದ್ರಗೌಡ, ಮರಿಶಾಂತವೀರ, ಸಿದ್ದರಡ್ಡಿ ಇತರರು ಇದ್ದರು. 
ಜಿಲ್ಲೆ

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕೈ ಜೋಡಿಸಿ

ಪ್ರವೀಣ ಉದುಸಾ ದಲಬಂಜನ್

ಅಳವಂಡಿ: ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರದ ಜತೆ ಸಮಾಜವು ಕೈ ಜೋಡಿಸಿದಾಗ ಪ್ರಗತಿ ಕಾಣಲು ಸಾಧ್ಯ ಎಂದು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಲಗೇರಿ ತಿಳಿಸಿದರು.

ಶೈಕ್ಷಣಿಕ ಕಲಿಕಾ ಸಾಮಗ್ರಿ ವಿತರಣೆ

ಸಮೀಪದ ಮೈನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರೋೃತ್ಸವದ ನಿಮಿತ್ತ ಮೈನಹಳ್ಳಿ ಅಡವಿಬಸಯ್ಯ ತೋಟದ ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಶೈಕ್ಷಣಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಹಿತಿ ಹಾಗೂ ಕಲಾವಿದ ಡಾ.ಷಣ್ಮುಖಯ್ಯ ತೋಟದ ಮಾತನಾಡಿ, ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದರು. ಎಸ್ಡಿಎಂಸಿ ಅಧ್ಯಕ್ಷ ಮಹೇಂದ್ರಗೌಡ ಕುರಡಗಿ, ಪ್ರಮುಖರಾದ ಮರಿಶಾಂತವೀರ ಚಕ್ಕಡಿ, ಸಿದ್ದರಡ್ಡಿ ಡಂಬ್ರಳ್ಳಿ, ಬಸವರಾಜ ಸಜ್ಜನ, ಬಸವರಾಜ ಚಿತ್ತಾಪುರ ಇನ್ನಿತರರಿದ್ದರು.