ಎನ್.ಆರ್.ಪುರದಲ್ಲಿ ಶಿವರಾತ್ರಿ ಮಹೋತ್ಸವ ಹಾಗೂ ಅಂತರಾಷ್ಟೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಗ್ರಾಪಂ ಉಪಾಧ್ಯಕ್ಷೆ ಶೋಭಾ ಉದ್ಘಾಟಿಸಿದರು. ಪ್ರಮೀಳಾ, ಪಿ.ಎಸ್.ವಿದ್ಯಾ, ಪ್ರಶಾಂತ್ ಎಲ್. ಶೆಟ್ಟಿ, ಕಿರಣ್, ಕೆ.ಎಸ್.ರಾಜಕುಮಾರ್ ಇತರರಿದ್ದರು. 
ಜಿಲ್ಲೆ

ಸುಜ್ಞಾನದ ಕಡೆಗೆ ಕರೆದೊಯ್ಯಲು ಶಿಕ್ಷಣ

ಎನ್.ಆರ್.ಪುರ: ಜನರಲ್ಲಿ ದುರ್ಗುಣಗಳನ್ನು ತೆಗೆದು ಹಾಕಿ ಸುಜ್ಞಾನದ ಕಡೆಗೆ ಕರೆದುಕೊಂಡು ಹೋಗಲು 7 ದಿನದ ಉಚಿತ ಸಾತ್ವಿಕ ಶಿಕ್ಷಣ ನೀಡುತ್ತಿದ್ದೇವೆ. ಮಹಿಳೆಯರು ಸಬಲೆಯರು ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ ಎಂದು ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದ ಸಂಚಾಲಕಿ ಪ್ರಮೀಳಾ ತಿಳಿಸಿದರು.

ಅಗ್ರಹಾರದ ಶ್ರೀ ಉಮಾಮಹೇಶ್ವರ ಸಮುದಾಯ ಭವನದಲ್ಲಿ ನಡೆದ ಶಿವರಾತ್ರಿ ಮಹೋತ್ಸವ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದೇಶಗಳಲ್ಲೂ ನಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತಿವೆ ಎಂದರು.
ರೋಟರಿ ಸಂಸ್ಥೆ ಕಾರ್ಯದರ್ಶಿ ಪಿ.ಎಸ್.ವಿದ್ಯಾನಂದಕುಮಾರ್ ಮಾತನಾಡಿ, ನಾವು ಸಮಾಜದ ಋಣ ತೀರಿಸಲು ನಮ್ಮ ದುಡಿಮೆಯಲ್ಲಿ ಸ್ವಲ್ಪ ಭಾಗ ದೀನ, ದಲಿತರಿಗೆ ದಾನ ಮಾಡಬೇಕು. ಪ್ರತಿ ನಿತ್ಯ ಭಗವಂತನ ಧ್ಯಾನ ಮಾಡಬೇಕು ಎಂದು ಹೇಳಿದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಮಾತನಾಡಿ, ವಿದೇಶಗಳಲ್ಲೂ ಯೋಗ, ಧ್ಯಾನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯ ವಿದೇಶಗಳಲ್ಲೂ ವ್ಯಾಪಿಸಿದೆ ಎಂದರು.
ನಾಗಲಾಪುರ ಗ್ರಾಪಂ ಉಪಾಧ್ಯಕ್ಷೆ ಶೋಭಾ, ರೋಟರಿ ಕ್ಲಬ್ ಅಧ್ಯಕ್ಷ ಕಿರಣ್, ಸಾವಿತ್ರಿ, ಕೆ.ಎಸ್.ರಾಜಕುಮಾರ್, ಅನುಪಮಾ ಇದ್ದರು.