ಕಾರ್ಕಳ: ವ್ಯಕ್ತಿಯ ಅಂತಃಕರಣ ಮಿಡಿಯುವ, ಮಾನವೀಯತೆ ಬೆಳೆಸುವ ಶಿಕ್ಷಣ ಲಭಿಸಿದರೆ ಸಾರ್ಥಕ, ಇಂದು ಅನಕ್ಷರಸ್ಥರಲ್ಲಿರುವ ಮಾನವೀಯ ಗುಣ ವಿದ್ಯಾವಂತರು ಎನಿಸಿಕೊಂಡವರಲ್ಲಿ ಇರುವುದಿಲ್ಲ ಇದು ದುಃಖಕರ ಎಂದು ಮಂಗಳೂರಿನ ಶಾರದಾ ವಿದ್ಯಾಲಯ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಹೇಳಿದರು.
ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ವತಿಯಿಂದ ಕಾರ್ಕಳ ಗಣಿತ ನಗರದ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸಂಸ್ಥಾಪಕ ದಿ.ಗೋಪ ಶೆಟ್ಟಿಯವರ 103ನೇ ಜನ್ಮದಿನಾಚರಣೆ ಹಾಗೂ ಸಾಮಾಜಿಕ ನೆರವು ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಕ್ತಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಕೆ.ಸಿ.ನಾಯ್ಕ ಮಾತನಾಡಿ, ಇಂತಹ ಆದರ್ಶ ಕಾರ್ಯಕ್ರಮದ ರೂವಾರಿ ಡಾ.ಸುಧಾಕರ್ ಶೆಟ್ಟಿ ಅಭಿನಂದನೆಗೆ ಅರ್ಹರು ಎಂದರು.
ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ಕೆಎಂಸಿ ಬ್ಲಡ್ ಸೆಂಟರ್ ಹಾಗೂ ಜ್ಞಾನಸುಧಾ ಹಳೇ ವಿದ್ಯಾರ್ಥಿ ಸಂಘ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ ನೆರವಿನೊಂದಿಗೆ ರಕ್ತದಾನ ಶಿಬಿರ ಆಯೋಜಿಸಲಾಯಿತು. ಬ್ಲಡ್ ಸೆಂಟರ್ ಕೆಎಂಸಿಯ ನಿರ್ದೇಶಕ ಡಾ.ಶಮೀ ಶಾಸ್ತ್ರೀ ಉದ್ಘಾಟಿಸಿದರು.
ಕಾರ್ಕಳ ರೋಟರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಕೀರ್ತಿನಾಥ್ ಬಲ್ಲಾಳ್, ಟ್ರಸ್ಟಿಗಳಾದ ವಿದ್ಯಾವತಿ ಎಸ್.ಶೆಟ್ಟಿ, ಅನಿಲ್ ಕುಮಾರ್ ಜೈನ್, ಸಿ.ಎ. ನಿತ್ಯಾನಂದ ಪ್ರಭು, ಆಡಳಿತ ಮಂಡಳಿ ಸದಸ್ಯ ಶಾಂತಿರಾಜ್ ಹೆಗ್ಡೆ, ಕಾರ್ಕಳ ಜ್ಞಾನಸುಧಾ ಕ್ಯಾಂಪಸ್‌ನ ಸಿಇಒ ಹಾಗೂ ಪ್ರಾಂಶುಪಾಲ ದಿನೇಶ್ ಎಂ.ಕೊಡವೂರು, ಪಿಆರ್‌ಒ ಜ್ಯೋತಿ ಪದ್ಮನಾಭ ಭಂಡಿ, ಕಾರ್ಕಳ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿಲ್ಪಾ ಹಾಗೂ ರೂಪಕಲಾ ಕಾಮತ್ ಮತ್ತು ಜ್ಞಾನಸುಧಾ ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ, ವಕೀಲ ಭವಿಷ್, ಸಂಸ್ಥೆ ಪ್ರಮುಖರು ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ನಿರೂಪಿಸಿದರು.
ಟ್ರಸ್ಟ್ ವತಿಯಿಂದ 23.70 ಲಕ್ಷ ರೂ. ನೆರವು ನೀಡಲಾಯಿತು. ಸ್ಥಳೀಯ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ ಕಣ್ಣಿನ ವಿಭಾಗಕ್ಕೆ 20 ಲಕ್ಷ ರೂ., ಮಂಗಳೂರಿನ ಶಕ್ತಿ ಎಜುಕೇಶನ್ ಟ್ರಸ್ಟ್‌ಗೆ 1 ಲಕ್ಷ ರೂ.ಗಳ ವಿದ್ಯಾರ್ಥಿವೇತನ, ಬೆಂಗಳೂರಿನ ಪರಿವರ್ತನ್ ಟ್ರಸ್ಟ್‌ಗೆ 1 ಲಕ್ಷ ರೂ. ಹಸ್ತಾಂತರಿಸಲಾಯಿತು. ಮಣಿಪಾಲದ ಮೇಘ ಅವರಿಗೆ ಮನೆ ನಿರ್ಮಾಣಕ್ಕೆ 10 ಸಾವಿರ ರೂ., ಸ್ವಚ್ಛಪಾಲಕ ದಿವ್ಯಚೇತನ ನೀಲಾಧರ್ ಶೆಟ್ಟಿಗಾರ್‌ಗೆ 10 ಸಾವಿರ ರೂ., ಸ.ಪ್ರೌ.ಶಾಲೆ ತೊರೆಹಡ್ಲುವಿಗೆ 10 ಸಾವಿರ ರೂ.ಆರ್ಥಿಕ ನೆರವು ನೀಡಲಾಯಿತು. ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ 10 ಸಾವಿರ ರೂ. ನೀಡಿ ಗೌರವಿಸಲಾಯಿತು. ಕಾರ್ಕಳ ಮೆಸ್ಕಾಂ ಎ ಮತ್ತು ಬಿ ವಿಭಾಗದ 26 ಪವರ್‌ಮನ್‌ಗಳಿಗೆ ತಲಾ 5 ಸಾವಿರದಂತೆ 1 ಲಕ್ಷದ 30 ಸಾವಿರ ರೂ. ನೀಡಿ ಗೌರವಿಸಲಾಯಿತು.