ಜಿಲ್ಲೆ

ವಿದ್ಯೆ ಕಲಿಸಿದ ಗುರು ಮರೆಯದಿರಿ

ಪ್ರಶಾಂತ ಹೂಗಾರ

ನಾಗರಮುನ್ನೋಳಿ: ಸ್ನೇಹ ಸಮ್ಮಿಲನದಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಗುರು ಪರಂಪರೆಗೆ ಗೌರವ ಸಲ್ಲಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ನಿಪನಾಳ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಜಿ.ಬಿ.ಸಂಗಟೆ ಹೇಳಿದರು.

ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2010-11ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಶನಿವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಹಳೆಯ ವಿದ್ಯಾರ್ಥಿಗಳ ಅಪೂರ್ವ ಸ್ನೇಹ ಸಂಗಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಲಿಸಿದ ಗುರು ಹಾಗೂ ಪಾಲಕರನ್ನು ಮರೆಯುತ್ತಿರುವುದು ಕಳವಳಕಾರಿ ಎಂದರು.

ನಿವೃತ್ತ ಶಿಕ್ಷಕ ಎನ್.ಎಂ.ಹುಕ್ಕೇರಿ ಮಾತನಾಡಿ, ಕಲಿಸಿದ ಗುರುಗಳ ಬಗ್ಗೆ ಕೀಳರಿಮೆ ಇರಬಾರದು. ಗುರಿ ಸಾಧನೆ ಮತ್ತು ಸ್ವಾವಲಂಬಿ ಜೀವನಕ್ಕೆ ಗುರು ಮೂಲ ಕಾರಣ ಎಂಬುವುದನ್ನು ಮರೆಯಬಾರದು ಎಂದು ತಿಳಿಸಿದರು. ಮುಖ್ಯಶಿಕ್ಷಕ ಎಂ.ಕೆ.ಖೋತ ಮಾತನಾಡಿದರು.

ಹಳೆಯ ವಿದ್ಯಾರ್ಥಿಗಳಾದ ದೀಪಾ ಸಾವಂತ, ಐ.ಜಿ.ಹಾದಿಮನಿ, ಕೆ.ಬಿ.ಮಠದ, ಸ್ವಾತಿ ಕುಂಬಾರ, ಕಾವೇರಿ ತೋರಣಳ್ಳಿ, ಪ್ರಕಾಶ ಮನಗೂಳಿ, ಲಕ್ಷ್ಮಣ ನಾಗರಾಳೆ, ಸಂಜು ಬಂಬಲವಾಡಿ, ಜಾವಿದ ಫೆಂಡಾರಿ, ರಮೇಶ ಹನ್ನಬರ ಮಾತನಾಡಿದರು.

ಎಸ್.ಆರ್.ಕುದರಗಿ, ಬಿ.ಎಸ್.ಕಮತೆ, ಸವಿತಾ ಕೋತ್ಯಗೋಳ, ಎಂ.ಎಂ.ದೊಡಮನಿ, ಎಸ್.ಸಿ.ಚಿಮ್ಮಟ, ಎ.ಎಸ್.ಧನಗರ, ಐ.ಆರ್.ಸೈಯದ್, ಸುನೀಲ ಪಾಟೀಲ, ರಾಮು ಮರ‌್ಯಾಯಿ, ಇಲಿಯಾಸ್ ಮುಲ್ತಾನಿ, ಸಿದ್ದು ಮರ‌್ಯಾಯಿ, ಸಿದ್ರಾಮ ಜಿಪರೆ, ರಾಮು ಇಟ್ನಾಳೆ, ಯಾಸೀನ್ ಜಮಾದಾರ, ಲಕ್ಷ್ಮೀ ಕುಂಬಾರ, ವೀಣಾ ಪಡೆದ, ಅಂಜುಶ್ರೀ ಹಾಲಟ್ಟಿ, ರೇಷ್ಮಾ ಯಾದಗೂಡೆ, ಶೈಲಜಾ ಕಾಮಗೌಡ, ಕವಿತಾ ಕಟ್ಟಿಕಾರ, ಸುಜಾತಾ ಕಡಹಟ್ಟಿ, ಅಕವ್ವ ಸಕನ್ನವರ, ಅನಿತಾ ಕಾಮಗೌಡ, ಲಗಮಣ್ಣ ಕವಲಾಪುರೆ, ಲಕ್ಷ್ಮಣ ಈಟಿ ಇತರರಿದ್ದರು. ಕೀರ್ತಿ ಕಿಲೇದಾರ ಸ್ವಾಗತಿಸಿದರು. ಅಶೋಕ ಮನಗೂಳಿ ನಿರೂಪಿಸಿದರು.