ಕಂಪ್ಲಿ: ಅಂಗನವಾಡಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಅಂಗನವಾಡಿ ಕಾರ್ಯಕರ್ತೆಯರು ಶ್ರಮಿಸಬೇಕು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಮೆಟ್ರಿ ಗ್ರಾಮದಲ್ಲಿ ಭಾನುವಾರ 7ನೇ ಅಂಗನವಾಡಿ ಕೇಂದ್ರ, ಸಾರ್ವಜನಿಕ ಗ್ರಂಥಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಅಂಗನವಾಡಿಯಲ್ಲಿ ಮಕ್ಕಳ ಪೌಷ್ಟಿಕತೆ ಕಾಪಾಡುವುದರೊಂದಿಗೆ ಗುಣಾತ್ಮಕ ಶಿಕ್ಷಣದತ್ತಲೂ ಗಮನಹರಿಸಬೇಕು.
ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿಗೆ ಒತ್ತು ನೀಡಿದ್ದು ಅಂಗನವಾಡಿ, ಶಾಲೆ, ಕಾಲೇಜು, ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ವಸತಿ ಶಾಲೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಗ್ರಾಪಂ ಅಧ್ಯಕ್ಷೆ ಎಚ್.ಹೊನ್ನೂರಮ್ಮ ಗಂಗಾಧರ ಮಾತನಾಡಿದರು.
ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶಂಕ್ರಪ್ಪ, ಪ್ರಮುಖರಾದ ಎಚ್.ಕುಮಾರಸ್ವಾಮಿ, ಗಂಗಾಧರ, ನೇಣ್ಕಿ ಗಿರಿ, ಎಚ್.ಜಗದೀಶ, ಜಡೆಪ್ಪ, ಜಡೇಗೌಡ, ಚೌಡಪ್ಪ, ಗಾಳೆಪ್ಪ, ನಾಗೇಂದ್ರ, ಯರ‌್ರಿಸ್ವಾಮಿ, ಮಲ್ಲಿಕಾರ್ಜುನ ಇತರರಿದ್ದರು.