ಹಣಬರಹಟ್ಟಿ ಗ್ರಾಮದ ಪ್ರಾಥಮಿಕ ಶಾಲೆಗೆ ಚ.ಕಿತ್ತೂರ ಶಾಸಕ ಮಹಾಂತೇಶ ದೊಡಗೌಡರ ಭೇಟಿ ನೀಡಿ ವಠಾರ ಶಾಲೆ ವಿನೂತನ ಕಾರ್ಯಕ್ರಮ ವೀಕ್ಷಿಸಿದರು. 
ಜಿಲ್ಲೆ

ವಿದ್ಯಾಗಮ ಯೋಜನೆಗೆ ಶಾಸಕ ಮಹಾಂತೇಶ ಮೆಚ್ಚುಗೆ

ಮಲ್ಲಾಪುರ ಕೆ.ಎನ್: ಸಮೀಪದ ಹಣಬರಹಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಶಾಸಕ ಮಹಾಂತೇಶ ದೊಡಗೌಡರ ಇತ್ತೀಚೆಗೆ ಭೇಟಿ ನೀಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಕಾರ್ಯಕ್ರಮ ವಿದ್ಯಾಗಮ ಯೋಜನೆಯ ವಠಾರ ಶಾಲೆಯ ವಿನೂತನ ಪರಿಕಲ್ಪನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿವಿಧ ಯೋಜನೆ ಜಾರಿಗೊಳಿಸಿದೆ. ಸದುಪಯೋಗ ಪಡೆಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು. ಮುಖ್ಯಶಿಕ್ಷಕರಾದ ಅರ್ಜುನ ಕಡೆಟ್ಟಿ, ವಿ.ಜೆ.ಮುತ್ತಲಮರಿ, ಶಿಕ್ಷಕರಾದ ಚಿದಾನಂದ ವಾರಿ, ಎ.ಐ.ಉಳವಿ, ವಿಠ್ಠಲ ಬಿರಗಡ್ಡಿ, ದಯಾನಂದ ಬಡವಣ್ಣವರ, ಡಾ.ಸಂತೋಷ ಗೋವಿ, ಲಕ್ಷ್ಮಣ ಮಾಸ್ತಮರ್ಡಿ, ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.