ಜಿಲ್ಲೆ

ಶಿಕ್ಷಣಕ್ಕೆ ಅದ್ಭುತ ಶಕ್ತಿ ಇದೆ : ಡಾ.ಬಿನ್ನಾಳ

Gadag - Shivanand Hiremath

ಗದಗ: ವ್ಯಕ್ತಿತ್ವ ವಿಕಸನಗೊಳಿಸುವ ಹಾಗೂ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೇರಿಸುವ ಅದ್ಭುತ ಶಕ್ತಿ ಶಿಕ್ಷಣಕ್ಕಿದೆ ಎಂದು ಗದುಗಿನ ಅರವಳಿಕೆ ತಜ್ಞೆ ಡಾ.ರೇಣುಕಾ ಬಿನ್ನಾಳ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಬೆಟಗೇರಿಯ ಬೆಥನಿ ಎಜ್ಯುಕೇಶನ್ ಸೊಸೈಟಿಯ ಅಮೃತ ಮಹೋತ್ಸವ ಹಾಗೂ ಲೋಯಲಾ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘಟನೆಯನ್ನು ಲೋಯಲಾ ಶಾಲೆಯ ಹಳೆ ವಿದ್ಯಾರ್ಥಿನಿಯಾಗಿ, ಮುಖ್ಯ ಅತಿಥಿಯಾಗಿ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಮಾತನಾಡಿದರು.
ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಮುಖ್ಯ ಅತಿಥಿ ಡಾ.ಹಿರಾಲಾಲ ಜನಗಿ ಮಾತನಾಡಿ ಲೋಯಲಾ ಶಾಲೆ ಇಂದು ಬಹಳಷ್ಟು ಪ್ರಗತಿ ಸಾಧಿಸಿದ್ದಕ್ಕೆ ಹೆಮ್ಮೆ ಎನ್ನಿಸುವದು. ಇಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಯಾರಿಗಾದರೂ ಕಲಿಕೆಗೆ ಆರ್ಥಿಕ ಸಹಾಯ ಅಗತ್ಯವಿದ್ದಲ್ಲಿ ಹಳೆ ವಿದ್ಯಾರ್ಥಿಗಳ ಸಂಘವು ಸಹಾಯ ಹಸ್ತ ಚಾಚುವದು ಎಂದರು.
ಲೋಯಲಾ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯನಿ ಸಿಸ್ಟರ್ ರಿನಿತಾ ಬಿ.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಲೋಯಲಾ ಸಮೂಹ ಸಂಸ್ಥೆಯ ಮುಖ್ಯಸ್ಥೆ ಸಿಸ್ಟರ್ ಲಿಂಡಾ ಬಿ.ಎಸ್ ಸಂದರ್ಭೋಚಿತವಾಗಿ ಮಾತನಾಡಿ ಲೋಯಲಾ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದೆ. ಹಿರಿಯ ಮತ್ತು ಅನುಭವಿಕ ಶಿಕ್ಷಕ ಶಿಕ್ಷಕಿಯರು ಶಾಲೆಯ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉತ್ತಮ ಫಲಿತಾಂಶವನ್ನು ತೆಗೆದಿದ್ದಾರೆ ಎಲ್ಲರೂ ಅಭಿನಂದನಾರ್ಹರು. ಹಳೆ ವಿದ್ಯಾರ್ಥಿಗಳ ಸಂಘ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.
ವೇದಿಕೆಯ ಮೇಲೆ ಹಳೆ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಡಾ.ಶರಣು ಆಲೂರ, ಖಜಾಂಚಿ ಶ್ರೀಮತಿ ಲತಾ ಬಸವಾ, ಜಂಟಿ ಖಜಾಂಚಿ ಶ್ರೀಕೃಷ್ಣ ಸಮೀರ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿದ ಸಾಮೂಹಿಕ ನೃತ್ಯಗಳು ಜರುಗಿದವು. ಬಸವರಾಜ ಕುಂಬಾರ ನಿರೂಪಿಸಿದರು ಕೊನೆಗೆ ಶಿವಾನಂದ ಬಸನಗೌಡರ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡಿದ್ದರು.