ಕೋಲಾರ : ರಾಜ್ಯದಲ್ಲಿ 1ರಿಂದ 5ನೇ ತರಗತಿ ಪ್ರಾರಂಭಿಸಲು ಸರ್ಕಾರ ನಿರ್ಧರಿಸುವ ಮುನ್ನವೇ ಕೆಲವು ಖಾಸಗಿ ಶಾಲೆಗಳು ತರಗತಿ ಆರಂಭಿಸಿರುವ ಬಗ್ಗೆ ವಾಹಿತಿ ಲಭ್ಯವಾಗಿದ್ದು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುವಾರ್ ಹೇಳಿದರು.
ಮಾಲೂರು ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ವಾತನಾಡಿ, 1ರಿಂದ 5ನೇ ತರಗತಿ ಆರಂಭಿಸುವ ಸಂಬಂಧ ಖಾಸಗಿ ಶಿಕ್ಷಣ ಸಂಸ್ಥೆಗಳು ಹೈಕೋರ್ಟ್‌ನಲ್ಲಿ ಹೂಡಿರುವ ದಾವೆ ವಿಚಾರಣೆ ವಾ.24ಕ್ಕೆ ಬರಲಿದ್ದು, ತೀರ್ಪು ಬರುವವರೆಗೆ ಕಾಯದೆ ಆತುರ ತೋರುತ್ತಿರುವುದೇಕೆ ಎಂದರು.
ಆರೋಗ್ಯ ಇಲಾಖೆಯೊಂದಿಗೆ ಚರ್ಚೆ: ರಾಜ್ಯದಲ್ಲಿ 1ರಿಂದ 5ನೇ ತರಗತಿ ಪ್ರಾರಂಭಕ್ಕೆ ಅನೇಕರಿಂದ ಒತ್ತಡ ಬರುತ್ತಿದ್ದರೂ ಕರೊನಾ ವ್ಯಾಪಿಸುತ್ತಿರುವುದರಿಂದ ಆರೋಗ್ಯ ಇಲಾಖೆ ಸಲಹೆ ಪಡೆದು ಸೂಕ್ತ ತೀಮಾನ ತೆಗೆದುಕೊಳ್ಳಲಾಗುವುದು ಎಂದರು. ಶಾಲೆ ಪ್ರಾರಂಭವಾಗಬೇಕೆಂಬ ಸದಾಶಯದ ಜತೆಗೆ ಮಕ್ಕಳ ಯೋಗ ಕ್ಷೇಮವೂ ಸರ್ಕಾರಕ್ಕೆ ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದೆ. 10 ದಿನಗಳ ಹಿಂದೆ ಕರೊನಾ ಸೋಂಕಿನ ಸಂಖ್ಯೆ 350ಕ್ಕೆ ಇಳಿದಿತ್ತು. ಈಗ 700ಕ್ಕೆ ಏರಿಕೆಯಾಗಿರುವುದರಿಂದ ಮಕ್ಕಳ ಹಿತ ಕಾಪಾಡುವುದು ಎಲ್ಲರ ಹೊಣೆ. ಆರೋಗ್ಯ ಇಲಾಖೆ ತಜ್ಞರ ಅಭಿಪ್ರಾಯ ತಿಳಿದು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕೇಂದ್ರದಿಂದ ಸೂಚನೆ ಇಲ್ಲ: ಈಗಾಗಲೆ ಪ್ರಾರಂಭವಾಗಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಪ್ರಾರಂಭಕ್ಕೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ, ಅಲ್ಲಿಂದ ಸೂಚನೆ ಇಲ್ಲದ ಕಾರಣ ಯೋಜನೆಗೆ ಚಾಲನೆ ನೀಡಿಲ್ಲ, ಹಸಿರು ನಿಶಾನೆ ಸಿಕ್ಕ ಕೂಡಲೇ ಬಿಸಿಯೂಟ ವ್ಯವಸ್ಥೆ ವಾಡಲಾಗುವುದು ಎಂದರು. ಕರೊನಾದಿಂದ ಈ ಸಾಲಿನ ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಗೆ ಅನುದಾನ ಕಡಿಮೆಯಾಗಿದೆ, ಆದರೂ ಇಲಾಖೆ ಕಾರ್ಯಕ್ರಮಗಳಿಗೆ ಹಿನ್ನಡೆಯಾಗದಂತೆ ಎಚ್ಚರವಹಿಸಿದ್ದು ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಿ ಹಣಕಾಸಿನ ನೆರವು ಪಡೆಯಲಾಗುವುದು ಎಂದರು.
ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳೂ ಮುಖ್ಯ
ಮಾಲೂರು : ಸರ್ಕಾರಿ ಶಾಲೆಗಳು ಅಂಕಲಾಯಗಳಾದರೆ ಸಾಲದು ಸಮಾಜದ ಸಮಸ್ಯೆಗಳನ್ನು ಎದುರಿಸಿ ಪರಿಹರಿಸುವ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಕೊಠಡಿ ಮತ್ತು ಸರ್ಕಾರಿ ಉನ್ನತೀಕರಿಸಿದ ಮಾದರಿ ಬಾಲಕಿಯರ ಪ್ರಾಥಮಿಕ ಶಾಲೆ ಕಟ್ಟಡದ ಉದ್ಘಾಟನೆ ಮತ್ತು ಹಸ್ತಾಂತರ ನೆರವೇರಿಸಿ ಮಾತನಾಡಿದರು.
ಜನಪ್ರತಿನಿಧಿಗಳು ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಿದರೆ ಆರೋಗ್ಯಯುತ ಸಮಾಜ ನಿರ್ಮಾಣ ವಾಗುವುದರೊಂದಿಗೆ ಅನೇಕ ಸಮಸ್ಯೆ ನಿವಾರಣೆಯಾಗುತ್ತದೆ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ಅಗತ್ಯ ಸಹಕಾರ : ಒಸಾಟ್ ದಾನದತ್ತಿ ಸಂಸ್ಥೆ ನಿರ್ಮಿಸುತ್ತಿರುವ ಸರ್ಕಾರಿ ಶಾಲಾ ಕಟ್ಟಡಗಳಿಗೆ ಬೇಕಾಗುವ ಅಗತ್ಯ ಸಹಕಾರವನ್ನು ಶಿಕ್ಷಣ ಇಲಾಖೆ ನೀಡಲಿದೆ. ಅವಶ್ಯಕತೆಯಿರುವ ಕಡೆ ಸಂಸ್ಥೆ ಶಾಲಾ ಕಟ್ಟಡಗಳ ನಿರ್ವಾಣ ವಾಡಬೇಕು. ರಾಜ್ಯದಲ್ಲಿ ಕರೊನಾ ವೇಳೆ 3 ಸಾವಿರ ಕೇಂದ್ರಗಳಲ್ಲಿ 8.50 ಲಕ್ಷ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವಾಗ ಅಗತ್ಯ ಸೌಲಭ್ಯ ಕಲ್ಪಿಸಲು ಸಹಕರಿಸಿದ ಭಾರತ್ ಸ್ಕೌಟ್ಸ್ -ಗೈಡ್ಸ್ ಸಂಸ್ಥೆ ಮತ್ತು ಶಿಕ್ಷಕರ ಕಾರ್ಯ ಶ್ಲಾನೀಯ ಎಂದು ಸುರೇಶ್‌ಕುಮಾರ್ ಹೇಳಿದರು
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ತಾಲೂಕಿನಲ್ಲಿ ಸುಮಾರು 14.50 ಕೋಟಿ ರೂ. ವೆಚ್ಛದಲ್ಲಿ ಶಾಲೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ವಾಸ್ತಿ ಗ್ರಾಮದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸ್ಮರಣಾರ್ಥ ಅವರ ಹೆಸರಿನಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ವಸತಿ ಶಾಲೆ ನಿರ್ಮಾಣ ಮಾಡಲಾಗುತ್ತಿದೆ. ಜಿಪಂ ಮತ್ತು ತಾಪಂಗಳಿಗೆ ಸರ್ಕಾರದಿಂದ ಬರುವ ಅನುದಾನದಲ್ಲಿ ಶೇ.10 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೀಸಲಿಡಲು ಕೆಡಿಪಿ ಸಭೆಯಲ್ಲಿ ತೀರ್ವಾನ ಕೈಗೊಳ್ಳಲಾಗಿದೆ ಎಂದರು.
ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಎನ್.ಶ್ರೀರಾಮ, ತಹಸೀಲ್ದಾರ್ ಮಂಜುನಾಥ್, ಪುರಸಭೆ ಅಧ್ಯಕ್ಷ ಮುರಳೀಧರ್, ಉಪಾಧ್ಯಕ್ಷೆ ಭಾರತಮ್ಮಶಂಕರಪ್ಪ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸತೀಶ್ ಆರಾಧ್ಯ, ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ಪುರಸಭೆ ಸದಸ್ಯರಾದ ಇಮ್ತಿಯಾಜ್‌ಖಾನ್, ಎಂ.ವಿ.ವೇಮನ, ಪರಮೇಶ್, ಓಸಾಟ್ ದಾನದತ್ತಿ ಸಂಸ್ಥೆ ಪದಾಧಿಕಾರಿ ವಾದಿರಾಜ್‌ಭಟ್, ಬಿಇಒ ಕೃಷ್ಣಮೂರ್ತಿ, ಪ್ರಾಶುಂಪಾಲರಾದ ಸಿದ್ದಪ್ಪ, ರಾಮಚಂದ್ರ ಇದ್ದರು.