ಜಿಲ್ಲೆ

Education Minister 15ಸಾವಿರ ಶಿಕ್ಷಕರ ನೇಮಕಕ್ಕೆ ಸಿಎಂಗೆ ಪ್ರಸ್ತಾವನೆ: ಮಧು ಬಂಗಾರಪ್ಪ

ಶಿರಸಿ: ರಾಜ್ಯದಲ್ಲಿ ಇನ್ನೂ 15ಸಾವಿರ ಶಿಕ್ಷಕರ ಬೇಡಿಕೆಯನ್ನು ಮುಖ್ಯಮಂತ್ರಿಯವರಿಗೆ ನೀಡಿದ್ದೇವೆ ಎಂದು ಶಿಕ್ಷಣ ಸಚಿವ Education Minister ಮಧು ಬಂಗಾರಪ್ಪ ತಿಳಿಸಿದರು.
ನಗರದಲ್ಲಿ ಸೋಮವಾರ ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. ಕರ್ನಾಟಕ ಭಾಗ, ಅನುದಾನಿತ ಶಾಲೆಗಳನ್ನು ಒಳಗೊಂಡು, ವಿಷಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಅಗತ್ಯವಿದೆ. ಆಗ ಇಲಾಖೆ ಒಂದು ಹಂತಕ್ಕೆ ಮೇಲ್ದರ್ಜೆಗೆ ಬರುತ್ತದೆ ಎಂದು  ಹೇಳಿದರು.
ಬಾರಿ ಮಳೆಯಿಂದ ಮಲೆನಾಡಿನ ಶಾಲಾ ಕಟ್ಟಡಗಳಿಗೆ ದೊಡ್ಡ ಮಟ್ಟದ ಹಾನಿ ಆಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಂತಹ ಕಟ್ಟಡಗಳನ್ನು ಪದೇಪದೇ ದುರಸ್ತಿ ಮಾಡುವುದಕ್ಕಿಂತ ಹೆಚ್ಚಾಗಿ ಶಾಶ್ವತ ಕಟ್ಟಡಗಳ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತೇವೆ. ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮುಂತಾದ ಮಲೆನಾಡಿನ ಪ್ರದೇಶದಲ್ಲಿ ಮಳೆಯಿಂದ ಶಾಲಾ ಕೊಠಡಿಗಳ ಪುನರ್ ನಿರ್ಮಾಣಕ್ಕೆ ಒಂದೇ ಬಾರಿ ಅನುದಾನ ಸಾಕಾಗುವುದಿಲ್ಲ. ಈ ಕುರಿತೂ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುತ್ತೇನೆ ಎಂದರು.

3 ಪರೀಕ್ಷೆಯಿಂದ ಅನುಕೂಲವಾಯ್ತು: Education Minister

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಗೆ ಮೂರು ಪರೀಕ್ಷೆಗಳ ಅವಕಾಶ ಕಲ್ಪಿಸಿದ್ದರಿಂದ ಪಿಯುಸಿಯಲ್ಲಿ 80ಸಾವಿರ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ 60ಸಾವಿರ ಮಕ್ಕಳು ಪಾಸಗುವಂತಾಯಿತು. ಇದರಿಂದ ತುಂಬಾ ಅನುಕೂಲವಾಯಿತು. ಆತ್ಮವಿಶ್ವಾಸ ಬಂತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ ಎಂದರು.
ಮಕ್ಕಳು ಶಾಲೆಗಳಿಗೆ ಬಂದರೆ ಶಿಕ್ಷಕರಿಲ್ಲ ಎನ್ನುವಂತಾಗಬಾರದು ಎಂದು ಪ್ರಾರಂಭಿಕ ಹಂತದಲ್ಲೇ 43ಸಾವಿರ ಅತಿಥಿ ಶಿಕ್ಷಕರನ್ನು ನೀಡಿದ್ದೇವೆ. 13500ಖಾಯಂ ಶಿಕ್ಷಕರ ಹುದ್ದೆ ತುಂಬಿದ್ದೇವೆ. 5800ಶಿಕ್ಷಕರು ನೇಮಕ ಪ್ರಕ್ರಿಯೆ ನಡೆಸಿದ್ದೇವೆ ಎಂದರು. ಕಲಿಕೆಯಲ್ಲಿ ಹಿಂದೆ ಇರುವಂತವರಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಬಿಸಿಯೂಟ, ಹಾಲು ಹೀಗೆ ಸೌಲಭ್ಯ ಮಲೆನಾಡಿನ ಭಾಗದಲ್ಲಿ ಕಾಲು ಸಂಕ ಹೆಚ್ಚು ಬಂದಿದೆ. ಮತ್ತೆ ಅವಶ್ಯಕತೆಯಿದ್ದರೆ ಅದನ್ನು ಒದಗಿಸುತ್ತೇವೆ. ವಿದ್ಯಾರ್ಥಿಗಳ ಓಡಾಟಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು Education Minister ಮಧು ಬಂಗಾರಪ್ಪ ಹೇಳಿದರು.
ಮುಂದಿನ ಕೆಲವು ವರ್ಷಗಳಲ್ಲಿ ಎರಡು ಗ್ರಾಪಂಗಳಿಗೆ ಒಂದು ಪಬ್ಲಿಕ್ ಶಾಲೆಯನ್ನು ಮಾಡುವ ಚಿಂತನೆಯಿದೆ. ಅದನ್ನು ಮಾಡಿದರೆ ಊರಿಗೊಂದು ಶಾಲೆ ಎಂದು ಹಿಂದೆ ಇದ್ದಂತೆ ಆಗುತ್ತದೆ.
ಸುತ್ತಲಿನ ಮಕ್ಕಳು ಬರುವುದಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಇಲಾಖೆಗೂ ಅನುಕೂಲವಾಗುತ್ತದೆ ಎಂದರು. ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಡಿಡಿಪಿಐ ಬಸವರಾಜ ಇತರರು ಸಭೆಯಲ್ಲಿದ್ದರು.