ಜಿಲ್ಲೆ

ಮಗುವಿನಲ್ಲಿರುವ ಪ್ರತಿಭೆ ಹೊರಗೆಳೆಯುವುದೇ ಶಿಕ್ಷಣ

ಚಿಕ್ಕೋಡಿ: ದೇಶ ಕಟ್ಟುವವರು ಶಿಕ್ಷಕರೇ ಹೊರತು ಬೇರಾರೂ ಅಲ್ಲ. ಶಿಕ್ಷಣ, ರಾಜಕೀಯ, ನ್ಯಾಯಾಂಗದಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕಿದೆ ಎಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ಉತ್ತರಾಕಾರಿ ನಿಜಲಿಂಗೇಶ್ವರ ದೇವರು ಹೇಳಿದರು.

ಚಿಕ್ಕೋಡಿ ಪಟ್ಟಣದಲ್ಲಿ ಸಿ.ಬಿ. ಗಂಗಾಲ ಶಿಕ್ಷಕ ಪ್ರಶಸ್ತಿಯನ್ನು ಶಿಕ್ಷಕ ಪ್ರಕಾಶ ಪೂರ್ವೆ ಅವರಿಗೆ ನಿಡಸೋಸಿ ಮಠದ ಉತ್ತರಾಕಾರಿ ನಿಜಲಿಂಗೇಶ್ವರ ದೇವರು ವಿತರಿಸಿದರು. ಸೈಯದ್ ಇಷಾಕ್, ಮಹೇಶ ಭಾತೆ ಇತರರಿದ್ದರು.

ಪಟ್ಟಣದ ಸಿಎಲ್‌ಇ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಶಿಕ್ಷಕರ ದಿನಾಚರಣೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ  ಸಿ.ಬಿ. ಗಂಗಾಲ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಶಿಕ್ಷಣ ಎಂದರೆ ಮಗುವಿಗೆ ಹೊರಗಿನ ವಿಷಯ ತಲೆಗೆ ತುಂಬುವುದಲ್ಲ. ಮಗುವಿನೊಳಗಿರುವ ಪರಿಪೂರ್ಣತೆ ಹೊರತೆಗೆಯುವುದಾಗಿದೆ ಎಂದರು.  

ಮೈಸೂರಿನ ಕನ್ನಡಪರ ಹೋರಾಟಗಾರ ಸೈಯದ್ ಇಷಾಕ್ ಮಾತನಾಡಿ, ಕನ್ನಡ ಬೆಳೆಸುವ ಸಲುವಾಗಿ ಕನ್ನಡ ದಿನಪತ್ರಿಕೆ ಓದಲು ಗ್ರಂಥಾಲಯ ಸ್ಥಾಪಿಸಿದ್ದು ತೃಪ್ತಿ ತಂದಿದೆ ಎಂದರು. ಗಳತಗಾ ಗ್ರಾಮದ ಹಳ್ಳದಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪ್ರಕಾಶ ಪೂರ್ವೆ ಅವರಿಗೆ ಸಿ.ಬಿ. ಗಂಗಾಲ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

15ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನುಡಿತೇರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಹೆಸ್ಕಾಂ ಮಾಜಿ ನಿರ್ದೇಶಕ ಮಹೇಶ ಭಾತೆ, ಡಾ.ಪಿ.ಜಿ. ಕೆಂಪಣ್ಣವರ, ಡಾ.ದಯಾನಂದ ನೂಲಿ, ಶ್ರೀಪಾದ ಕುಂಬಾರ, ಆಡಳಿತಾಕಾರಿ ಸಾಗರ ಬಿಸ್ಕೊಪ್ಪ, ಡಾ. ಸುಬ್ರಾವ ಎಂಟೆತ್ತಿನವರ, ಡಾ.ಸುರೇಶ ಉಕ್ಕಲಿ, ಬಿ.ಡಿ. ರೋಕಡೆ,  ಚಂದ್ರಶೇಖರ ಅರಬಾಂವಿ ಇತರರಿದ್ದರು.