ಇಂಡಿ ಪಟ್ಟಣದ ಗುರುಭವನದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರರ ಜಯಂತಿ ಕಾರ್ಯಕ್ರಮದಲ್ಲಿ ಅನುರಾಧ ವಸದ ಮಾತನಾಡಿದರು. ಶಿಕ್ಷಕ ಆರ್.ಬಿ. ಬಿರಾದಾರ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಹಾಂಗೀರ ಸೌದಾಗರ, ತಹಸೀಲ್ದಾರ್ ಬಿ.ಎಸ್. ಕಡಕಬಾವಿ ಇತರರಿದ್ದರು. 
ಜಿಲ್ಲೆ

ವ್ಯಕ್ತಿ ಸಾಮರ್ಥ್ಯ ಸಾಧನೆಗೆ ಶಿಕ್ಷಣವೇ ಅಸ್ತ್ರ

ಇಂಡಿ: ಅಂಬೇಡ್ಕರ್ ಅವರ ಜೀವನ ಪ್ರತಿಯೊಬ್ಬ ಮನುಷ್ಯನಿಗೆ ಆದರ್ಶವಾಗಬೇಕೆಂದು ಕಂದಾಯ ಉಪ ವಿಭಾಗಾಧಿಕಾರಿ ಅನುರಾಧ ವಸದ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಸೋಮವಾರ ನಡೆದ ಡಾ. ಬಿ.ಆರ್. ಅಂಬೇಡ್ಕರ್ 134ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ. ಬಿ.ಆರ್. ಅಂಬೇಡ್ಕರ್‌ರವರು ದಾರ್ಶನಿಕ ಭಾರತೀಯ ಸುಧಾರಕ, ಗುಲಾಮಗಿರಿ ತೊಡೆದು ಹಾಕಲು ಶಿಕ್ಷಣವೇ ಒಂದು ಅಸ್ತ್ರವೆಂದು ನಂಬಿದ್ದರು. ಇದು ಶೋಷಿತರಲ್ಲಿ ಜಾಗೃತಿ ಮೂಡಿಸಿ ಅವರ ಸಾಮಾಜಿಕ ಸ್ಥಿತಿ, ಆರ್ಥಿಕ ಸುಧಾರಣೆ ಮತ್ತು ಅವರು ರಾಜಕೀಯ ಸ್ವಾತಂತ್ರೃ ಪಡೆಯಬೇಕೆಂಬುದು ಅವರ ಅಭಿಲಾಷೆಯಾಗಿತ್ತು. ಅಂಬೇಡ್ಕರ್ ಅವರ ಪ್ರಕಾರ ಸಮಾಜಕ್ಕೆ ಅನನ್ಯ ಕೊಡುಗೆ ನೀಡುವಂತೆ ಮಾಡುವ, ಪ್ರತಿ ವ್ಯಕ್ತಿಯಲ್ಲಿ ಅನನ್ಯ ಸಾಮರ್ಥ್ಯ ಸಾಧಿಸಲು ನೆರವಾಗುವುದೇ ಶಿಕ್ಷಣದ ಗುರಿಯಾಗಬೇಕು ಎಂದರು.

ನಾದ ಕೆಡಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಆರ್.ಬಿ. ಬಿರಾದಾರ ಮಾತನಾಡಿ, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಒಬ್ಬ ವ್ಯಕ್ತಿಯಲ್ಲ, ಅವರೊಬ್ಬರು ಮಹಾನಶಕ್ತಿ. ಜ್ಞಾನದ ಶಿಖರವನ್ನೇರಿ ಕುಳಿತ ಜ್ಞಾನಸೂರ್ಯ, ಕಠಿಣ ಪರಿಶ್ರಮ ಮತ್ತು ಸ್ವ ಸಾಮರ್ಥ್ಯದಿಂದ ಈ ದೇಶದ ಅಗ್ರಗಣ್ಯ ರಾಷ್ಟ್ರನಾಯಕರಾಗಿದ್ದಾರೆ ಎಂದರು.

ರಮೇಶ ನಿಂಬಾಳಕರ ಮಾತನಾಡಿದರು.

ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಹಾಂಗೀರ ಸೌದಾಗರ, ತಹಸೀಲ್ದಾರ್ ಬಿ.ಎಸ್. ಕಡಕಬಾವಿ, ತಾಪಂ ಇಒ ನಂದೀಪ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಮಾಂತೇಶ ಹಂಗರಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಆಲಗೂರ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಉಮೇಶ ಲಮಾಣಿ, ಸಂಗಮೇಶ ಮೇಡೆಗಾರ, ಎಸ್.ಆರ್. ನಡಗಡ್ಡಿ, ಇಲಿಯಾಸ್ ಬೋರಾಮಣಿ, ಪ್ರಶಾಂತ ಕಾಳೆ, ಭೀಮಣ್ಣ ಕವಲಗಿ, ಜಾವೇದ ಮೋಮಿನ, ಧರ್ಮರಾಜ ಸಾಲೋಟಗಿ, ಭೀಮಾಶಂಕರ ಮೂರಮನ, ಮಹಾದೇವಪ್ಪ ಏವೂರ, ಎಚ್.ಎಸ್. ಪಾಟೀಲ, ದಯಾನಂದ ಮಠ, ಸುಮಂಗಲಾ ಗುತ್ತರಗಿಮಠ ಇತರರಿದ್ದರು.

ಇದೇ ವೇಖೆ ಪಿಯುಸಿ ದ್ವಿತೀಯ ವರ್ಷದಲ್ಲಿ ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯನ್ನು ಸನ್ಮಾನಿಸಲಾಯಿತು.

ಬಸವರಾಜ ಗೋರನಾಳ ನಿರೂಪಿಸಿದರು. ಉಮೇಶ ಲಮಾಣಿ ಸ್ವಾಗತಿಸಿದರು.