ಲೋಕಾಪುರ ಪಟ್ಟಣದ ವೆಂಕಟಾಪುರ ಓಣಿಯಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮದಿನ ಆಚರಿಸಲಾಯಿತು. ಕಾಶಿನಾಥ ನಿರ್ವಾಣಿ, ಲೋಕಣ್ಣ ಮುದ್ದಾಪುರ, ತುಳಜಪ್ಪ ಮುದ್ದಾಪುರ, ಪ್ರಭು ಹೊನವಾಡ ಇತರರು ಇದ್ದಾರೆ. 
ಜಿಲ್ಲೆ

ಮಹಿಳಾ ವಿಮೋಚನೆಗೆ ಶಿಕ್ಷಣವೇ ಕೀಲಿಕೈ

ಲೋಕಾಪುರ: ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಅವರ ಹಕ್ಕಿಗಾಗಿ ಹೋರಾಟ ಮಾಡುವುದು ಕಷ್ಟವಾಗಿದ್ದ ಸಮಯದಲ್ಲಿ ಸಂಕಷ್ಟಗಳನ್ನು ಮೆಟ್ಟಿ ನಿಂತು ಮಹಿಳಾಪರ ಹೋರಾಟ ಮಾಡಿದ ಸಾವಿತ್ರಿಬಾಯಿ ಫುಲೆ ಅವರ ಧೈರ್ಯಮಾದರಿ ಎಂದು ಮುಧೋಳ ತಾಲೂಕು ಮಾಳಿ ಸಮಾಜದ ಅಧ್ಯಕ್ಷ ಕಾಶಿನಾಥ ನಿರ್ವಾಣಿ ಹೇಳಿದರು.

ವೆಂಕಟಾಪುರ ಓಣಿಯಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಅಕ್ಷರ ಕ್ರಾಂತಿ ಆರಂಭಿಸಿ ಅಕ್ಷರದವ್ವ, ಶಿಕ್ಷಣ ಮಾತೆ ಎಂಬ ಕೀರ್ತಿಗೆ ಪಾತ್ರರಾದ ದೇಶದ ಮೊದಲು ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರು ಮಹಿಳೆಯ ವಿಮೋಚನೆಗೆ ಶಿಕ್ಷಣವೇ ಕೀಲಿಕೈ ಎಂದು ನಂಬಿದ್ದರು ಎಂದರು.

ಲೋಕಣ್ಣ ಮುದ್ದಾಪುರ, ತುಳಜಪ್ಪ ಮುದ್ದಾಪುರ, ಹೊಳಬಸು ಮಾಳಿ, ಪ್ರಭು ಹೊನವಾಡ, ನಿಂಗಪ್ಪ ದುಂಡಪ್ಪಗೋಳ, ದುಂಡಪ್ಪ ಬೆಳಗಲಿ, ರಾಮಕುಮಾರ ಮುದ್ದಾಪುರ, ನಿಂಗಪ್ಪ ಬಳಿಗಾರ, ಶಿದ್ದು ವಜ್ರಮಟ್ಟಿ ಇನ್ನಿತರರಿದ್ದರು.