ಇಂಡಿಯಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾದಿಂದ ವಿಪ್ರ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪಂ. ಅನಂತಾಚಾರ್ಯ ಅಕಮಂಚಿ, ಸತೀಶ್ಚಂದ್ರ ಕುಲಕರ್ಣಿ, ಆರ್.ವಿ. ದೇಶಪಾಂಡೆ, ಜೆ.ಎನ್. ನಾಡಗೌಡ, ರಾಘವೇಂದ್ರ ಕುಲಕರ್ಣಿ ಇತರರಿದ್ದರು. 
ಜಿಲ್ಲೆ

ವಿದ್ಯಾರ್ಜನೆ ಶ್ರೇಷ್ಠ ದಾನ

ದತ್ತಾತ್ರೇಯ ಪಿ ಕುಲಕರ್ಣಿ

ಇಂಡಿ: ಎಲ್ಲ ದಾನಗಳಲ್ಲಿ ವಿದ್ಯಾದಾನ ಶ್ರೇಷ್ಠ ಎಂದು ಹಿರೇಮಣ್ಣ್ಣೂರಿನ ವೇದೇಶತೀರ್ಥ ಸಂಸ್ಕೃತ ವಿದ್ಯಾಪೀಠದ ಕುಲಪತಿ ಪಂ. ಅನಂತಾಚಾರ್ಯ ಅಕಮಂಚಿ ಅಭಿಮತ ವ್ಯಕ್ತಪಡಿಸಿದರು.

ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ತಾಲೂಕು ಶಾಖೆಯಿಂದ ಪಟ್ಟಣದ ಸತ್ಯನಾರಾಯಣ ದೇವಸ್ಥಾನದ ಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನ ಮಾಡುವ ಕೆಲಸ ನಿರಂತರವಾಗಿ ನಡೆಯಬೇಕು. ಸನ್ಮಾನ ಮಾಡುವುದರಿಂದ ಪ್ರೋತ್ಸಾಹ ನೀಡುವುದರ ಜತೆ ಸಾಧನೆಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಂಟಿ ಕಾರ್ಯದರ್ಶಿ ಸತೀಶ್ಚಂದ್ರ ಕುಲಕರ್ಣಿ ಮಾತನಾಡಿ, ಮಹಾ ಸಭಾವತಿಯಿಂದ ಪ್ರತಿ ವರ್ಷ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವುದಲ್ಲದೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಹಣಕಾಸಿನ ನೆರವು ನೀಡಲು ತೀರ್ಮಾನಿಸಲಾಗಿದೆ ಎಂದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾದ ರೋಹಿತ ಕುಲಕರ್ಣಿ, ಗೌರಿ ಪಾಟೀಲ, ಗೌತಮಿ ಕುಲಕರ್ಣಿ, ಸುಪ್ರಿಯಾ ಕುಲಕರ್ಣಿ, ದೀಕ್ಷಾ ಪಾಟೀಲ, ದಿವಾಕರ ಕುಲಕರ್ಣಿ, ಅಕ್ಷತಾ ಕುಲಕರ್ಣಿ, ಶ್ರೇಯಾ ನಾಡಗೌಡ, ಸಮರ್ಥ ಜಹಾಗೀರದಾರ ಅವರನ್ನು ಸನ್ಮಾನಿಸಲಾಯಿತು.

ನ್ಯಾಯವಾದಿ ಆರ್.ವಿ. ದೇಶಪಾಂಡೆ, ನಿವೃತ್ತ್ತ ಮುಖ್ಯಗುರು ಜೆ.ಎನ್. ನಾಡಗೌಡ, ತಾಲೂಕು ಕಸಾಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಇದ್ದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದ ಸತೀಶ್ಚಂದ್ರ ಕುಲಕರ್ಣಿ ಅವರನ್ನು ಬ್ರಾಹಣ ಸಮಾಜದಿಂದ ಸನ್ಮಾನಿಸಲಾಯಿತು.