ಆನವೇರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಟಿಎಲ್‌ಎಂ ಮೇಳವನ್ನು ನಾಗೇಂದ್ರಪ್ಪ ಉದ್ಘಾಟಿದರು. ನಟರಾಜಪ್ಪ ಗೌಡ, ಎ.ಜಿ.ಚನ್ನಬಸಪ್ಪ ಗೌಡ, ಪಂಚಾಕ್ಷರಪ್ಪ, ಹರೀಶ್ ಇತರರಿದ್ದರು.  
ಜಿಲ್ಲೆ

ಶಿಕ್ಷಣ ಎಂಬುದು ಅಂಕ ಗಳಿಕೆಗಷ್ಟೇ ಸೀಮಿತವಲ್ಲ

Shivamogga - Desk - Vinayakumar D B

ಹೊಳೆಹೊನ್ನೂರು: ಶಿಕ್ಷಣದ ಜತೆಗೆ ಕ್ರೀಡೆ, ಸಾಹಿತ್ಯದಂತಹ ಬೇರೆ ಬೇರೆ ಕ್ಷೇತ್ರಗಳಲ್ಲೂ ಸಾಕಷ್ಟು ಅವಕಾಶವಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಬಿಇಒ ನಾಗೇಂದ್ರಪ್ಪ ಹೇಳಿದರು.

ಆನವೇರಿಯ ರೇಣುಕಾದೇವಿ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಟಿಎಲ್‌ಎಂ ಮೇಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣ ಎನ್ನುವುದು ಕೇವಲ ಅಂಕ ಗಳಿಸುವುದಷ್ಟೇ ಅಲ್ಲ. ಪಠ್ಯೇತರ ಚಟುವಟಿಗಳೂ ಸಹಕಾರಿ ಆಗುತ್ತವೆ. ಇದೇ ಕಾರಣಕ್ಕಾಗಿ ಶಿಕ್ಷಣ ಇಲಾಖೆಯು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲು ಸುಮಾರು 14 ವಿಭಾಗದಲ್ಲಿ ಸಹಪಠ್ಯ ಚಟುವಟಿಕೆಗಳನ್ನು ಅಳವಡಿಸಿದೆ. ಇದರಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ಸಹಾಯವಾಗುತ್ತದೆ ಎಂದರು.
ಗ್ರಾಪಂ ಅಧ್ಯಕ್ಷ ನಟರಾಜಪ್ಪ ಗೌಡ, ಎ.ಜಿ.ಚನ್ನಬಸಪ್ಪ ಗೌಡ, ಸಂಪನ್ಮೂಲ ವ್ಯಕ್ತಿ ಪಂಚಾಕ್ಷರಪ್ಪ, ಸಿಆರ್‌ಪಿ ಹರೀಶ್, ನಿವೃತ್ತ ಶಿಕ್ಷಕ ರಂಗಪ್ಪ, ನೇತ್ರಾವತಿ, ಪಣಿಯಾಚಾರ್ ಇತರರಿದ್ದರು.