ಕೂಡಲಸಂಗಮದ ಸಂಗಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಬೀಳೂರು ಗುರುಬಸವ ಸ್ವಾಮೀಜಿ ಅವರ ಶ್ರಾವಣ ಮಾಸ ಕಾರ್ಯಕ್ರಮದಲ್ಲಿ ಗಂಗಾಧರ ನರೆಗಲ್ಲ ಮಾತನಾಡಿದರು. ಅಕ್ಷರ ದಾಸೋಹ ವ್ಯವಸ್ಥಾಪಕ ಎಸ್.ಎಸ್.ಹುದ್ದಾರ, ನಿವೃತ್ತ ಮುಖ್ಯೋಪಾಧ್ಯಾಯ ಡಿ.ವಿ.ಶಿಕ್ಕೇರಿ, ಸಂಗಮೇಶ್ವರ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಬಿ.ಆರ್.ಚೌಗಲೆ, ಸಂಗಮೇಶ್ವರ ಪ್ರೌಢಶಾಲೆ ಮುಖ್ಯಗುರು ಎ.ವೈ.ಕೊಪ್ಪದ, ಸಂಗಮೇಶ್ವರ ಪ್ರಾಥಮಿಕ ಶಾಲೆ ಮುಖ್ಯಗುರು ಜಿ.ಬಿ.ಬಡಿಗೇರ ಇದ್ದರು. 
ಜಿಲ್ಲೆ

ಸುಂದರ ಬದುಕಿಗೆ ಶಿಕ್ಷಣ ಅಗತ್ಯ

ದತ್ತಾತ್ರೇಯ ಪಿ ಕುಲಕರ್ಣಿ

ಕೂಡಲಸಂಗಮ : ಸುಂದರ ಬದುಕಿಗೆ ಶಿಕ್ಷಣ ಅಗತ್ಯ. ಪ್ರತಿಯೊಬ್ಬ ವಿದ್ಯಾರ್ಥಿ ಶಿಕ್ಷಣ, ಸಂಸ್ಕಾರ ಪಡೆಯುವುದರ ಮೂಲಕ ಸುಂದರ ಬದುಕು ನಿರ್ಮಿಸಿಕೊಳ್ಳಬೇಕು ಎಂದು ಬಾಗಲಕೋಟೆ ಬಿವಿವಿ ಸಂಘದ ಆಡಳಿತ ಮಂಡಳಿ ಸದಸ್ಯ ಎಸ್.ಆರ್.ಮನಹಳ್ಳಿ ಹೇಳಿದರು.

ಸೋಮವಾರ ಕೂಡಲಸಂಗಮದ ಸಂಗಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಬೀಳೂರು ಗುರುಬಸವ ಸ್ವಾಮೀಜಿಯವರ ಶ್ರಾವಣ ಮಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವೇಶ್ವರ ವಿದ್ಯಾವರ್ಧಕ ಸಂಘವನ್ನು ಬೀಳೂರು ಗುರುಬಸವ ಸ್ವಾಮೀಜಿ ಸ್ಥಾಪಿಸಿದರು. ಅವರ ಸ್ಮರಣೆಯನ್ನು ಶ್ರಾವಣ ಮಾಸದಲ್ಲಿ ಮಾಡುತ್ತಿದ್ದು, ಬಸವೇಶ್ವರ ವಿದ್ಯಾವರ್ಧಕ ಸಂಘದ ಎಲ್ಲ ಶಾಲೆ, ಕಾಲೇಜುಗಳಲ್ಲಿ ಶ್ರಾವಣ ಮಾಸ ಕಾರ‌್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡಲಾಗುತ್ತದೆ ಎಂದರು.

ಬೀಳೂರು ಗುರುಬಸವ ಸ್ವಾಮೀಜಿ ಉತ್ಸವ ಸಮಿತಿ ಸದಸ್ಯ ಗಂಗಾಧರ ನರೆಗಲ್ಲ ಮಾತನಾಡಿ, ಸಂಸ್ಕೃತ ಪಾಠ ಶಾಲೆಯಿಂದ ಆರಂಭವಾದ ಬಸವೇಶ್ವರ ವಿದ್ಯಾವರ್ಧಕ ಸಂಘ ಇಂದು ಶಿಕ್ಷಣ ಕ್ಷೇತ್ರದ ಎಲ್ಲ ಕಾಲೇಜುಗಳನ್ನು ಹೊಂದಿದೆ. 170 ಅಂಗ ಸಂಸ್ಥೆಗಳನ್ನು ರಾಜ್ಯಾದ್ಯಂತ ಹೊಂದಿದ್ದು, ಪ್ರತಿ ವರ್ಷ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. 6 ರಿಂದ 7 ಸಾವಿರ ಶಿಕ್ಷಕರು ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿಯೇ ಹೆಸರು ಪಡೆದ ಸಂಘ ಇದಾಗಿದ್ದು, ಶತಮಾನೋತ್ಸವವನ್ನು ಆಚರಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ ಎಂದರು.

ಬಸವೇಶ್ವರ ವಿದ್ಯಾವರ್ಧಕ ಸಂಘದ ಅಕ್ಷರ ದಾಸೋಹ ವ್ಯವಸ್ಥಾಪಕ ಎಸ್.ಎಸ್.ಹುದ್ದಾರ, ನಿವೃತ್ತ ಮುಖ್ಯೋಪಾಧ್ಯಾಯ ಡಿ.ವಿ.ಶಿಕ್ಕೇರಿ, ಸಂಗಮೇಶ್ವರ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಬಿ.ಆರ್.ಚೌಗಲೆ, ಸಂಗಮೇಶ್ವರ ಪ್ರೌಢಶಾಲೆಯ ಮುಖ್ಯಗುರು ಎ.ವೈ.ಕೊಪ್ಪದ, ಸಂಗಮೇಶ್ವರ ಪ್ರಾಥಮಿಕ ಶಾಲೆ ಮುಖ್ಯಗುರು ಜಿ.ಬಿ.ಬಡಿಗೇರ ಮುಂತಾದವರು ಇದ್ದರು.