ಅಳವಂಡಿ: ಜೀವನದಲ್ಲಿ ಧಾರ್ಮಿಕ ಚಿಂತನೆ ಅಳವಡಿಸಿಕೊಂಡರೆ ಮನಃಶಾಂತಿ ವೃದ್ಧಿಸುತ್ತದೆ ಎಂದು ಮುಂಡರಗಿಯ ನಾಡೋಜ ಶ್ರೀ ಅನ್ನದಾನೇಶ್ವರ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ:ಮಕ್ಕಳ ಧಾರ್ಮಿಕ ಚಿಂತನೆ ಪ್ರಸಾರ
ಸಮೀಪದ ಮುರ್ಲಾಪುರದ ಶ್ರೀದೇವಿ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಹುಟ್ಟು ಸಾವಿನ ಮಧ್ಯೆ ಬದುಕು ಶ್ರೇಷ್ಠವಾಗಬೇಕಾದರೆ ಭಗವಂತನ ಸ್ಮರಿಸಬೇಕು. ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಳ್ಳುವುದರಿಂದ ಜೀವನ ಸಾರ್ಥಕವಾಗಲಿದೆ. ಸಮಾಜದಲ್ಲಿ ಭಗವಂತನಿಗೆ ಹೆದರಿ ಜೀವಿಸಬೇಕು ಹೊರತು ದುಷಿಸುವ ಜನರಿಂದಲ್ಲ. ಆಲಸ್ಯ ಬಿಟ್ಟು ಪರಿಶ್ರಮದ ಬದುಕು ಕಟ್ಟಿಕೊಳ್ಳಿ. ಇದು ನಿಮ್ಮನ್ನು ಗುರುತಿಸುವಂತೆ ಮಾಡುತ್ತದೆ. ಅಭಿವೃದ್ಧಿಗೆ ಶಿಕ್ಷಣ ಅವಶ್ಯಕ. ಆದ್ದರಿಂದ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ. ಯುವಕರು ಉತ್ಸಾಹದಿಂದ ಇರಬೇಕು ಎಂದರು.
ಮುಂಡರಗಿ ಮಠದ ಮೂಲಕತೃ ಶ್ರೀ ಅನ್ನದಾನೇಶ್ವರ ಶಿವಯೋಗಿಗಳು ಸ್ಥಾಪಿಸಿದ ರಾಜವಾಳ ಗ್ರಾಮದ ಮಠದಲ್ಲಿ ಶಿಲಾ ಮಂಟಪ ಜೀರ್ಣೊದ್ದಾರಕ್ಕೆ ಭಕ್ತರು ದೇಣಿಗೆ ಸಲ್ಲಿಸಿದರು.
ಪ್ರಮುಖರಾದ ಅಂದಾನಗೌಡ ಪೊಲೀಸ್ ಪಾಟೀಲ್, ಕೊಟ್ರೇಶ ಮೇಗಳಮನಿ, ಸುರೇಶ ಚನ್ನಳ್ಳಿ, ಉಮೇಶಗೌಡ, ಬಸವರಾಜ ಹಾರೋಗೇರಿ, ಗುರುಬಸಪ್ಪ ಮೇಗಳಮನಿ, ವೀರಣ್ಣ, ಮಲ್ಲಪ್ಪ ಮೇಗಳಮನಿ, ಬಸನಗೌಡ, ದೇವರಾಜ, ರಮೇಶ ವಾಲಿಕಾರ, ಹನುಮಂತಪ್ಪ ವಾಲಿಕಾರ, ದೇವಪ್ಪಗೌಡ, ಶರಣಪ್ಪ, ಹೊನ್ನಜ್ಜ, ಮುದಿಯಪ್ಪ, ಮಲ್ಲಪ್ಪ ಇತರರಿದ್ದರು.