ಕಿಕ್ಕೇರಿ ಹೋಬಳಿಯ ಕೃಷ್ಣಾಪುರ ಸರ್ಕಾರಿ ಪ್ರೌಢಶಾಲೆಗೆ ಕೋರಮಂಡಲ್ ಸಕ್ಕರೆ ಕಾರ್ಖಾನೆಯಿಂದ ಬ್ಯಾಂಡ್‌ಸೆಟ್ ವಿತರಿಸಿದರು. ರವಿರೆಡ್ಡಿ, ಬಾಬುರಾಜ್, ನವೀನ್, ರಮೇಶ್, ಹರೀಶ್, ಗೋವರ್ಧನ್, ಚನ್ನಕೇಶವ, ಗಿರೀಶ್ ಇದ್ದರು. 
ಜಿಲ್ಲೆ

ಮಕ್ಕಳ ಭವಿಷ್ಯಕ್ಕೆ ಶಿಕ್ಷಣ ಅಗತ್ಯ

ಕಿಕ್ಕೇರಿ: ಮಕ್ಕಳ ಭವಿಷ್ಯಕ್ಕೆ ಶಿಕ್ಷಣ ಅಗತ್ಯವಾಗಿರುವುದರಿಂದ ಪೂರಕವಾಗಿ ಸಹಕಾರ ನೀಡಲು ಕಾರ್ಖಾನೆ ಬದ್ಧವಿದೆ ಎಂದು ಕೋರಮಂಡಲ್ ಸಕ್ಕರೆ ಕಾರ್ಖಾನೆ ಹಿರಿಯ ಉಪಾಧ್ಯಕ್ಷ ರವಿರೆಡ್ಡಿ ಹೇಳಿದರು.

ಕೃಷ್ಣಾಪುರ ಸರ್ಕಾರಿ ಪ್ರೌಢಶಾಲೆಗೆ ಇತ್ತೀಚೆಗೆ ಬ್ಯಾಂಡ್‌ಸೆಟ್ ಕೊಡುಗೆ ನೀಡಿ ಮಾತನಾಡಿ, ರೈತರು ಮಕ್ಕಳನ್ನು ಆಸ್ತಿಯನ್ನಾಗಿ ರೂಪಿಸಬೇಕಿದೆ. ವಿದ್ಯೆ ಖರೀದಿಸಲಾರದ ಸಂಪತ್ತಾಗಿದ್ದು ಎಲ್ಲ ವಿಪತ್ತಿಗೂ ಪರಿಹಾರವಾಗಿ ಜ್ಞಾನವಿದ್ದು ಇದು ಶಿಕ್ಷಣದಿಂದ ಮಾತ್ರ ಸಾಧ್ಯವಾಗಲಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಬಡಮಕ್ಕಳು, ರೈತರ ಮಕ್ಕಳ ಶಿಕ್ಷಣ ಸುಲಭವಾಗಿ ದೊರಕಲಿದೆ. ಸರ್ಕಾರಿ ಶಾಲೆ ಬಲವರ್ಧನೆಗಾಗಿ ಹಲವು ಮೂಲ ಸೌಲಭ್ಯಗಳನ್ನು ಕಾರ್ಖಾನೆ ನೀಡುತ್ತಿದೆ. ಕುಡಿಯುವ ನೀರಿನ ಸೌಲಭ್ಯ, ಪ್ರತಿಭಾ ಪುರಸ್ಕಾರ, ಪೀಠೋಪಕರಣದಂತಹ ಹಲವು ಸೌಲಭ್ಯಗಳನ್ನು ನೀಡುತ್ತ ಬಂದಿದೆ. ರಾಷ್ಟ್ರೀಯ ಹಬ್ಬ ಸೇರಿದಂತೆ ನಿತ್ಯ ಪ್ರಾರ್ಥನೆ ವೇಳೆ ಬ್ಯಾಂಡ್‌ಸೆಟ್ ನುಡಿಸಲು ಅನುಕೂಲವಾಗುತ್ತದೆ. ಶಾಲೆಗೆ ಪರಿಕರ ನೀಡಲಾಗಿದೆ. ಮಕ್ಕಳನ್ನು ಹುರಿದುಂಬಿಸುವ ಕೆಲಸ ಮಾಡಲು ಶಿಕ್ಷಕರು ಮುಂದಾಗಿ ಎಂದು ನುಡಿದರು.

ಕಾರ್ಖಾನೆ ಕಬ್ಬು ವಿಭಾಗದ ಹಿರಿಯ ವ್ಯವಸ್ಥಾಪಕ, ನವೀನ್, ಮುಖ್ಯಶಿಕ್ಷಕ ರಮೇಶ್, ಎಸ್‌ಡಿಎಂಸಿ ಅಧ್ಯಕ್ಷ ಹರೀಶ್, ಶಿಕ್ಷಕರಾದ ಗೋವರ್ಧನ್, ಚನ್ನಕೇಶವ, ಮುಖಂಡ ಗಿರೀಶ್ ಇತರರು ಇದ್ದರು.