ಗ್ರಾಮದ ಸರ್ಕಾರಿ ಪದವಿ ಪೂರ್ವ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮವನ್ನು ಪ್ರಾಚಾರ್ಯೆ ಸವಿತಾ ರಾಠೋಡ ಉದ್ಘಾಟಿಸಿದರು. 
ಜಿಲ್ಲೆ

ಉತ್ತಮ ನಡವಳಿಕೆ ಕಲಿಸುವುದೇ ಶಿಕ್ಷಣ

ದತ್ತಾತ್ರೇಯ ಪಿ ಕುಲಕರ್ಣಿ

ಚಿಮ್ಮಡ: ಬರೀ ರ‌್ಯಾಂಕ್ ಗಳಿಸುವುದೊಂದೇ ಶಿಕ್ಷಣವಲ್ಲ. ನಮ್ಮ ನಡವಳಿಕೆ ಉತ್ತಮ ಗೊಳಸಿಕೊಳ್ಳುವುದು ನಿಜವಾದ ಶಿಕ್ಷಣದ ಧ್ಯೇಯವೆಂದು ಸಾಹಿತಿ, ಪತ್ರಕರ್ತ ನಾರನಗೌಡ ಉತ್ತಂಗಿ ಹೇಳಿದರು.

ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ. ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ಓದುವ ಸಮಯದಲ್ಲಿ ತಮ್ಮ ಗಮನವನ್ನು ಬೇರೆಡೆ ತಿರುಗಿಸದೆ ನೇರ ಗುರಿಯೊಂದಿಗೆ ಸತತ ಅಧ್ಯಯನ ಮಾಡಿದಲ್ಲಿ ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಸಾಧನೆ ಮಾಡಬಹುದು ಎಂದರು.

ಉಪನ್ಯಾಸಕ ಎ.ಬಿ. ಗೌಡಪ್ಪನವರ, ಅಭಿವದ್ಧಿ ಸಮಿತಿಯ ಪ್ರಭು ನೇಸೂರ, ಕಾಳಪ್ಪ ಬಡಿಗೇರ ಮಾತನಾಡಿದರು.

ವಿದ್ಯಾಲಯದ ಪ್ರಾಚಾರ್ಯೆ ಸವಿತಾ ರಾಠೋಡ ಅಧ್ಯಕ್ಷತೆ ವಹಿಸಿದ್ದರು. ಅಭಿವದ್ಧಿ ಸಮಿತಿಯ ಅಧ್ಯಕ್ಷ ಬಸವರಾಜ ಕುಂಚನೂರ, ಉಪಾಧ್ಯಕ್ಷ ಅವ್ವನಪ್ಪ ಮುಗಳಖೋಡ, ಬೀರಪ್ಪ ಹಳೆಮನಿ, ರಾಚಯ್ಯ ಮಠಪತಿ, ಶಂಕರ ಬ. ಪಾಟೀಲ, ಪತ್ರಕರ್ತ ಇಲಾಹಿ ಜಮಖಂಡಿ, ಗಟಿಗೆಪ್ಪ ಜಾಂಗನೂರ, ಲಕ್ಕಪ್ಪ ದೊಡಮನಿ, ಉಪನ್ಯಾಸಕ ಬಿ.ಬಿ.ಕುದರಿಮನಿ, ಆರ್.ಎಂ. ಬಿರಾದಾರ ಉಪಸ್ಥಿತರಿದ್ದರು.

ಕಾಲೇಜು ಸಂಸತ್ತಿಗೆ ಆಯ್ಕೆಯಾದ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು. ಉಪನ್ಯಾಸಕ ಪ್ರವೀಣ ಮೈತ್ರಿ ಸ್ವಾಗತಿಸಿದರು. ಡಾ. ಎಚ್.ಎಂ.ಕುಂಬಾರ ನಿರೂಪಿಸಿದರು. ಪಿ.ಪಿ. ವಸದ ವಂದಿಸಿದರು.