ಜಿಲ್ಲೆ

ಶಿಕ್ಷಣದಿಂದ ಬದುಕಿಗೆ ಭದ್ರ ಬುನಾದಿ

ಜಿ.ಹೆಚ್. ಧನ್ಯಕುಮಾರ್

ಕಡೂರು: ಉನ್ನತ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎಚ್.ಬಿಲ್ಲಪ್ಪ ಹೇಳಿದರು.

ಗಿರಿಯಾಪುರದ ಗುರುಕೃಪಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸುವುದೇ ಶಿಕ್ಷಣ. ಇದು ಯಾರಿಂದಲೂ ಕದಿಯಲಾಗದ ಸಂಪತ್ತು. ವಿದ್ಯೆಯನ್ನು ಶ್ರದ್ಧೆ ಯಿಂದ ಕಲಿಯಬೇಕು, ಶಿಸ್ತಿನ ಕಲಿಕೆ ತಮ್ಮಗಳ ಬದುಕಿಗೆ ಭದ್ರ ಬುನಾದಿ ಹಾಕಿಕೊಡಲಿದೆ. ಸುಶಿಕ್ಷಿತರಾಗುವ ಜತೆಗೆ ಸಂಸ್ಕಾರ, ಪರಿಸರ ಕಾಳಜಿ ಹಾಗೂ ಸಮಾಜವನ್ನು ಸರಿ ದಾರಿಯಲ್ಲಿ ನಡೆಸುವ ಸ್ವಾಸ್ಥ್ಯ ಹೊಂದಬೇಕು. ಕಲಿಕೆಯ ಸಂದರ್ಭದಲ್ಲಿ ಶಿಕ್ಷಣದೆಡೆಗೆ ಮಾತ್ರ ನಮ್ಮ ಗಮನ ಇರಬೇಕು ಎಂದು ಕಿವಿಮಾತು ಹೇಳಿದರು.

ಸಂಸ್ಥೆ ಅಧ್ಯಕ್ಷ ಜಿ.ಸಿ.ಜಯ ಸೋಮನಾಥ, ಶಾಲೆ ಕಾರ್ಯದರ್ಶಿ ಜಿ.ಎಂ ನೀಲಲೋಚನ ಸ್ವಾಮಿ. ಸಹ ಕಾರ್ಯದರ್ಶಿ ಜಯಪ್ರಕಾಶ್, ಉಪಾಧ್ಯಕ್ಷ ಪರಶಿವಪ್ಪ., ನಿವೃತ್ತ ಕನ್ನಡ ಶಿಕ್ಷಕ ಜಿ.ಬಸವರಾಜಪ್ಪ , ಹನುಮಂತಪ್ಪ, ಮುಖ್ಯ ಶಿಕ್ಷಕ ಎಂ.ಧರಣೀಂದ್ರ, ಬಿ.ಕಾಂತರಾಜ, ಲತಾ ವೀರಪ್ಪ ಮತ್ತಿತರಿದ್ದರು.