ಜಿಲ್ಲೆ

ಕುಸುಮಾವತಿಗೆ ಶಿಕ್ಷಣ ರತ್ನ ಪ್ರಶಸ್ತಿ

ಬಸವರಾಜ ವೀರಪ್ಪ ಗರಗ

ರಟ್ಟಿಹಳ್ಳಿ: ಬೆಂಗಳೂರಿನ ಸೂರ್ಯ ಫೌಂಡೇಷನ್ ಮತ್ತು ಸ್ಪಾರ್ಕ್ ಅಕಾಡೆಮಿ ಸಹಯೋಗದಲ್ಲಿ ನೀಡಲಾಗುವ ಉತ್ತಮ ಪೌಢಶಾಲೆ ಶಿಕ್ಷಕರ ರಾಜ್ಯ ಮಟ್ಟದ ‘ಶಿಕ್ಷಣ ರತ್ನ’ ಪ್ರಶಸ್ತಿಗೆ ಹಾವೇರಿ ಜಿಲ್ಲೆಯಿಂದ 2024ನೇ ಸಾಲಿನಲ್ಲಿ ರಟ್ಟಿಹಳ್ಳಿ ಪಟ್ಟಣದ ಕುಮಾರೇಶ್ವರ ಪ್ರೌಢ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಕುಸುಮಾವತಿ ಮೇಗಳಮನಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾದ ಈ ಶಿಕ್ಷಕರಿಗೆ ಬೆಂಗಳೂರಿನಲ್ಲಿ ಅಕ್ಟೋಬರ್ 15ರಂದು ಜರುಗುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.