ನಿಡಸೋಸಿ ಎಸ್‌ಜೆಪಿಎನ್ ಟ್ರಸ್ಟ್ ಬಿಸಿಎ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಡಾ. ಗುರುದೇವಿ ಹುಲೆಪ್ಪನವರಮಠ ಮಾತನಾಡಿದರು. ನದೀಮ ಮಕಾಂದರ, ಬಿ.ಎಲ್. ಖೋತ, ನಿಜಲಿಂಗೇಶ್ವರ ಸ್ವಾಮೀಜಿ ಇದ್ದರು. 
ಜಿಲ್ಲೆ

ಶಿಕ್ಷಣ ಭವಿಷ್ಯದ ದಾರಿದೀಪ

ಶಂಕರ ಗೆಜ್ಜಿ

ಸಂಕೇಶ್ವರ: ವಿದ್ಯಾರ್ಥಿಗಳು ಚೆನ್ನಾಗಿ ಓದಿ ಶೆಕ್ಷಣಿಕ ಪ್ರಗತಿ ಸಾಸುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು. ಶಿಕ್ಷಣ ಭವಿಷ್ಯದ ದಾರಿದೀಪ ಎಂದು ಡಾ. ಗುರುದೇವಿ ಹುಲೆಪ್ಪನವರಮಠ ಹೇಳಿದರು.

ಸಮೀಪದ ನಿಡಸೋಸಿ ಎಸ್‌ಜೆಪಿಎನ್ ಟ್ರಸ್ಟ್ ಬಿಸಿಎ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ, ಶಿಕ್ಷಣ ಸರ್ವತೋಮುಖ ಅಭಿವೃದ್ಧಿಗೆ ಮೂಲ ಅಸ್ತ್ರ ಎಂದರು.

ಕಾಲೇಜಿನ ಹಳೆ ವಿದ್ಯಾರ್ಥಿ, ಅಭಿಯಂತ ನದೀಮ ಮಕಾಂದರ ಮಾತನಾಡಿ, ಹೆಚ್ಚಿನ ಅಧ್ಯಯನ ಮತ್ತು ವಿಷಯಗಳ ಬಗ್ಗೆ ಆಳ ಜ್ಞಾನ ಹೊಂದಿರುವುದು ಅವಶ್ಯ ಎಂದರು. ಸಂಸ್ಥೆಯ ನಿರ್ದೇಶಕ ಬಿ.ಎಲ್. ಖೋತ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಬಸವರಾಜ ಹಾಲಬಾವಿ ಮಾತನಾಡಿದರು. ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಉತ್ತರಾಕಾರಿ ನಿಜಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆದರ್ಶ ವಿದ್ಯಾರ್ಥಿ -ಪ್ರಣವ ಚೌಗುಲೆ, ಆದರ್ಶ ವಿದ್ಯಾರ್ಥಿನಿ ಸಾನಿಕ ಖೋತ ಅವರನ್ನು ಸತ್ಕರಿಸಲಾಯಿತು.

ವಿ.ಎಂ. ಮಠಪತಿ, ವಿ.ಎಂ. ಪಾಟೀಲ, ಸಿ.ಎಂ.ಸಾರಪೊರೆ, ರಾಜು ವಠಾರೆ, ಸಂತೋಷ ಖೋತ, ಆನಂದ ಸೋನಾರ್, ಮಹೇಶ ಗೌಡಪಾಟೀಲ, ಪವನ ಹಿರೇಮಠ, ಅಕ್ಷಯ ಪಾಟೀಲ, ಶಿಲ್ಪಾ ಗಾವಡೆ, ಸೀಮಾ ನಾಯಕ, ಕವಿತಾ ಚವ್ಹಾಣ, ವಿದ್ಯಾಶ್ರೀ ಕಳಸಗೊಂಡಾ, ರಾಜಶ್ರೀ ಕಮತಗಿ, ಸಲೋನಿ, ರೂಪಾ ಪಾಟೀಲ, ದಾಕ್ಷಾಯಿಣಿ ಹಿರೇಕೊಡಿ, ಕೀರ್ತನಾ ದೇವರ, ಶ್ರವಣಾ ಕತ್ತಿ ಇತರರು ಇದ್ದರು.