ಜಿಲ್ಲೆ

ಕೆಎಲ್ ಶತಮಾನೋತ್ಸವ ಕನ್ವೆನ್ಷನ್ ಸೆಂಟರ್‌ನಲ್ಲಿ ಶಿಕ್ಷಣ ಮೇಳ

ಜಗದೀಶ ಹೊಂಬಳಿ

ಬೆಳಗಾವಿ: ಇಲ್ಲಿನ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ರಿಸರ್ಚ್ (ಕಾಹೆರ್)ನ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ವತಿಯಿಂದ ಬುಧವಾರ ಬೆಳಗಾವಿಯ ಜೆಎನ್‌ಎಂಸಿ ಕ್ಯಾಂಪಸ್‌ನ ಕೆಎಲ್‌ಇ ಶತಮಾನೋತ್ಸವ ಕನ್ವೆನ್ಷನ್ ಸೆಂಟರ್‌ನಲ್ಲಿ ಬುಧವಾರ ‘ಶಿಕ್ಷಣ ಮೇಳ-2024’ ಜರುಗಿತು.
 ಮೇಳವನ್ನು ಯುಎಸ್‌ಎಂ-ಕೆಎಲ್‌ಇ ಅಂತಾರಾಷ್ಟ್ರೀಯ ವೈದ್ಯಕೀಯ ಕಾರ್ಯಕ್ರಮದ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ ಉದ್ಘಾಟಿಸಿದರು. ಕಾಹೆರ್ ರಿಜಿಸ್ಟ್ರಾರ್ ಡಾ. ಎಂ.ಎಸ್. ಗಣಾಚಾರಿ, ಜೆಎನ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ರಾಜೇಶ ಪೊವಾರ, ಕಾಹೆರ್‌ನ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಪ್ರಾಚಾರ್ಯೆ ಡಾ.ಊರ್ಮಿಳಾ ಕಾಗಲ್ ಇತರ ಅಧ್ಯಾಪಕರು ಇದ್ದರು.
 12ನೇ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಲ್ಲಿ ಬಿಎಸ್ಸಿಯ ಅಗಾಧತೆಯ ಬಗ್ಗೆ ಅರಿವು ಮೂಡಿಸುವುದು. ಕಾಹೆರ್ ಬೆಳಗಾವಿ ನೀಡುವ ಸಂಬಂಧಿತ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವ ಆರೋಗ್ಯ ರಕ್ಷಣಾ ಉದ್ಯಮದಲ್ಲಿ ಅಲೈಡ್ ಆರೋಗ್ಯ ವೃತ್ತಿಪರರ ನಿರ್ಣಾಯಕ ಪಾತ್ರದ ಬಗ್ಗೆ ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸುವುದಕ್ಕೆ ಈ ಮೇಳ ನಡೆಸಲಾಯಿತು.
ವಿದ್ಯಾರ್ಥಿಗಳು ತಮ್ಮ ಕೋರ್ಸ್ ಅವಧಿಯಲ್ಲಿ ಗಳಿಸಬೇಕಾದ ಕೌಶಲಗಳು ಮತ್ತು ಭಾರತ ಮತ್ತು ವಿದೇಶಗಳಲ್ಲಿನ ಉದ್ಯೋಗಾವಕಾಶಗಳ ಕುರಿತು ಪವರ್ ಪಾಯಿಂಟ್ ಪ್ರೆಸೆಂಟೇಶನ್, ಚಾರ್ಟ್ ಇತ್ಯಾದಿ ಬಳಸಿ ವಿದ್ಯಾರ್ಥಿಗಳಿಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪಾಲಕರು ಇದ್ದರು.