ಜಿಲ್ಲೆ

ವಿದ್ಯಾರ್ಥಿಗಳ ಭವಿಷ್ಯಕ್ಕೆ ಎಜುಕೇಷನ್ ಎಕ್ಸ್‌ಪೋ ಸಹಕಾರಿ: ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅಭಿಮತ

ಮೈಸೂರು: ನಂ.1 ಕನ್ನಡಿಗರ ದಿನಪತ್ರಿಕೆ ‘ವಿಜಯವಾಣಿ’ ಯಿಂದ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿದ್ದ ಎರಡು ದಿನಗಳ ‘ಎಜುಕೇಷನ್ ಎಕ್ಸ್‌ಪೋ-2024’ಗೆ ಭಾನುವಾರ ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರು ಭೇಟಿ ನೀಡಿದ್ದರು.
ಪ್ರದರ್ಶನಗೊಂಡಿದ್ದ ಪ್ರತಿ ಮಳಿಗೆಗಳಿಗೂ ಭೇಟಿ ನೀಡಿ ಆಸಕ್ತಿಯಿಂದ ಆಯಾ ಸಂಸ್ಥೆಗಳ ವಿವರ ಪಡೆದುಕೊಂಡರು. ಕೋರ್ಸ್‌ಗಳು, ಕಾಲೇಜುಗಳಲ್ಲಿ ಇರುವ ಸೌಲಭ್ಯಗಳು, ಶುಲ್ಕ, ಯಾವ ಕೋರ್ಸ್ ತೆಗೆದುಕೊಂಡರೆ ಮುಂದೆ ವಿದ್ಯಾರ್ಥಿಗಳಿಗೆ ಸಿಗುವ ಉದ್ಯೋಗ, ಹೊಸ ಅವಿಷ್ಕಾರಗಳ ಕುರಿತು ಕುತೂಹಲದಿಂದ ಮಾಹಿತಿ ಪಡೆದರು.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಇಂತಹ ಎಕ್ಸ್‌ಪೋಗಳು ಅನುಕೂಲವಾಗಿದ್ದು, ಮುಂದೆಯೂ ವಿಜಯವಾಣಿ ಸದಾ ಕಾರ್ಯಕ್ರಮ ಆಯೋಜನೆ ಮಾಡಲಿದೆ. ಸಂಸ್ಥೆಗಳು ಸಹಕಾರ ನೀಡುವಂತೆ ಕೋರಿದರು. ತುಮಕೂರಿನ ಶ್ರೀಸಿದ್ಧಗಂಗಾ ಶಿಕ್ಷಣ ಸಂಸ್ಥೆಯಿಂದ ಡಾ.ಶ್ರೀಶಿವಕುಮಾರಸ್ವಾಮಿ ಅವರು ಭಾವಚಿತ್ರ ಇರುವ ಫೋಟೊವನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು. ಅಲ್ಲದೇ ಕೆಲ ಮಳಿಗೆಯವರು ಕಿರು ಹೊತ್ತಿಗೆ ನೀಡಿದರು.
ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿ.ನ ಪ್ರಧಾನ ವ್ಯವಸ್ಥಾಪಕ ಅಶೋಕ್ ಯಂಡಿಗೇರಿ, ವಿಜಯವಾಣಿ ಮೈಸೂರು ಆವೃತ್ತಿಯ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ, ಜಾಹೀರಾತು ವಿಭಾಗದ ಹಿರಿಯ ವ್ಯವಸ್ಥಾಪಕ ದೀಪಕ್ ಘಾಟ್ಕೆ ಇದ್ದರು.