ಜಿಲ್ಲೆ

ಶಿಕ್ಷಣದಿಂದ ಬಲಿಷ್ಠ ಭಾರತದ ಕಲ್ಪನೆ ಸಾಕಾರ

ಹುಬ್ಬಳ್ಳಿ: ಸ್ವಾತಂತ್ರ್ಯೊತ್ಸವ ನಿಮಿತ್ತ ಉಣಕಲ್ ಗ್ರಾಮದ ಶ್ರೀ ಯಲ್ಲಪ್ಪ ಸಿದ್ದಪ್ಪ ಪರಣ್ಣವರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ರಾಚಯ್ಯ ಚನ್ನಯ್ಯ ಚಿಕ್ಕಮಠ ಶಾಲೆಯಲ್ಲಿ ಮಂಗಳವಾರ ಶ್ರೀ ದುರ್ಗಾ ಡೆವೆಲಪರ್ಸ್ ಮತ್ತು ಪ್ರಮೋಟರ್ಸ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್​ಗಳನ್ನು ವಿತರಿಸಲಾಯಿತು.

ಶ್ರೀ ದುರ್ಗಾ ಡೆವೆಲಪರ್ಸ್ ಮತ್ತು ಪ್ರಮೋಟರ್ಸ್ ಎಂಡಿ ವೀರೇಶ ಉಂಡಿ ಮಾತನಾಡಿ, ಶಿಕ್ಷಣದಿಂದ ಮಾತ್ರ ಬಲಿಷ್ಠ ಭಾರತದ ಕಲ್ಪನೆ ಸಾಕಾರವಾಲು ಸಾಧ್ಯ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಕಷ್ಟು ಕೊಡುಗೆಗಳನ್ನು ನೀಡುತ್ತ ಬಂದಿವೆ. ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಜ್ಞಾರ್ನಾಜನೆಗೆ ಸಾಕಷ್ಟು ಅನುಕೂಲವಾಗಿದೆ. ಬಡ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಸವೋತ್ತಮ. ಅಭಿವೃದ್ಧಿಗೆ ಪಣತೊಡುವ ಜತೆಗೆ ಸಶಕ್ತ ಸಮಾಜ ನಿರ್ವಣಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕೆಂದು ಹೇಳಿದರು.

ಉಭಯ ಶಾಲೆಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್​ಗಳನ್ನು ವಿತರಿಸಲಾಯಿತು. ಪ್ರಭಾರ ಮುಖ್ಯ ಶಿಕ್ಷಕಿ ವನಿತಾ ಕುಲಕರ್ಣಿ, ಎಸ್​ಡಿಎಂ ಅಧ್ಯಕ್ಷ ಕೇದಾರನಾಥ, ಆರ್. ಮಂಜಕ್ಕ, ಜೆ.ಎಸ್. ಬಮ್ಮನಗೌಡ್ರ, ಮಹ್ಮದ್ ಅಲಿಖಾನ್, ಕಲ್ಲಪ್ಪ ವಾಲೀಕಾರ, ಮಂಜುನಾಥ ಉಂಡಿ, ಮಂಜುನಾಥ ಮಾರಣ್ಣವರ, ಶಿಕ್ಷಕರು, ಇತರರು ಇದ್ದರು.