ಅಳವಂಡಿ: ದಂಪತಿಗಳ ಪರಸ್ಪರ ಪ್ರೀತಿ, ಗೌರವ, ನಂಬಿಕೆಯಿಂದ ಜೀವನ ಸಾರ್ಥಕವಾಗಲಿದೆ. ಸಾಮೂಹಿಕ ವಿವಾಹದಿಂದ ಹಣದ ಉಳಿತಾಯ ಆಗಲಿದೆ ಎಂದು ಸಿದ್ಧೇಶ್ವರ ಮಠದ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.
ಇದನ್ನೂ ಓದಿ:ಮಂಗಳಮುಖಿಯಿAದ ಉಚಿತ ಸಾಮೂಹಿಕ ವಿವಾಹ
ಸಮೀಪದ ಬಿಸರಹಳ್ಳಿಯ ಶ್ರೀ ಮರುಳಸಿದ್ಧೇಶ್ವರ ಜಾತ್ರೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸಾರದಲ್ಲಿ ನೋವು-ನಲಿವು ಸಮಾಧಾನದಿಂದ ಎದುರಿಸಬೇಕು. ಸೊಸೆಯನ್ನು ಮಗಳೆಂದು ತಿಳಿದರೆ ಸಂಸಾರದ ಹಾದಿ ಸರಾಗವಾಗುತ್ತದೆ. ಇಂದು ಶಿಕ್ಷಣ ಅವಶ್ಯವಾಗಿದೆ. ಆದ್ದರಿಂದ ಮಕ್ಕಳಿಗೆ ಶಿಕ್ಷಣವೆಂಬ ದೊಡ್ಡ ಆಸ್ತಿಯನ್ನು ನೀಡಿ. ಶಿಕ್ಷಣದಿಂದ ಸಾಧಿಸಲು ಸಾಧ್ಯ ಎಂದರು.
ದದೆಗಲ್ ಶ್ರೀಸಿದ್ಧಾರೂಢ ಮಠದ ಶ್ರೀ ಆತ್ಮಾನಂದ ಸ್ವಾಮೀಜಿ ಮಾತನಾಡಿ, ಸಂಪತ್ತು ಗಳಿಸುವುದರಿಂದ ಸಮಾಜ ನಿಮ್ಮನ್ನು ಗುರುತಿಸುವುದಿಲ್ಲ. ಗಳಿಸಿದ ಹಣ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಿದರೆ ಎಲ್ಲರ ನೆನಪಿನಲ್ಲಿ ಇರುತ್ತದೆ. ಸಾಮೂಹಿಕ ವಿವಾಹ ಆರ್ಥಿಕ ಉಳಿತಾಯ ಮಾಡಲಿದೆ. ದಂಪತಿಗಳು ಬಂಡಿಯ ಚಕ್ರದಂತೆ ಜೀವನ ನಡೆಸಿ ಎಂದರು.
ಸಕಲ ವಾದ್ಯಮೇಳದೊಂದಿಗೆ ಮೆರವಣಿಗೆ ಮೂಲಕ ಶ್ರೀ ಮರುಳಸಿದ್ಧೇಶ್ವರ ಮೂರ್ತಿಯನ್ನು ಶ್ರೀಮಠಕ್ಕೆ ತರಲಾಯಿತು. ಬಳಿಕ ಏಳು ಜೋಡಿಗಳ ಸಾಮೂಹಿಕ ವಿವಾಹ, ಅನ್ನಸಂತರ್ಪಣೆ ನಡೆಯಿತು. ನಂತರ ದಾನಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.
ಗ್ರಾಪಂ ಅಧ್ಯಕ್ಷ ರಮೇಶ ಮೂಲಿಮನಿ, ಪ್ರಮುಖರಾದ ಅಜಯಗೌಡ ಪಾಟೀಲ, ಆನಂದ ಮ್ಯಾಗಳಮನಿ, ರವೀಂದ್ರಗೌಡ, ಮಲ್ಲಯ್ಯ ಮಠದ, ಪಾರ್ವತಿ, ನಾಗಪ್ಪ ಬಿಕನಳ್ಳಿ, ವಿಶಾಲಾಕ್ಷಿ, ಪರಶುರಾಮ, ಪ್ರಭು, ಗವಿಸಿದ್ದಯ್ಯ, ಶರಣಪ್ಪ, ಬಸವರಾಜ, ಶೇಖರಪ್ಪ, ಹಾಲಪ್ಪ, ಪ್ರಕಾಶ, ಆನಂದ, ಯಲ್ಲಪ್ಪ, ಕೊಟ್ರೇಶ, ಪಕೀರಸ್ವಾಮಿ, ಯಮನೂರಪ್ಪ, ಮಂಜಪ್ಪ ಇತರರಿದ್ದರು.