ವಿಜಯವಾಣಿ ಸುದ್ದಿಜಾಲ ಬೆಳ್ವೆ
ಮಕ್ಕಳಿಗೆ ಬಾಲ್ಯದಿಂದಲೇ ಬಾಲಗೋಕುಲ ತರಗತಿಗಳ ಮೂಲಕ ಧಾರ್ಮಿಕ ಶ್ರದ್ಧೆ, ಸಂಸ್ಕಾರ, ಜೀವನ ಮೌಲ್ಯಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳುವಲ್ಲಿ ತಾಯಂದಿರ ಪಾತ್ರ ಮಹತ್ವದ್ದು ಎಂದು ಬೆಳ್ವೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಎಚ್.ವಸಂತಕುವಾರ್ ಶೆಟ್ಟಿ ಬೆಳ್ವೆ ಹೇಳಿದರು.
ಬೆಳ್ವೆ ಶ್ರೀ ವಾಸುಕಿ ಸಭಾಭವನದಲ್ಲಿ ಗ್ರಾಮ ವಿಕಾಸ ಹೆಬ್ರಿ ತಾಲೂಕು ವತಿಯಿಂದ ಶುಕ್ರವಾರ ಹಮ್ಮಿಕೊಂಡ ಶಿಕ್ಷಾ ಸಂಸ್ಕಾರ ಪ್ರಶಿಕ್ಷಣ ಶಿಬಿರದಲ್ಲಿ ವಾತನಾಡಿದರು.
ಉದ್ಯಮಿ ಬಿ.ಗಣೇಶ್ ಕಿಣಿ ಬೆಳ್ವೆ, ವೈ.ವಿವೇಕಾನಂದ ಶೆಟ್ಟಿ ಯಳಂತೂರು, ಬಾಲ ಗೋಕುಲ ಮಂಗಳೂರು ವಿಭಾಗದ ಸಂಯೋಜಕ ಜೀತೆಂದ್ರ ಮಂಗಳೂರು, ಗ್ರಾಮ ವಿಕಾಸ ಮಂಗಳೂರು ವಿಭಾಗದ ಸದಸ್ಯೆ ರಮೀತಾ ಶೈಲೇಂದ್ರ, ಹೆಬ್ರಿ ತಾಲೂಕು ಗ್ರಾಮ ವಿಕಾಸ ಶಿಕ್ಷಾ ಸಂಸ್ಕಾರ ಸಂಯೋಜಕಿ ವೀಣಾ ಆರ್.ಭಟ್, ಸಹ ಸಂಯೋಜಕಿ ಉಷಾ ಪಿ.ಶೆಟ್ಟಿ ಬೆಪ್ಡೆ, ಬೆಳ್ವೆ ಶ್ರೀಶಂಕರನಾರಾಯಣ ದೇವಳದ ಮೊಕ್ತೇಸರ ಬಿ.ಶಂಕರ ಶೆಟ್ಟಿ ಬೆಳ್ವೆ, ಉಡುಪಿ ಜಿಲ್ಲಾ ವಿಹಿಂಪ ಉಪಾಧ್ಯಕ್ಷ ವೈ.ವಿಜಯಕುವಾರ್ ಶೆಟ್ಟಿ ಗೋಳಿಯಂಗಡಿ, ಬೆಳ್ವೆ ಗ್ರಾಪಂ ಸದಸ್ಯ ಎಸ್.ಚಂದ್ರಶೇಖರ ಶೆಟ್ಟಿ ಸುರ‌್ಗೋಳಿ, ವಾಜಿ ಅಧ್ಯಕ್ಷ ಬಿ.ಉದಯಕುವಾರ್ ಪೂಜಾರಿ ಬೆಳ್ವೆ, ಜನಜಾಗೃತಿ ವೇದಿಕೆ ಸದಸ್ಯ ಸುರೇಶ್ ಶೆಟ್ಟಿ ಆರ್ಡಿ, ವಾಜಿ ಅಧ್ಯಕ್ಷ ಸುದರ್ಶನ್ ಶೆಟ್ಟಿ ಆರ್ಡಿ ಮೊದಲಾದವರು ಉಪಸ್ಥಿತರಿದ್ದರು. ವೀಣಾ ಆರ್.ಭಟ್ ಸ್ವಾಗತಿಸಿದರು. ಅಶ್ವಿತ್ ಶೆಟ್ಟಿ ವಂದಿಸಿದರು. ಉಷಾ ಪಿ.ಶೆಟ್ಟಿ ಬೆಪ್ಡೆ ನಿರೂಪಿಸಿದರು.