ಬೊಮ್ಮನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮುಂಡರಗಿ ಅನ್ನದಾನೀಶ್ವರ ಸಂಸ್ಥಾನಮಠ ಶಿಕ್ಷಣ ಸಮಿತಿ ಶತಮಾನೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ. ಅನ್ನದಾನೀಶ್ವರ ಮಹಾ ಸ್ವಾಮೀಜಿ, ಗುರುಶಾಂತ ಶಿವಾಚಾರ್ಯರು, ವಿಠಲ ಕಟಕಧೊಡ ಮತ್ತಿತರರಿದ್ದಾರೆ. 
ಜಿಲ್ಲೆ

ತಾರತಮ್ಯ ಮಾಡದೆ ಶಿಕ್ಷಣ ನೀಡಿ

ಗಿರೀಶ ಸಗರ

ವಿಜಯಪುರ: ಶಿಕ್ಷಣ ಪ್ರತಿಯೊಬ್ಬರಿಗೂ ಜೀವಾಳ ಎಂಬುದನ್ನು ಪಾಲಕರು ಅರ್ಥಮಾಡಿಕೊಂಡು ಗಂಡು&ಹೆಣ್ಣು ಎಂಬ ಭೇದ ಮಾಡದೆ ಶಿಕ್ಷಣ ನೀಡಬೇಕು ಎಂದು ಮುಂಡರಗಿಯ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾ ಸ್ವಾಮೀಜಿ ಹೇಳಿದರು.

ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮುಂಡರಗಿ ಅನ್ನದಾನೀಶ್ವರ ಸಂಸ್ಥಾನಮಠ ಶಿಕ್ಷಣ ಸಮಿತಿ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೂರದೃಷ್ಟಿ ಸಂಸ್ಥಾನಕ್ಕೆ ಇರುವುದರಿಂದ ಶತಮಾನಗಳಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ನೀಡಿದ್ದು ನಮಗೆ ಸಂತೃಪ್ತಿಯಿದೆ. ಒಂದು ಸಾವಿರ ಶಾಲೆಗಳನ್ನು ಶತಮಾನದಿಂದ ಉಚಿತವಾಗಿ ನಡೆಸುತ್ತಿದ್ದು, ಶಿಕ್ಷಣದಿಂದಲೇ ದೇಶದ ಅಭಿವೃದ್ಧಿ ಎಂಬುದನ್ನು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಾಗಠಾಣ ಶಾಸಕ ವಿಠಲ ಕಟಕಧೊಂಡ ಮಾತನಾಡಿ, ಕನ್ನಡ ನಾಡಿನಲ್ಲಿ ಮಠಾಧೀಶರು ಶಿಕ್ಷಣಕ್ಕೆ ಮಹತ್ವ ನೀಡಿದ್ದು ಶತಮಾನದ ಇತಿಹಾಸ. ಸಮಾಜಕ್ಕೆ ಮಠಾಧೀಶರ ಕೊಡುಗೆ ಅಪಾರ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಬಡವ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡುವ ಮೂಲಕ ಅವರಿಗೆ ಉನ್ನತ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡಬೇಕು ಎಂದರು.

ಸ್ಥಳಿಯ ಹಿರೇಮಠ ಸಂಸ್ಥಾನದ ಗವಿಮಠದ ಪೀಠಾಧ್ಯಕ್ಷ ಗುರುಶಾಂತ ಶಿವಾಚಾರ್ಯರು ಮಾತನಾಡಿದರು. ಸಿಪಿಐ ಗುರುಶಾಂತ ದಾಶ್ಯಾಳ, ತೋಟಗಾರಿಕೆ ಇಲಾಖೆಯ ಅಧಿಕಾರಿ ಸಿ.ಬಿ. ಪಾಟೀಲ, ನೌಕರರ ಸಂದ ಅಧ್ಯಕ್ಷ ಗುರುಶಾಂತ ಬಿರಾದಾರ ಮಾತನಾಡಿದರು.

ಡಿ.ಎಲ್​. ಚವಾಣ, ಮನೋಹರ ತಿಳ್ಯಾಳ, ಅಣ್ಣಾರಾಯಗೌಡ ದಾಸ್ಯಾಳ, ಡಾ. ಎಸ್​.ಜಿ. ರಾಜಗುರು. ಎಂ.ಎಸ್​. ಮುರಗುಂಡಿ, ಜಿ.ಕೆ. ವಸದ, ಎ.ಎಸ್​. ಬಿರಾದಾರ, ಎಸ್​.ವಿ. ಬಡಿಗೇರ, ಸಿದ್ರಮಪ್ಪ ದಾಸ್ಯಾಳ ವೇದಿಕೆಯಲ್ಲಿದ್ದರು.

ವಿಶ್ರಾಂತ ಮುಖ್ಯ ಗುರು ಪಿ.ಎಂ. ಬೆನಕನಹಳ್ಳಿ. ಎನ್​.ಸಿ. ಹಿರೇಮಠ, ಎಸ್​.ಎಂ. ನಂದಿಕೇಶ್ವರ, ವಿಶ್ರಾಂತ ಸಹ ಶಿಕ್ಷಕ ಜಿ.ಎಸ್​. ಬುಶೆಟ್ಟಿ. ಎಂ.ಎಚ್​. ನಾಯಕ, ಕೆ.ಜಿ. ಸಂಗಟಿ, ವಿ.ಎಸ್​. ಕೋಟ್ಯಾಳಮಠ, ಸಿ.ಎಸ್​. ಮಠಮತಿ, ಎಂ.ವಿ. ಕೋರಿ, ಎ.ಎನ್​. ಹಿರೇಮಠ, ಎಸ್​.ಡಿ. ಭಗವತಿ ಮತ್ತಿತರರಿದ್ದಾರೆ.