ಕಡೂರಿನಲ್ಲಿ ಗಂಗಾಮತಸ್ಥ ಸಮಾಜದ ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಕೆ.ಎಸ್.ಆನಂದ್, ತೋಟದಮನೆ ಮೋಹನ್‌ಕುಮಾರ್, ಡಾ. ಬಿ.ಮೌಲಾಲಿ, ಎಂ.ಎಸ್.ವಸಂತ್‌ಕುಮಾರ್,ಧನಂಜಯ್ ಇತರರಿದ್ದರು. 
ಜಿಲ್ಲೆ

ಗಂಗಾಮತ ಸಮಾಜದ ಮಕ್ಕಳಿಗೆ ಶಿಕ್ಷಣ ನೀಡಿ

ಕಡೂರು: ಸಮಾಜ ಅಭಿವೃದ್ಧಿಗೊಳ್ಳಲು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಜಿಲ್ಲಾ ಗಂಗಾಮತಸ್ಥರ ಸಂಘ, ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಏರ್ಪಡಿಸಿದ್ದ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾಪುರಸ್ಕಾರ ಮತ್ತು ನಿವೃತ್ತನೌಕರರ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಗಂಗಾಮತಸ್ಥ ಸಮಾಜ 30 ಲಕ್ಷ ಜನಸಂಖ್ಯೆ ಹೊಂದಿದೆ. ಆದರೆ ಸಮಾಜ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಶಕ್ತವಾಗಿಲ್ಲ. ಮಕ್ಕಳಿಗೆ ಶಿಕ್ಷಣ ಕೊಡಿಸಿದಾಗ ಬದಲಾವಣೆಯಾಗುತ್ತದೆ. ದೇವಾಲಯಗಳ ನಿರ್ಮಾಣಕ್ಕಿಂತ ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆಗಳನ್ನು ತೆರೆಯಬೇಕಿದೆ ಎಂದು ಹೇಳಿದರು.
ಗಂಗಾಮತಸ್ಥ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡಬೇಕು ಎಂದು ಹೋರಾಟಗಳು ನಡೆಯುತ್ತಿವೆ. ಕಳೆದ ಚುನಾವಣೆಯಲ್ಲಿ ಕೇಂದ್ರ ಸರ್ಕಾರ ಎಸ್ಟಿಗೆ ಸೇರಿಸುವ ಭರವಸೆ ನೀಡಿ ಮರೆತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಮಾಜ ಒಗ್ಗಟ್ಟು ಪ್ರದರ್ಶಿಸಬೇಕಿದೆ. ನಮ್ಮ ಸಮಾಜದ ಮತಗಳು ಬೇಕಿದ್ದರೆ ಎಸ್ಟಿಗೆ ಸೇರಿಸಬೇಕು ಎಂದು ಪ್ರತಿಯೊಬ್ಬರೂ ಕೇಳಬೇಕು. ಆದರೆ ಮತ ಮಾರಿಕೊಳ್ಳಬಾರದು ಎಂದು ತಿಳಿಸಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಯಾವುದೇ ಸಮಾಜ ಮುಂದೆ ಬರಬೇಕಾದರೆ ಶಿಕ್ಷಣವಂತರಾಗಬೇಕು. ಪ್ರತಿಭಾಪುರಸ್ಕಾರದಿಂದ ಮಕ್ಕಳಿಗೆ ಇಡೀ ಸಮಾಜದ ಆಶೀರ್ವಾದ ದೊರಕಲಿದೆ. ಶಿಸ್ತು ರೂಢಿಸಿಕೊಂಡು ಸಮಾಜ ಒಂದಾಗಬೇಕು ಎಂದು ತಿಳಿಸಿದರು.
ಗಂಗಾಮತಸ್ಥ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಂ.ಧನಂಜಯ, ಪುರಸಭೆ ಸದಸ್ಯರಾದ ತೋಟದಮನೆ ಮೋಹನ್‌ಕುಮಾರ್, ಜ್ಯೋತಿ ಆನಂದ್, ಡಾ. ಬಿ.ಮೌಲಾಲಿ, ಎಂ.ಶ್ರೀನಿವಾಸ್, ಡಾ. ಸತ್ಯನಾರಾಯಣ್, ಡಾ. ಟಿ.ಕೃಷ್ಣಯ್ಯ, ನಾಗರಾಜ್ ಮಣ್ಣೂರು, ಜೆ.ರಾಜು, ಎಂ.ಟಿ.ಹನುಮಂತಯ್ಯ, ಜಯರಾಂ , ಸೋಮಶೇಖರ್, ಎಂ.ಎಸ್.ವಸಂತಕುಮಾರ್, ರೇವತಿ ನಾಗರಾಜ್, ಮಲ್ಲಿಕಾರ್ಜುನ್, ನಿಡಘಟ್ಟ ಉಮೇಶ್, ಕೆ.ಎನ್.ಕೃಷ್ಣಮೂರ್ತಿ ಇದ್ದರು.