Web threat 
ಜಿಲ್ಲೆ

ಅಶ್ಲೀಲ ಎಡಿಟ್ ಪೋಟೋ ವೈರಲ್ ಬೆದರಿಕೆ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಸಾಲವನ್ನು ತೀರಿಸಿದ್ದರೂ ಸಹ ಹೆಚ್ಚುವರಿ ಹಣ ಪಾವತಿಗೆ ಒತ್ತಡ ಹೇರುತ್ತಿರುವ ಅಪರಿಚಿತ ಆ್ಯಪ್‌ನ ಸಿಬ್ಬಂದಿ, ಅಶ್ಲೀಲ ಎಡಿಟ್ ಪೋಟೋ ವೈರಲ್ ಮಾಡುವ ಬೆದರಿಕೆಯನ್ನೊಡ್ಡಿದ್ದಾರೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಲದ ಅಸುರಕ್ಷಿತ ಆ್ಯಪ್‌ಗಳ ಬ್ಯಾನ್ ಆಗುತ್ತಿದ್ದರೂ ಕಿರುಕುಳ, ಮಾನಹಾನಿ, ಅಕ್ರಮವಾಗಿ ಹಣ ವಸೂಲಿಯ ದಂಧೆ ಮಾತ್ರ ನಿಂತಿಲ್ಲ.

ಬಾಗೇಪಲ್ಲಿಯಲ್ಲಿ ಖಾಸಗೀ ಕಂಪನಿಯ ಸಿಬ್ಬಂದಿ ಬಾಬಾಜಾನ್ ಹಣದ ಅವಶ್ಯಕತೆಯಿದ್ದುದರಿಂದ ಮೊಬೈಲ್ ನಲ್ಲಿ ಪ್ಲೇಸ್ಟೊರ್ ನಿಂದ ಸಾಲದ ಆ್ಯಪ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಆಧಾರ್ ಕಾರ್ಡ್, ಪಾನ್ ಕಾರ್ಡ್ ಪೋಟೋವನ್ನು ಆಪ್ಲೋಡ್ ಮಾಡಿದ್ದಾರೆ. ಇದಕ್ಕೆ ೨೪೦೦ ರೂ ಜಮಾಗೊಳಿಸಿದ ಕಂಪನಿ, ಅಸಲಿಗೆ ಬಡ್ಡಿ ೧೬೦೦ ರೂ ಸೇರಿಸಿ ೪೦೦೦ ರೂ ಗಳನ್ನು ಪಡೆದುಕೊಂಡಿದೆ. ನಂತರ ಸ್ವಯಂ ಸಿಬ್ಬಂದಿಯೇ ನಾಲ್ಕು ಬಾರಿ ತಲಾ ೧೨,೦೦೦ ಖಾತೆಗೆ ಜಮಾಮಾಡಿದ್ದಾರೆ. ಇದಕ್ಕೂ ಅಸಲು ಮತ್ತು ಬಡ್ಡಿ ಸೇರಿಸಿ ಹಣ ಕಟ್ಟಲಾಗಿದೆ. ಕೊನೆಗೆ ಯಾವುದೇ ಲೋನ್ ಬೇಡ ಎಂದರೂ ಹಣ ಜಮಾ ಮಾಡಿ, ಹೆಚ್ಚಿನ ಹಣಕ್ಕೆ ಪೀಡಿಸುತ್ತಿದ್ದು ವಾಟ್ಸಾಪ್ ಕಾಲ್ ಮಾಡಿ, ಲೋನ್ ಕಾ ಪೈಸೆ ಬನೋ, ನಹೀತೋ ಅಪ್ ಕೀ ಎಡಿಟ್ ಪೋಟೋ ಮತ್ತು ವಿಡಿಯೋಸ್ ಸೆಂಡ್ ಕರುಂಗಿ ಎಂದು ಬೆದರಿಸಿದ್ದಾರೆ. ಹಾಗೆಯೇ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ. ಈಗಾಗಲೇ 2.06 ಲಕ್ಷ ಕಳೆದುಕೊಂಡಿರುವುದಾಗಿ ದೂರುದಾರರು ಅಳಲು ತೋಡಿಕೊಂಡಿದ್ದಾರೆ.