ರಾಮನಗರ : ಕುಮಾರಸ್ವಾಮಿ ಅವರೇ, ಚನ್ನಪಟ್ಟಣ ಚುನಾವಣೆಯಲ್ಲಿ ನಿಮ್ಮ ಯಾವ ಹಣ ಬಲವೂ ನಡೆಯುವುದಿಲ್ಲ. ಸ್ಟೀಲ್, ಗಣಿ ಯಾವ ದುಡ್ಡು ತಂದಿದ್ದರೂ ಪ್ರಯೋಜನವಿಲ್ಲ. ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕೆಲಸಗಳು ನಮ್ಮ ಕೈ ಹಿಡಿಯಲಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ದೊಡ್ಡ ಮಳೂರಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರವಾಗಿ ಮತ ಯಾಚಿಸಿದ ಶಿವಕುಮಾರ್, ಎಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ನಿಮ್ಮ ಬಳಿ ಹಣ ತೆಗೆದುಕೊಂಡು, ಜನ ಯೋಗೇಶ್ವರ್‌ಗೆ ಓಟು ಹಾಕುತ್ತಾರೆ. ಕುಮಾರಸ್ವಾಮಿ ನೋಟು, ಯೋಗೇಶ್ವರ್‌ಗೆ ಓಟು. ಚನ್ನಪಟ್ಟಣದಲ್ಲಿ ಅಭಿವೃದ್ಧಿಯ ಗಾಳಿ ಬೀಸಬೇಕು. ಅದಕ್ಕಾಗಿ ಸರ್ಕಾರದ ಎಲ್ಲ ಮಂತ್ರಿಗಳು ಇಲ್ಲಿಗೆ ಬಂದಿದ್ದೇವೆ. ಯೋಗೇಶ್ವರ್‌ಗೆ ಬೆಂಬಲ ನೀಡಿ ಚನ್ನಪಟ್ಟಣದ ಅಭಿವೃದ್ಧಿ ಮಾಡುತ್ತೇವೆ ಎಂದರು.
ಜಮೀನಿ ಕೊಡಿ, ದುಪ್ಪಟ್ಟು ಹಣ ಕೊಡ್ತೀವಿ
ಕುಮಾರಣ್ಣ ಈಗ ಎಂಥದ್ದೋ ್ಯಾಕ್ಟರಿ ತರುತ್ತಾರಂತೆ, ತುಂಬಾ ಸಂತೋಷದ ವಿಚಾರ. ಬಿಡದಿಯ ಕೇತಿಗಾನಹಳ್ಳಿ ಬಳಿಯ ಜಮೀನಿದೆಯಲ್ಲ ಅಲ್ಲಿಯೇ ಕಾರ್ಖಾನೆ ಮಾಡಿ, ನಿಮ್ಮ ಜಮೀನಿಗೆ ದುಪ್ಪಟ್ಟು ಹಣ ಕೊಡುತ್ತೇವೆ ಎಂದ ಡಿಕೆಶಿ, ದೊಡ್ಡ ಆಲಹಳ್ಳಿ ಕೆಂಪೇಗೌಡರ ಮಕ್ಕಳು ಶಾಲೆಗಳ ಸ್ಥಾಪನೆ ವಾಡಲು 25 ಎಕರೆ ಜಮೀನನ್ನು ದಾನ ವಾಡಿದ್ದಾರೆ. ನೀವು ಒಬ್ಬರಿಗೂ ಸಹಾಯ ಮಾಡಿಲ್ಲ ಎಂದು ವ್ಯಂಗ್ಯವಾಡಿದರು.
ನೀವು, ನಿಮ್ಮ ಪತ್ನಿ, ತಂದೆ ಎಲ್ಲರೂ ಅಧಿಕಾರ ಅನುಭವಿಸಿದ ರಾಮನಗರಕ್ಕೆ ಯಾವುದೇ ಕೆಲಸ ಮಾಡದ ಕಾರಣಕ್ಕೆ ನಿಖಿಲ್‌ನನ್ನು ಸೋಲಿಸಿ, ನಿಮಗೆ ಪಾಠ ಕಲಿಸಿದರು. ಯೋಗೇಶ್ವರ್ ವಾಡಿದ ತಪ್ಪಿನಿಂದಾಗಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗೆದ್ದಿದ್ದಾರೆ ಎಂದರು.
ಕಣ್ಣೀರು ಹಾಕಿ ಸುಳ್ಳು ಹೇಳುತ್ತಾರೆ : ಶಾಸಕರಾದವರ ಕೆಲಸ ಅಭಿವೃದ್ಧಿ ವಾಡುವುದು. ಆದರೆ, ಅಭಿವೃದ್ಧಿ ವಾಡದೇ ಇರುವುದು ಕುವಾರಸ್ವಾಮಿ ಕೆಲಸ. ದೇವರು ಕೊಡುವ ಅವಕಾಶವನ್ನು ಬಳಸಿಕೊಂಡು ಜನರ ಒಳಿತಿಗಾಗಿ ದುಡಿಯಬೇಕು. ಆದರೆ, ನಿಮ್ಮ ಕೈಯಲ್ಲಿ ರಾಮನಗರದಲ್ಲಿ ಒಂದು ಬಸ್ ನಿಲ್ದಾಣ ಮಾಡಲು ಸಾಧ್ಯವಾಗಲಿಲ್ಲ ಎಂದು ಡಿಕೆಶಿ ಟೀಕಿಸಿದರು.