ಜಿಲ್ಲೆ

ಸಾವಿತ್ರಿಬಾಯಿ ಪುಲೆ  ಇಂದಿನ ಸಮಾಜಕ್ಕೂ ಮಾದರಿ

ಮಂಜುನಾಥ ಕೋಳಿಗುಡ್ಡ

ಡಿಡಿಪಿಐ ಲಿಲಾವತಿ ಹಿರೇಮಠ ಅಭಿಮತ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಘನತೆಯ ಬದುಕಿಗೆ ಶಿಕ್ಷಣವೊಂದೇ ದಾರಿ ಎಂದು ನಂಬಿದ ಸಾವಿತ್ರಿಬಾಯಿ ಪುಲೆ ಇಂದಿನ ಸಮಾಜಕ್ಕೂ ಮಾದರಿಯಾಗಿದ್ದಾರೆ. ಸಾವಿತ್ರಿಬಾಯಿ ಅವರು ಆದರ್ಶ ಶಿಕ್ಷಕಿ, ಚಿಂತಕಿ, ಹೋರಾಟಗಾರ್ತಿಯಾಗಿ ಸಮಾಜದ ಒಳಿತಿಗಾಗಿ ಶ್ರಮಿಸಿದರು ಎಂದು ಬೆಳಗಾವಿ ಶೈಕ್ಷಣಿಕ ಜಿಲ್ಲೆ ಡಿಡಿಪಿಐ ಲೀಲಾವತಿ ಹಿರೇಮಠ ಹೇಳಿದರು.

ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಹಾಗೂ ಸಾವಿಬಾಯಿ ಪುಲೆ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತೊಟ್ಟಿಲು ತೂಗುವ ಕೈ ಜಗತ್ತನ್ನ ತುಗಬಲ್ಲದು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬುದಕ್ಕೆ ಸಾಕ್ಷಿಯಾಗಿರುವ ಸಾವಿತ್ರಿಬಾಯಿ ುಲೆ ಅವರ ಜೀವನವೇ ನಮಗೆಲ್ಲಾ ದಾರಿದೀಪವಾಗಿದೆ ಎಂದರು.

ಹಲವಾರು ಅವಮಾನ ಅಪಮಾನಗಳನ್ನು ಸಹಿಸಕೊಂಡು ಹಿಡಿದು ಪಟ್ಟು ಬಿಡದೆ ಶಿಕ್ಷಣ ಕಲಿತು ಭಾರತದ ಪ್ರಥಮ ಮಹಿಳಾ ಶಿಕ್ಷಕಿಯಾಗಿ ಮಹಿಳೆಯರಿಗೆ ಶಿಕ್ಷಣ ನೀಡಿ ಸಾಧನೆ ಮಾಡಿದ ಅಕ್ಷರದ ಅವ್ವ ಶೈಕ್ಷಣಿಕ ಕ್ರಾಂತಿಯಾಗಿ ಮಾಡಿದ ಸಾವಿತ್ರಿಬಾಯಿ ಪುಲೆ ಅವರ ಸದಾ ಸ್ಮರನೀರು. ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತ ಎನ್ನುವ ಕಾಲ ಮುಗಿದಿದ್ದು ಈಗ ಎಲ್ಲಾ ರಂಗದಲ್ಲೂ ಮಹಿಳೆಯರು ತಮ್ಮ ಛಾವು ಮೂಡಿಸಿದ್ದಾರೆ. ಅದರಲ್ಲಿ ಶಿಕ್ಷಣ ಕ್ಷೇಥ್ರದಲ್ಲಿ ಮಹಿಳೆಯರದ್ದು ಸಂಹಿ ಪಾಲಾಗಿದ್ದು, ಉತ್ತಮ ಸ್ವಾಸ್ಥ ಸಮಾಜವನ್ನು ನಿರ್ಮಾಣ ಮಾಡುವಂತಹ ಶಕ್ತಿ ಶಿಕ್ಷಕಿಯರಿಗದೆ ಎಂದು ಹೇಳಿದರು.

ಸ್ಮಾರ್ಟ್ ಸಿಟಿ ಎಂಡಿ ಸೈದಾ ಆಫ್ರೀನ್ ಬಾನು ಬಳ್ಳಾರಿ ಮಾತನಾಡಿ, ಸಮಾನತೆಯ ಸಮಾಜ ಅಭಿವೃದ್ಧಿ, ಶೈಕ್ಷಣಿಕ ಸಮಾಜ ನಿರ್ಮಿಸುವಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ. ದೇಶದ ಪ್ರಥಮ ಮಹಿಳಾ ಶಿಕ್ಷಕಿಯಾಗಿ ಮಹಿಳೆಯರಿಗೆ ಶಿಕ್ಷಣ ನೀಡಿ ಸಾಧನೆ ಮಾಡಿದ ಸಾವಿತ್ರಿಬಾಯಿ ಪುಲೆ ಅವರು ಪ್ರತಿಯೊಬ್ಬರ ಮಹಿಳೆಗೆ ಸ್ಪೂರ್ತಿಯಾಗಿದ್ದಾರೆ. ಮಹಿಳೆಯುರು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು ಎಂದರು.

ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮಹಿಳೆಯು ಆರ್ಥಿಕವಾಗಿ ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೆ ಮಾತ್ರ ಸಮಾಜ ಅಭಿವೃದ್ಧಿ ಸಾಧ್ಯ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಅವರಿಗೆಲ್ಲಾ ವೇದಿಕೆ ಕಲ್ಪಿಸಿದರೆ ಸಾಸಿ ತೋರಿಸುವ ಸಾಮರ್ಥ್ಯ ಅವರಲ್ಲಿ ಅಡಗಿದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ 67 ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ಮಾತೆ ಸಾವಿತ್ರಿಬಾಯಿ ುಲೆ ಜಿಲ್ಲಾ ಪ್ರಶಸ್ತಿ ಪ್ರಧಾನ ಮಾಡಲಾಯಿತು. 16 ಶಾಲೆಗಳಿಗೆ ಅತ್ಯುತ್ತಮ ಶಾಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ನಸ್ರಿನ್‌ಬಾನು ಎಚ್.ಕಾಶೀಂನವರ, ಕ್ಷೇತ್ರ ಶಿಕ್ಷಣಾಕಾರಿ ಎಸ್.ಪಿ.ದಾಸಪ್ಪನವರ, ಎ.ಎಸ್.ಪ್ಯಾಟಿ, ಸಿ.ವೈ.ತುಬಾಕದ ಇತರರಿದ್ದರು.