ಜಿಲ್ಲೆ

ಇಡಿಗೆ ಕಾಂಗ್ರೆಸ್ ಸಂಸದ, ಶಾಸಕರೇ ಗುರಿ : ರಾಜ್ಯಸಭೆ ಪ್ರತಿ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿ

ಬಾಬುರಾವ ಯಡ್ರಾಮಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಜಾರಿ ನಿರ್ದೇಶನಾಲಯ (ಇ.ಡಿ) ಮೊದಲಿನಿಂದಲೂ ಕಾಂಗ್ರೆಸ್ ನಾಯಕರು, ಶಾಸಕರು,ಸಂಸದರನ್ನು ಗುರಿ ಮಾಡುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ವರ್ಷದ ಹಿಂದಿನ ಚುನಾವಣೆ ಖರ್ಚು ಎಂದು ಇದೀಗ ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ. ನಮ್ಮ ಶಾಸಕರನ್ನು ಒಡೆಯುವ ಬೆದರಿಸುವ ಕೆಲಸ ಮಾಡಿದ್ದರೂ ಎಲ್ಲರೂ ಒಂದಾಗಿz್ದÉÃವೆ.

ಚುನಾವಣೆಯಲ್ಲಿ ಎಲ್ಲ ಪP್ಷÀದವರ ಸಾವಿರಾರು ಕೋಟಿ ರೂ. ಜಪ್ತಿ ಮಾಡಿz್ದÁರೆ. ಆ ಹಣ ಎಲ್ಲಿಗೆ ಹೋಯ್ತು ಎಂಬುದು ಇದುವರೆಗೆ ತಿಳಿದಿಲ್ಲ. ಇತ್ತೀಚಿನ ಚುನಾವಣೆಗಳಲ್ಲಿ ಎಲ್ಲ ಪP್ಷÀಗಳವರು ಹಣ ಖರ್ಚು ಮಾಡುತ್ತಾರೆ. ಒಟ್ಟಾರೆಯಾಗಿ ಕಿರುಕುಳ ಕೊಟ್ಟರೆ ಪಕ್ಷದಲ್ಲಿ ಭೇದ ಉಂಟಾಗುತ್ತದೆ. ಇದರಿಂದ ನಾವು ಲಾಭ ಪಡೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರ ಎಂದು ಹೇಳಿದರು.