ಜಿಲ್ಲೆ

ಧರ್ಮಸ್ಥಳ ಯೋಜನೆಯಿಂದ ಆರ್ಥಿಕ ಚೈತನ್ಯ

Avinash R

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿಳಿನೆಲೆ ವಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾತಿ ಆಗಿರುವ ವಿವಿಧ ಅನುದಾನಗಳ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಳಿನೆಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ, ಧಾರ್ಮಿಕ ಹಿನ್ನೆಲೆಯುಳ್ಳ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಾರ್ಯಕ್ರಮಗಳು ವ್ಯಕ್ತಿಯನ್ನು ಸಮಾಜಮುಖಿಯಾಗಿ ರೂಪಿಸುವುದರೊಂದಿಗೆ ಆರ್ಥಿಕ ಚೈತನ್ಯಕ್ಕೂ ಕಾರಣವಾಗಿದೆ. ಯೋಜನೆಯಿಂದ ಹಮ್ಮಿಕೊಂಡ ಪ್ರತಿಯೊಂದು ಕಾರ್ಯಕ್ರಮ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತದೆ ಎಂದರು.

ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಮುಖ್ಶಶಿಕ್ಷಕ ಸತ್ಶಶಂಕರ್ ಸಂಪನ್ಮೂಲ ವ್ಶಕ್ತಿಯಾಗಿದ್ದರು. ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಂಬಾರು ,ಸಿರಿಬಾಗಿಲು, ಸುಂಕದಕಟ್ಟೆ ಐತ್ತೂರು, ಪಾಲೆತಡ್ಕ ಬಂಟ್ರ ಶಾಲೆಗಳಿಗೆ ಡೆಸ್ಕ್ ಬೆಂಚ್ ಮಂಜೂರಾತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರ್ಮಾಯಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುತ್ತಿಲ ಬೈಲಡ್ಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಲೆತಡ್ಕ ಬಂಟ್ರ ಶಾಲೆಗೆ ಜ್ಞಾನದೀಪ ಶಿಕ್ಷಕರ ಮಂಜೂರಾತಿ ಪತ್ರ ಹಾಗೂ ವೃತ್ತಿಪರ ಶಿಕ್ಷಣ ಮಾಡುತ್ತಿರುವ 47 ವಿದ್ಶಾರ್ಥಿಗಳಿಗೆ ಮಂಜೂರಾದ ಸುಜ್ಞಾನ ನಿಧಿ ಶಿಷ್ಯವೇತನದ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.

ಬಿಳಿನೆಲೆ ವಲಯದ ನಿಕಟಪೂರ್ವ ವಲಯಾಧ್ಶಕ್ಷ ಸತೀಶ್ ಎರ್ಕ ಮಾತನಾಡಿದರು. ಬಿಳಿನೆಲೆ ಒಕ್ಕೂಟದ ಅಧ್ಶಕ್ಷ ರಾಜೇಶ್ ಒಗ್ಗು ಅಧ್ಶಕ್ಷತೆ ವಹಿಸಿದ್ದರು. ಮರ್ಧಾಳ ಶೌರ್ಯ ಘಟಕದ ಘಟಕ ಪ್ರತಿನಿಧಿ ಹಾಗೂ ತಾಲೂಕು ಶೌರ್ಯ ಘಟಕದ ಕ್ಯಾಷ್ಟನ್ ಭವಾನಿಶಂಕರ್, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ ಉಪಸ್ಥಿತರಿದ್ದರು.

ಬಿಳಿನೆಲೆ ವಲಯ ಮೆಲ್ವೀಚಾರಕ ರವಿಪ್ರಸಾದ್ ಆಲಾಜೆ ಪ್ರಾಸ್ತಾವಿಸಿ ಸ್ವಾಗತಿಸಿದರು. ಸಿರಿಬಾಗಿಲು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ವಿನೋದ್ ಕೆ.ಸಿ.ವಂದಿಸಿದರು. ಬಿಳಿನೆಲೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಸತೀಶ್ ಆಜಾನ ಕಾರ್ಯಕ್ರಮ ನಿರ್ವಹಿಸಿದರು.