ಜಿಲ್ಲೆ

ಗ್ರಾಮಾಭಿವೃದ್ಧಿ ಯೋಜನೆಯಿಂದ ಆರ್ಥಿಕ ಸದೃಢತೆ

ಜಿ.ಹೆಚ್. ಧನ್ಯಕುಮಾರ್

ಆಲ್ದೂರು: ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಗ್ರಾಮಾಭಿವೃದ್ಧಿ ಯೋಜನೆ ಕಾರಣ ಎಂದು ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹಾಂದಿ ಸಮೀಪದ ಕೃಷ್ಣಪ್ಪ ಬಡಾವಣೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯಮಟ್ಟದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಮಹಿಳೆಯರು ಸದೃಢರಾಗಲು ಧರ್ಮಸ್ಥಳ ಸಂಘದ ಯೋಜನೆ, ಕಾರ್ಯಕ್ರಮಗಳು ಸಹಕಾರಿಯಾಗಿವೆ. ಸಂಘದಿಂದ ಮಹಿಳೆಯರಿಗೆ ವ್ಯವಹಾರಿಕ ಜ್ಞಾನ ದೊರೆತಿದೆ ಎಂದರು.

ಪರಿಶ್ರಮದ ಮೂಲಕ ನಮ್ಮ ಬದಕನ್ನು ಸಾರ್ಥಕತೆ ಕಡೆಗೆ ಕೊಂಡ್ಯೊಯಬೇಕು. ಸ್ವ ಸಹಾಯ ಸಂಘಗಳಲ್ಲಿ ಮಹಿಳೆಯರು ತೊಡಗಿಸಿಕೊಂಡು ವ್ಯವಹಾರಿಕ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಸಂಘಗಳ ಮೂಲಕ ಮನೆಯಿಂದ ಹೊರ ಬಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾಳೆ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕ ಯೋಜನಾಧಿಕಾರಿ ಶಿವಾನಂದ್ ಪಿಲಾರ್, ನಿವೃತ್ತ ಶಿಕ್ಷಕ ನಂಜುಂಡಪ್ಪ ಮಾತನಾಡಿದರು. ಮೇಲ್ವಿಚಾರಕ ವಿಜಯ್ ಕುಮಾರ್ ವಾರ್ಷಿಕ ವರದಿ ಮಂಡಿಸಿದರು. ಪೂಜಾ ಸಮಿತಿ ಅಧ್ಯಕ್ಷ ಕೆ.ಎಲ್ ಕುಮಾರ್, ಕೆಳಗೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ನಳಿನಾಕ್ಷಿ,ಶೌರ್ಯ ವಿಪತ್ತು ಘಟಕದ ಮುಖ್ಯಸ್ಥ ಅಣ್ಣಪ್ಪ ನಾಯರ್, ನಿವೃತ್ತ ಸೈನಿಕ ದೂಜ ಪೂಜಾರಿ, ಸಂಯೋಜಕ ಸುರೇಶ್ ಮತ್ತಿರರಿದ್ದರು.