ಜಿಲ್ಲೆ

ಕಾಳುಮೆಣಸು ಬೆಳೆದರೆ ಆರ್ಥಿಕ ಸ್ವಾವಲಂಬನೆ

Avinash R

ಸುಳ್ಯ: ಅಡಕೆ ಹಳದಿ ರೋಗ ಹಾಗೂ ಎಲೆಚುಕ್ಕೆ ರೋಗಗಳಿಂದಾಗಿ ಆತಂಕಕ್ಕೊಳಗಾಗಿರುವ ಅಡಕೆ ಬೆಳೆಯುವ ಕೃಷಿಕರು ಆಧುನಿಕ ಪದ್ಧತಿಯಲ್ಲಿ ಕಾಳುಮೆಣಸು ಬೆಳೆದರೆ ಆರ್ಥಿಕ ಸ್ವಾವಲಂಬನೆ ಸಾಧ್ಯ ಎಂದು ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡು ಹೇಳಿದರು.

ಮಂಡೆಕೋಲು ಕೃಷಿ ಪತ್ತಿನ ಸಹಕಾರಿ ಸಂದ ವತಿಯಿಂದ ಸೋಮವಾರ ಕಾಳುಮೆಣಸು ಕೃಷಿ ಹಾಗೂ ಅಡಕೆ ಬೆಳೆಯ ರೋಗಗಳು, ನಿರ್ವಹಣೆ ಬಗ್ಗೆ ವಿಶೇಷ ವಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಾತನಾಡಿದರು.

ಸಹಕಾರಿ ಸಂದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಸಂದ ಮುಖ್ಯಕಾರ್ಯನಿರ್ವಹಣಾಧಿಕಾರಿ ಉದಯಕುವಾರ್ ಜಿ.ಟಿ. ಪ್ರಸ್ತಾವಿಸಿದರು. ಸಂದ ಉಪಾಧ್ಯಕ್ಷೆ ಜಲಜಾ ದೇವರಗುಂಡ, ಸಹಕಾರಿ ಸಂದ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.

ಸಂದ ನಿರ್ದೇಶಕ ಚಂದ್ರಜಿತ್ ವಾವಂಜಿ ಸ್ವಾಗತಿಸಿದರು. ಸುರೇಶ್ ಕಣೆಮರಡ್ಕ ನಿರೂಪಿಸಿದರು. ಪದ್ಮನಾಭ ಚೌಟಾಜೆ ವಂದಿಸಿದರು.

ಕಾಳುಮೆಣಸು ಬಳ್ಳಿ ನೆಲದಲ್ಲಿ ಹಾದುಹೋಗುವಂತಿದ್ದರೆ ಅದನ್ನು ತುಂಡರಿಸಿ ಒಂದೂವರೆ ಅಡಿಯಷ್ಟು ಮಣ್ಣಿನಲ್ಲಿ ಹುದುಗಿಸಿ ನೆಡಬೇಕು. ಮೇ ತಿಂಗಳ ಕೊನೆಯ ವಾರದ ಬಳಿಕ ನೆಟ್ಟರೆ ಉತ್ತಮ. ಬಳ್ಳಿಯ ಬೆಳವಣಿಗೆ ಅಥವಾ ಉತ್ತಮ ಇಳುವರಿ ಪಡೆಯಲು ರಾಸಾಯನಿಕ ಅಥವಾ ಸಾವಯವ ಗೊಬ್ಬರವನ್ನು ಹಿತಮಿತವಾಗಿ ಒದಗಿಸಬೇಕು. ಬುಡದಲ್ಲಿ ನೀರು ನಿಲ್ಲದಂತೆ ಜಾಗರೂಕತೆ ವಹಿಸುವುದರ ಜತೆಗೆ ಆಧುನಿಕ ಪದ್ಧತಿಯಲ್ಲಿ ಕೃಷಿ ವಾಡಿದರೆ ಕಾಳುಮೆಣಸು ಬಳ್ಳಿ ಉತ್ತಮ ಇಳುವರಿ ನೀಡುತ್ತದೆ. - ಸುರೇಶ್ ಬಲ್ನಾಡು, ಪ್ರಗತಿಪರ ಕೃಷಿಕ. https://www.vijayavani.net/chappara-muhurta-of-kerala-state-childrens-literature-conference https://www.vijayavani.net/social-work