ಬಾಗಲಕೋಟೆ ನಗರದ ಬಸವೇಶ್ವರ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಉಚಿತ ಕೌಶಲ ತರಬೇತಿ ಸಮಾರೋಪ ಸಮಾರಂಭ. ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬ್ಯಾಂಕಿನ ಉಪಾಧ್ಯಕ್ಷ ಎಂ.ಜಿ. ವಾಲಿ, ಜಿಲ್ಲಾ ವನಿತಾ ಲೋಕದ ಅಧ್ಯಕ್ಷೆ ಜಯಮ್ಮ ಅಬ್ದುಲಪುರ, ಉಷಾ ಜಿಗಜಿನ್ನಿ, ಶ್ರೀನಿವಾಸ ಬಳ್ಳಾರಿ, ವಿ.ವಿ. ಶಿರಗಣ್ಣವರ, ರವಿ ಪಟ್ಟಣದ, ವಿ.ವಿ. ಕುಲಕರ್ಣಿ ಇತರರಿದ್ದರು. 
ಜಿಲ್ಲೆ

ಕೌಶಲದಿಂದ ಆರ್ಥಿಕ ಪ್ರಗತಿ

ದತ್ತಾತ್ರೇಯ ಪಿ ಕುಲಕರ್ಣಿ

ಬಾಗಲಕೋಟೆ: ಯಾವುದೇ ಕ್ಷೇತ್ರದಲ್ಲಿ ಇಂದು ಕಾಯಕ ಮಾಡಿದರೂ ಅದಕ್ಕೆ ಅಗತ್ಯವಾದ ಕೌಶಲ ಬೇಕು. ಕೌಶಲವನ್ನು ಪ್ರತಿಯೊಬ್ಬರು ಕಾಲಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬೇಕು. ಇದರಿಂದ ಆರ್ಥಿಕ ಪ್ರಗತಿ ಹೊಂದಲು ಸಾಧ್ಯ ಎಂದು ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.
ನವನಗರದ ಬಸವೇಶ್ವರ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಬಸವೇಶ್ವರ ಸಹಕಾರಿ ಬ್ಯಾಂಕ್, ಸಿರಿ ಸಾಂಸ್ಕೃತಿಕ ಸಂಘ, ಜಿಲ್ಲಾ ವನಿತಾ ಲೋಕ, ವನಸಿರಿ ಸರ್ವಾಭಿವೃದ್ಧಿ ಸೇವಾ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿವಿಧ ಉಚಿತ ಕೌಶಲ ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಅನೇಕ ವರ್ಷಗಳಿಂದ ನಮ್ಮ ಬ್ಯಾಂಕ್ ಮಹಿಳೆಯರಿಗೆ ಕೌಶಲ ತರಬೇತಿ ನೀಡುತ್ತಾ ಬಂದಿದೆ. ಇದರಿಂದ ಅನೇಕ ಕುಟುಂಬದ ಆರ್ಥಿಕ, ಸಾಮಾಜಿಕ ಜೀವನ ಸುಧಾರಣೆ ಕಂಡಿದೆ. ಕೌಶಲ ತರಬೇತಿ ಪಡೆದು ವೃತ್ತಿ ಆರಂಭಿಸಿದ ಕೆಲವರು ಕುಟುಂಬದ ಜವಾಬ್ದಾರಿ ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಸ್ವಾವಲಂಬನೆ ಜೀವನಕ್ಕೆ ಕೌಶಲಗಳು ಅಗತ್ಯವಾಗಿ ಬೇಕು ಎಂದರು.

ಕೌಶಲ ಮತ್ತು ಅಭಿವೃದ್ಧಿ ಇಲಾಖೆ ಅಧಿಕಾರಿ ಎನ್.ಎಸ್. ಯರಗುಡಿ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಬಾಂಗ್ಲಾ ದೇಶದ ಗಡಿಭಾಗದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸವಿತಾ ಸುಗತೇಕರ ಅವರನ್ನು ಸನ್ಮಾನಿಸಲಾಯಿತು. ಜಾನಪದ ಕಲಾವಿದೆ ಪವಿತ್ರಾ ಜಕ್ಕಪ್ಪನವರ ಸಂಗೀತ ಕಾರ್ಯಕ್ರಮ ನೀಡಿದರು. 45 ದಿನಗಳ ಬ್ಯೂಟಿಷಿಯನ್ ತರಬೇತಿ, ಆರಿ ವರ್ಕ್ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಬ್ಯಾಂಕಿನ ಉಪಾಧ್ಯಕ್ಷ ಎಂ.ಜಿ. ವಾಲಿ, ಜಿಲ್ಲಾ ವನಿತಾ ಲೋಕದ ಅಧ್ಯಕ್ಷೆ ಜಯಮ್ಮ ಅಬ್ದುಲಪುರ, ಉಷಾ ಜಿಗಜಿನ್ನಿ, ಶ್ರೀನಿವಾಸ ಬಳ್ಳಾರಿ, ವಿ.ವಿ. ಶಿರಗಣ್ಣವರ, ರವಿ ಪಟ್ಟಣದ, ವಿ.ವಿ. ಕುಲಕರ್ಣಿ, ಸುರೇಶ ಜಂಗಿ, ನಿಂಗಪ್ಪ ಪಲ್ಲೇದ ಉಪಸ್ಥಿತರಿದ್ದರು. ಶೃತಿ ಕಂಕಾಳೆ ಸ್ವಾಗತಿಸಿದರು. ಅರ್ಚನಾ ಗಡ್ಡಿಮಠ ನಿರೂಪಿಸಿದರು.