ಮಾಂಜರಿ ಗ್ರಾಮದಲ್ಲಿ ಚಿಕ್ಕೋಡಿಯ ಸಾಯಿ ಸೌಹಾರ್ದ ಸಹಕಾರಿ ಸಂಸ್ಥೆಯ 21ನೇ ಶಾಖೆ ಉದ್ಘಾಟಿಸಲಾಯಿತು. ಸಂಪಾದನ ಸ್ವಾಮೀಜಿ, ಜಗದೀಶ ಕವಟಗಿಮಠ, ಅಣ್ಣಸಾಹೇಬ ಯಾದವ, ಶೀತಲಿ ಯಾದವ್, ಶಶಿಕಾಂತ ಪಾಟೀಲ, ಶಂಕರ ಕೋರೆ ಇತರರು ಇದ್ದರು. 
ಜಿಲ್ಲೆ

ಆರ್ಥಿಕ ಅಭಿವೃದ್ಧಿಗೆ ಸಹಕಾರಿಗಳು ಶ್ರಮಿಸಲಿ

ಶಂಕರ ಗೆಜ್ಜಿ

ಮಾಂಜರಿ: ಸಹಕಾರಿ ಸಂಘಗಳು ಜನರಿಗೆ ನಿಸ್ವಾರ್ಥ ಸೇವೆ ನೀಡಿ, ಸಮಾಜದಲ್ಲಿ ಆರ್ಥಿಕ ಪ್ರಗತಿಗೆ ಶ್ರಮಿಸಬೇಕು. ಸುಶಿಕ್ಷಿತ ನಿರುದ್ಯೋಗಿ ಯುವಕರಿಗೆ ಅರ್ಥಿಕ ಸಹಾಯ ಹಾಗೂ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸಲಿ ಎಂದು ಚಿಕ್ಕೋಡಿಯ ಸಂಪಾದನ ಮಠದ ಸಂಪಾದನಾ ಸ್ವಾಮೀಜಿ ಹೇಳಿದರು. ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯ ಸೌಹಾರ್ದ ಸಹಕಾರಿ ಸಂಸ್ಥೆ ಉಪಾಧ್ಯಕ್ಷ ಜಗದೀಶ ಕವಟಿಗಿಮಠ ನೇತತ್ವದ ಶ್ರೀ ಸಾಯಿ ಕ್ರೆಡಿಟ್ ಸೌಹಾರ್ದ ಸಂಸ್ಥೆಯ 21ನೆಯ ಶಾಖೆಯ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜಗದೀಶ ಕವಟಗಿಮಠ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಘದ ಮೂಲಕ ಸಾಲ ಪಡೆದ ಸರ್ವ ಸದಸ್ಯರು ಸರಿಯಾದ ವೇಳೆಗೆ ಸಾಲ ಮರುಪಾವತಿ ಮಾಡಿ ಸಂಸ್ಥೆಯ ಆರ್ಥಿಕ ಪ್ರಗತಿಗಾಗಿ ಸಹಕರಿಸಬೇಕು ಎಂರು. ಸ್ಥಳೀಯ ಸಲಹಾ ಸಮಿತಿ ಸದಸ್ಯರು ಸಹಕಾರಿ ಸಂಸ್ಥೆಯ ಮುಖಾಂತರ ಸರ್ವಸಾಮಾನ್ಯ ಜನರಿಗೆ ಸಂಸ್ಥೆಯ ಯೋಜನೆಗಳ ಮುಖಾಂತರ ಸಹಕಾರಿಯಾಗಬೇಕೆಂದು ಹೇಳಿದರು. ಸಮಾರಂಭಕ್ಕೆ ಹಾಜರಿದ್ದ ಗಣ್ಯರಿಂದ ಸದಸ್ಯರಿಗೆ ಠೇವಣಿಯ ಸಂಗ್ರಹ ಪಾವತಿ ವಿತರಿಸಲಾಯಿತು. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಚಿದಾನಂದ ಕೋರೆ ಸಹಕಾರಿ ಸಂಸ್ಥೆಯ ಉಪಾಧ್ಯಕ್ಷ ತಾತ್ಯಾಸಾಹೇಬ್ ಕಾಟೆ, ದತ್ತ ಶೇತಕರಿ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅಮರ್ ಯಾದವ್, ಮಾಂಜರಿ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಣ್ಣಾಸಾಹೇಬ ಯಾದವ್, ಉಪಾಧ್ಯಕ್ಷ ಷಡಕ್ಷರಿ ಮೂಗಿರಿ, ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಡುಂಡಿರಾಮ ಬೇಡಿಗೆ, ಉಪಾಧ್ಯಕ್ಷ ಶಶಿಕಾಂತ ಪಾತೋಳೆ, ನಿರ್ದೇಶಕರಾದ ಮನೋಹರ ತೋರಿಸಿ, ದಿಲೀಪ ಶಿಂದೆ, ಾರೂಕ್ ತಾಂಬೋಳಿ, ಸುನಿಲ ಕಿಚಡಿ, ದರ್ಶನ ಭೋಜಕರ, ಶಂಕರ ಕೋರೆ, ಓಂಕಾರ ಕೋತ್, ದಸ್ತಗೀರ್ ಮತ್ತೆಭಾಹಿ, ಶೀತಲಿ ಯಾದವ್, ಭವನ್ ಬಿಲವಡೆ ಇತರರು ಇದ್ದರು.