ಜಿಲ್ಲೆ

ಹೈನುಗಾರಿಕೆಯಿಂದ ಆರ್ಥಿಕ ಸಬಲೀಕರಣ

ತುಮಕೂರು ಡೆಸ್ಕ್

ತುರುವೇಕೆರೆ: ಜಿಲ್ಲಾ ಹಾಲು ಸಹಕಾರ ಸಂಘಗಳ ಒಕ್ಕೂಟದ ಆಶ್ರಯದಲ್ಲಿರುವ ಎಲ್ಲ ಹಾಲು ಉತ್ಪಾದಕರಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದು ತುಮುಲ್​ ಸಿ.ವಿ.ಮಹಲಿಂಗಯ್ಯ ಹೇಳಿದರು.

ತಾಲೂಕಿನ ಡಿ.ಕಲ್ಕೆರೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ನೂತನವಾಗಿ ಪ್ರಾರಂಭಿಸಲಾದ ಹಾಲು ಶೇಖರಣಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಂದಿನಿ ಹಾಲು ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ. ನಂದಿನಿ ಹಾಲಿನ ಉತ್ಪನ್ನವೂ ಸಹ ದೇಶ ವಿದೇಶಗಳಲ್ಲಿ ಹೆಸರು ಮಾಡಿದೆ. ಗುಣಮಟ್ಟವನ್ನು ಅದು ಕಾಯ್ದಿರಿಸಿಕೊಂಡಿದೆ. ಈ ಹಾಲು ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುವ ಉತ್ಪಾದಕರಿಗೂ ಸಹ ವಿಶೇಷವಾದ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದರು.

ಡಿ.ಕಲ್ಕೆರೆ ಡೇರಿ ಅಧ್ಯಕ್ಷ ನಯಾಜ್​ ಪಾಷಾ ಮಾತನಾಡಿ, ಕಳೆದ 9 ವರ್ಷಗಳ ಹಿಂದೆ ಮುಚ್ಚಿ ಹೋಗಿದ್ದ ಡೇರಿಗೆ ಮರು ಜೀವ ನೀಡಲಾಗಿದೆ. ಹಾಲು ಸರಬರಾಜು ಮಾಡುವ ರೈತರಿಗೆ ಉತ್ತಮ ದರ ನೀಡಲಾಗುತ್ತಿದೆ. ಹಾಗಾಗಿ ರೈತಾಪಿಗಳು ನೂತನವಾಗಿ ಪ್ರಾರಂಭಿಸಲಾಗಿರುವ ಡೇರಿಗೆ ಹಾಲು ಸರಬರಾಜು ಮಾಡುವ ಮೂಲಕ ತಮ್ಮ ಆರ್ಥಿಕತೆಯನ್ನು ಸುಧಾರಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷ ಶ್ರೀಕಂಠೇಗೌಡ, ಪದಾದಿಕಾರಿಗಳಾದ ಕೆ.ಜೆ.ರವೀಶ್​ ಗೌಡ, ಕೆ.ಎನ್​.ಮೃತ್ಯುಂಜಯ, ಕೆ.ಇ.ರವಿಕುಮಾರ್​, ಕೆ.ಎಸ್​.ಪರಮೇಶ್​, ಪದ್ಮಾ, ಪುಟ್ಟಮ್ಮ, ಕೆ.ಜಿ.ಕಣ್ಣನ್​, ಶೇಷಗಿರಿ, ಚಿಕ್ಕರಂಗಯ್ಯ, ಕೃಷ್ಣಪ್ಪ, ಕೆ.ಪಿ.ನವೀನ್​ ಕುಮಾರ್​, ಕಾರ್ಯದರ್ಶಿ ಕೆ.ಎನ್​.ಸಂಪತ್​ ಕುಮಾರ್​, ಹಾಲು ಪರೀಕ್ಷಕ ಸಲೀಂ, ಗ್ರಾಮದ ಮುಖಂಡ ನಾಗಣ್ಣಗೌಡ ಮತ್ತಿತರರು ಇದ್ದರು.