ಕೋಳೂರಿನಲ್ಲಿ ಪ್ರಗತಿ ಸಂಜೀವಿನಿ ಗ್ರಾಪಂ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು, ಪ್ರಮುಖರಾದ ವೆಂಕಟೇಶ, ಶಕುಂತಲಾ, ಗೌರಮ್ಮ, ದೇವಮ್ಮ, ಲಕ್ಷ್ಮವ್ವ ಇತರರು ಇದ್ದರು. 
ಜಿಲ್ಲೆ

ಆರ್ಥಿಕ ಅಭಿವೃದ್ಧಿಗೆ ಕೌಶಲ ತರಬೇತಿ

ರುದ್ರಪ್ಪ ವಾಲಿ

ಅಳವಂಡಿ: ಮಹಿಳಾ ಸದಸ್ಯರು ಆರ್ಥಿಕ ಅಭಿವೃದ್ಧಿ ಹೊಂದಲು ಕೌಶಲ ಹಾಗೂ ಸ್ವಯಂ ಉದ್ಯೋಗಗಳ ತರಬೇತಿ ನೀಡಲಾಗುತ್ತಿದೆ ಎಂದು ಸಂಜೀವಿನಿ ಯೋಜನೆಯ ವಲಯ ಮೇಲ್ವಿಚಾರಕ ವೆಂಕಟೇಶ ತಿಳಿಸಿದರು.

ಕೋಳೂರು ಗ್ರಾಮದಲ್ಲಿ ಪ್ರಗತಿ ಸಂಜೀವಿನಿ ಗ್ರಾಪಂ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಪ್ರಸಕ್ತ ವರ್ಷ ಒಕ್ಕೂಟದಡಿ ಮಹಿಳೆಯರು ಸಾಲ ಪಡೆದು ಸಾಕಷ್ಟು ಆದಾಯ ಗಳಿಸಿದ್ದಾರೆ.

ಇವರನ್ನು ಗುರುತಿಸಿ ದೆಹಲಿಯಲ್ಲಿ ನಡೆದ ಲಖಪತಿ ದೀದಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ ಎಂದರು.

ಒಕ್ಕೂಟದ ಅಧ್ಯಕ್ಷೆ ಶಕುಂತಲಾ ಪುಣ್ಯಮೂರ್ತಿ, ಉಪಾಧ್ಯಕ್ಷೆ ಗೌರಮ್ಮ ಆದಿ, ಕಾರ್ಯದರ್ಶಿ ದೇವಮ್ಮ ಕಾಟ್ರಳ್ಳಿ, ಉಪ ಕಾರ್ಯದರ್ಶಿ ಲಕ್ಷ್ಮವ್ವ ಹುಳಿಮುದ್ದಿ, ಎಮ್‌ಬಿಕೆ ಶಶಿಕಲಾ ಶೆಲ್ಯೂಡಿ, ಎಲ್‌ಸಿಆರ್‌ಪಿ ಪಾರ್ವತಿ, ಗಂಗಮ್ಮ, ಶೈಲಾ, ಪಶು ಸಖಿ ಜ್ಯೋತಿ, ಹಾಗೂ ಶಶಿಕಲಾ ಹಡಪದ, ವಿದ್ಯಾ ಸಂಘಗಳ ಮಹಿಳೆಯರು ಇದ್ದರು.