ಅನ್ಸಾರ್ ಇನೋಳಿ ಉಳ್ಳಾಲ
ಹಣ, ಆಸ್ತಿ, ಐಶ್ವರ್ಯ, ಅಧಿಕಾರ ಎಷ್ಟಿದ್ದರೂ ಮನುಷ್ಯನ ಕೊನೆ ಪಯಣ ವಾತ್ರ ಒಂದೋ ರುದ್ರಭೂಮಿ, ಇಲ್ಲವೇ ಖಬರಸ್ತಾನ. ಆದರೆ ಈ ಜಾಗದ ಬಗ್ಗೆ ಮನುಷ್ಯರಲ್ಲಿ ಅದೇನೋ ತಾತ್ಸಾರ ಭಾವನೆ. ಈ ಕಾರಣದಿಂದಾಗಿ ಇವರೆಡೂ ಸ್ಥಳಗಳು ಪೊದೆ, ಬಳ್ಳಿಗಳಿಂದ ಕೂಡಿರುತ್ತವೆ. ಆದರೆ ಇಲ್ಲೊಂದು ರುದ್ರಭೂಮಿ ಇಂಥ ಆರೋಪಗಳಿಗೆ ವ್ಯತಿರಿಕ್ತವಾಗಿ ನಿರ್ವಾಣಗೊಂಡು ಲೋಕಾರ್ಪಣೆಗೆ ಸಜ್ಜಾಗಿದೆ. ಇದು ಮುನ್ನೂರು ಗ್ರಾಮದಲ್ಲಿ ನಿರ್ವಾಣಗೊಂಡಿರುವ ಹಿಂದು ಮುಕ್ತಿಧಾಮದ ಕಥೆ.
ಪರಮೇಶ್ವರ ಪೂಜಾರಿ ಎಂಬುವರು 70 ಸೆಂಟ್ಸ್ ಜಮೀನನ್ನು 1989ರಲ್ಲಿ ಹಿಂದು ರುದ್ರಭೂಮಿಗೆಂದು ಮುನ್ನೂರು ಗ್ರಾಮದ ಕುತ್ತಾರ್ ಭಂಡಾರಬೈಲ್ ಎಂಬಲ್ಲಿ ದಾನವಾಗಿ ನೀಡಿದ್ದರು. 1999ರಲ್ಲಿ ಈ ಜಾಗದಲ್ಲಿ ಸಣ್ಣದೊಂದು ಚಿತಾಗಾರ ನಿರ್ಮಿಸಲಾಗಿತ್ತು. ಸಮರ್ಪಕ ನಿರ್ವಹಣೆ ಕೊರತೆಯಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಚಿತಾಗಾರ ಸಂಪೂರ್ಣ ಶಿಥಿಲಗೊಂಡು ಮೃತದೇಹ ಸುಡಲಾಗದ ಪರಿಸ್ಥಿತಿ ನಿರ್ವಾಣಗೊಂಡು, ಮೃತದೇಹವನ್ನು ಬೇರೆ ಕಡೆ ಕೊಂಡೊಯ್ಯಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಜಮೀನು ಪಾಳು ಬೀಳಲು ಬಿಡದ ಗ್ರಾಮಸ್ಥರು, ಹಿಂದು ಮುಕ್ತಿಧಾಮ ಸಮಿತಿ ಟ್ರಸ್ಟ್ ರಚಿಸಿ ನೋಂದಣಿ ವಾಡಿ ಚಿತಾಗಾರ ನಿರ್ವಾಣಕ್ಕೆ ಅಂದಾಜು ವೆಚ್ಚ, ವಿನ್ಯಾಸ ರೂಪಿಸಿದರು. ಜನವರಿಯಲ್ಲಿ ಕೆಲಸ ಆರಂಭಿಸಿ ದಾನಿಗಳ ನೆರವಿನಿಂದ ಸುಸಜ್ಜಿತ ಚಿತಾಗಾರ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಳ್ಳಾಲ ಭಾಗದ ಬಹುತೇಕ ಗ್ರಾಮಗಳಲ್ಲಿ ಹಿಂದು ರುದ್ರಭೂಮಿ ಇದೆ. ಆದರೆ ನಿರ್ವಹಣೆ ಕಷ್ಟ ಎನ್ನುವ ಕಾರಣದಿಂದ ಶಾಶ್ವತ ಸಿಬ್ಬಂದಿ ನೇಮಿಸದ ಕಾರಣ ಚೆಂಬುಗುಡ್ಡೆಯನ್ನೇ ಅವಲಂಬಿಸಿದ್ದಾರೆ. ಮುನ್ನೂರು ಗ್ರಾಮದಲ್ಲೂ ಮುಕ್ತಿಧಾಮದ ಮುಂಭಾಗದಲ್ಲಿರುವ ಅಂಗಡಿಯ ವ್ಯಕ್ತಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಮುಂದೆಯೂ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಆದರೂ ಶಾಶ್ವತ ಸಿಬ್ಬಂದಿ ನೇಮಿಸಲು ಟ್ರಸ್ಟ್ ಮುಂದಾಗಿದ್ದು, ತಂಗಲು ಕೊಠಡಿ ನಿರ್ಮಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ. ಕೊಠಡಿಯಾದರೆ ವಾತ್ರ ಸಿಬ್ಬಂದಿ ನೇಮಕ ಸಾಧ್ಯ ಎನ್ನುವುದು ಟ್ರಸ್ಟ್ ಪದಾಧಿಕಾರಿಗಳ ಅಭಿಪ್ರಾಯ.
ಚಿತಾಗಾರಕ್ಕೆ ಎರಡು ಸಿಲಿಕಾನ್ ಚೇಂಬರ್ ಅಳವಡಿಸಲಾಗಿದೆ. ಮುಂಭಾಗದಲ್ಲಿ ಶಿವ, ಸತ್ಯ ಹರಿಶ್ಚಂದ್ರನ ಮೂರ್ತಿ, ಆವರಣ ಗೋಡೆ, ಕಚೇರಿ, ಅಂಗಳಕ್ಕೆ ಇಂಟರ್‌ಲಾಕ್, ಗಾರ್ಡನ್ ಅಳವಡಿಸಲಾಗಿದೆ. ಸಾರ್ವಜನಿಕರ ಉಪಯೋಗಕ್ಕಾಗಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಪರಿಸರ ರಕ್ಷೆಣೆಗೂ ಪಣ ತೊಟ್ಟ ಸಮಿತಿ ಚಿತಾಗಾರ ಸುತ್ತಲೂ ಹೈಬ್ರೀಡ್ ತಳಿಯ ರಂಬೂಟನ್, ಅಡಕೆ, ಮಾವು, ಚಿಕ್ಕು ಸಹಿತ ಇತರ ಹಣ್ಣಿನ ಗಿಡ ನೆಡಲಾಗಿದೆ. ಈ ಎಲ್ಲ ಕೆಲಸಗಳಿಗೆ 30 ಲಕ್ಷ ರೂ. ವ್ಯಯಿಸಲಾಗಿದೆ. ಮುಖ್ಯರಸ್ತೆ ಸನಿಹದಲ್ಲೇ ಎತ್ತರದ ಸ್ಥಳದಲ್ಲಿರುವ ಚಿತಾಗಾರ ಸೌಂದರ್ಯದಲ್ಲೂ ವಾದರಿ ಎನಿಸಿದೆ.
ರುದ್ರಭೂಮಿ ಲೋಕಾರ್ಪಣೆ ಸವಾರಂಭ ಸೆ.15ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಸ್ಪೀಕರ್ ಯು.ಟಿ.ಖಾದರ್ ಸಹಿತ ಗಣ್ಯರು ಭಾವಹಿಸಲಿದ್ದಾರೆಂದು ಟ್ರಸ್ಟ್ ಅಧ್ಯಕ್ಷ ಲೋಕವಾಥ ಪೂಜಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಾಜಿ ಶಾಸಕ ಜಯರಾಂ ಶೆಟ್ಟಿ, ಕಿಶೋರ್ ಕುವಾರ್ ಸಂತೋಷ್ ನಗರ, ಹರೀಶ್ ಕೊಟ್ಟಾರಿ ಕುತ್ತಾರ್, ರವೀಂದ್ರ ಕೊಟ್ಟಾರಿ ದೇವಸ ಕುತ್ತಾರ್, ಉಮೇಶ್ ಶೆಟ್ಟಿ ಕುತ್ತಾರ್ ಗುತ್ತು, ಪ್ರದೀಪ್ ಶೆಟ್ಟಿ ಬರಿಕೆ, ಶಿವರಾಜ್ ಕಾವ ಸುದ್ದಿಗೋಷ್ಠಿಯಲ್ಲಿದ್ದರು.
1999ರಲ್ಲಿ ರುದ್ರಭೂಮಿ ನಿರ್ವಾಣವಾಗಿದ್ದು ಸ್ಥಳೀಯರೊಬ್ಬರು ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ನಾಲ್ಕು ವರ್ಷಗಳಿಂದ ಸಂಪೂರ್ಣ ಶಿಥಿಲವಾಗಿ ಕಾರ್ಯನಿರ್ವಹಣೆ ಸ್ಥಗಿತಗೊಂಡಿದ್ದ ಕಾರಣ ಸಮಿತಿ ರಚಿಸಿ ರುದ್ರಭೂಮಿಗೆ ಕಾಯಕಲ್ಪ ನೀಡಲಾಗಿದೆ. ವಾಸಕ್ಕೆ ವ್ಯವಸ್ಥೆಯಾದ ಬಳಿಕ ಶಾಶ್ವತ ಸಿಬ್ಬಂದಿ ನೇಮಿಸಲಾಗುವುದು. ಲೋಕನಾಥ ಪೂಜಾರಿ, ಅಧ್ಯಕ್ಷರು, ಹಿಂದು ಮುಕ್ತಿಧಾಮ ಸಮಿತಿ ಟ್ರಸ್ಟ್ಲೋಕನಾಥ ಪೂಜಾರಿ, ಅಧ್ಯಕ್ಷರು, ಹಿಂದು ಮುಕ್ತಿಧಾಮ ಸಮಿತಿ ಟ್ರಸ್ಟ್
ರುದ್ರಭೂಮಿ ಎನ್ನುವುದು ವಾನವನ ಕೊನೆಯ ವಾಸಸ್ಥಳವಾಗಿದ್ದು ಮನೆಗಿಂತಲೂ ರುದ್ರಭೂಮಿ ಸುಂದರವಾಗಿ, ಅಚ್ಚುಕಟ್ಟಾಗಿರಬೇಕು. ಈ ನಿಟ್ಟಿನಲ್ಲಿ ದಾನಿಗಳ ನೆರವಿನಿಂದ ಸುಸಜ್ಜಿತ ಹಾಗೂ ಸುಂದರವಾದ ರುದ್ರಭೂಮಿ ನಿರ್ಮಿಸಲಾಗಿದೆ. ಮುಂದಕ್ಕೆ ಟ್ರಸ್ಟ್ ನಿರ್ವಹಿಸಲಿದೆ. ಚಂದ್ರಹಾಸ ಅಡ್ಯಂತಾಯ, ಅಧ್ಯಕ್ಷರು, ಹಿಂದು ಮುಕ್ತಿಧಾಮ ಅಭಿವೃದ್ಧಿ ಸಮಿತಿಚಂದ್ರಹಾಸ ಅಡ್ಯಂತಾಯ, ಅಧ್ಯಕ್ಷರು, ಹಿಂದು ಮುಕ್ತಿಧಾಮ ಅಭಿವೃದ್ಧಿ ಸಮಿತಿ