ತಿಪಟೂರು: ನಗರದ ಕೆ.ಆರ್.ಬಡಾವಣೆಯಲ್ಲಿ 10 ವರ್ಷದಿಂದ ಕುಂಟುತ್ತಲೇ ಸಾಗಿರುವ ಹಾಸ್ಯಚಕ್ರವರ್ತಿ ದಿವಂಗತ ಟಿ.ಆರ್.ನರಸಿಂಹರಾಜು ರಂಗಮಂದಿರ ಕಾಮಗಾರಿ ಸದ್ಯಕ್ಕೆ ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.
ಎಲ್ಲರ ಒತ್ತಾಸೆಯಂತೆ 2010-11ರಲ್ಲಿ ಅಂದಾಜು 5.02 ಕೋಟಿ ರೂ. ವೆಚ್ಚದಲ್ಲಿ 38್ಡ33 ವಿಸ್ತೀರ್ಣದ, 650 ಆಸನ ವ್ಯವಸ್ಥೆ ಉಳ್ಳ ಸುಸಜ್ಜಿತ ರಂಗಮಂದಿರ ನಿರ್ಮಾಣ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಯಿತು. ಆದರೆ ಸರ್ಕಾರ ಸಕಾಲಕ್ಕೆ ಹಣ ಬಿಡುಗಡೆ ಮಾಡದ ಕಾರಣ 2010ರಲ್ಲಿ ಪ್ರಾರಂಭವಾದ ರಂಗಮಂದಿರ ಕಾಮಗಾರಿ 2020 ಮುಗಿಯುತ್ತಾ ಬಂದರೂ ಮುಗಿದಿಲ್ಲ.
2011ರ ಮಾ.28ರಂದು 15 ಲಕ್ಷ ರೂ., ಸೆ.29ರಂದು 45 ಲಕ್ಷ., 2013ರ ೆ.8ರಂದು 50 ಲಕ್ಷ ರೂ., 2016ರ ಜೂ.10ರಂದು 44 ಲಕ್ಷ., 2017ರ ಸೆ.11ರಿಂದ 2019ರ ಜು.31ರವರೆಗೆ ಮೂರು ಹಂತದಲ್ಲಿ 2 ಕೋಟಿ ರೂ., 2020ರ ಮಾರ್ಚ್‌ನಲ್ಲಿ ಒಂದೇ ಹಂತದಲ್ಲಿ 2 ಕೋಟಿ ರೂಪಾಯಿ ಸೇರಿ ಒಟ್ಟು 10 ವರ್ಷಗಳ ಅವಧಿಯಲ್ಲಿ 5.54 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಆದರೆ 10 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕಾಮಗಾರಿಯನ್ನು ಈಗ ಮುಗಿಸಲು ಹೊರಟಿರುವುದರಿಂದ ಸಹಜವಾಗಿ ದರಪಟ್ಟಿ ದುಪ್ಪಟ್ಟಾಗಿದೆ. ಅಂದಿನ ಅಂದಾಜು ಮೊತ್ತ 5.2 ಕೋಟಿ ಜತೆಗೆ ಈಗ ಹೆಚ್ಚುವರಿಯಾಗಿ 2.5 ಕೋಟಿ ರೂ. ವೆಚ್ಚದ ಕಾಮಗಾರಿ ಬಾಕಿ ಉಳಿದಿದೆ ಎಂದು ನಿರ್ಮಿತಿ ಕೇಂದ್ರ ಟಿಪ್ಪಣಿ ನೀಡಿದೆ. ಟೈಲ್ಸ್ , ಅಲ್ಯುಮಿನಿಯಮ್ ಬಾಗಿಲುಗಳು, ಮರದ ಬಾಗಿಲುಗಳು, ಬಣ್ಣ, ಜಲನಿರೋಧಕ ಪದರ, ಶೌಚಗೃಹ, ಎಸ್.ಎಸ್.ರೈಲಿಂಗ್ಸ್ ಹಾಗೂ ಕಬ್ಬಿಣದ ಸಾರ್ವೆ ಸೇರಿ ಇತರ ಕಾಮಗಾರಿಗಳಿಗೆ 2.5 ಕೋಟಿ ರೂಪಾಯಿ ಅಂದಾಜು ಮೊತ್ತ ತಯಾರಿಸಲಾಗಿದೆ.
ಹಾಲಿ ಶಾಸಕರ ಮೊದಲನೇ ಅವಧಿಯಲ್ಲಿ ಭೂಮಿ ಪೂಜೆ ಕಂಡ ರಂಗಮಂದಿರ, ಬಹುಷಃ ಇವರ 2ನೇ ಅವಧಿಯಲ್ಲಿ ಸಾರ್ವಜನಿಕರಿಗೆ ಮುಕ್ತವಾಗುವ ನಿರೀಕ್ಷೆ ಇದೆ. ಇದಕ್ಕೆ ಪೂರಕವಾಗಿ ಸಚಿವ ಸಿ.ಟಿ.ರವಿ.ಆಗಸ್ಟ್ 31ರಂದು ನಗರಕ್ಕೆ ಬಂದಾಗ 2 ಕೋಟಿ ರೂ.ಅನುದಾನದ ಘೋಷಣೆ ಮಾಡಿ ಹೋಗಿದ್ದಾರೆ. ವರ್ಷಾಂತ್ಯದಲ್ಲಿ ರಂಗಮಂದಿರ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ಶಾಸಕ ನಾಗೇಶ್ ಕೂಡ ತಿಳಿಸಿದ್ದಾರೆ.
ಹುಬ್ಬುಹಲ್ಲು ಹಾಸ್ಯಕ್ಕೆ ಪ್ರಧಾನ:1923ರ ಜು.24ರಂದು ತಿಪಟೂರಿನ ಪೊಲೀಸ್ ಪೇದೆ ರಾಮರಾಜು, ವೆಂಕಟಲಕ್ಷ್ಮೀ ದಂಪತಿ ಪುತ್ರನಾಗಿ ಜನಿಸಿದವರು ಟಿ.ಆರ್.ನರಸಿಂಹರಾಜು. ತಮ್ಮ ನಾಲ್ಕನೇ ವಯಸ್ಸಿನಲ್ಲಿ ಚಂದ್ರಮೌಳೇಶ್ವರ ನಾಟಕ ಕಂಪನಿಯಲ್ಲಿ ಗೋರಕುಂಬಾರ ಮತ್ತು ಹರಿಶ್ಚಂದ್ರ ನಾಟಕಗಳ ಮೂಲಕ ನಟನೆ ಪ್ರಾರಂಭಿಸಿ 27 ನೇ ವಯಸ್ಸಿನವರೆಗೆ ಚಂದ್ರಮೌಳೇಶ್ವರ ನಾಟಕ ಸಭಾ. ಹಿರಣ್ಯಮಿತ್ರ ಮಂಡಳಿ, ಭಾರತ ಲಲಿತ ಕಲಾ ಸಂಘ, ಗುಂಡಾಜೋಯಿಸರ ಕಂಪನಿ ಮತ್ತು ಗುಬ್ಬಿ ಚನ್ನಬಸವೇಶ್ವರ ನಾಟಕ ಕಂಪನಿಗಳಲ್ಲಿ ನಟಿಸಿ, 1954ರಲ್ಲಿ ಮೊಟ್ಟ ಮೊದಲ ಬಾರಿಗೆ ವರನಟ ದಿ.ಡಾ.ರಾಜ್ ಅಭಿನಯದ ಬೇಡರ ಕಣ್ಣಪ್ಪ ಚಲನಚಿತ್ರದಲ್ಲಿ ಅರ್ಚಕ ವೇಷಧಾರಿಯಾಗಿ ಕನ್ನಡ ಚಲನ ಚಿತ್ರರಂಗ ಪ್ರವೇಶಿಸಿದರು. ಪ್ರಕೃತಿ ದತ್ತವಾಗಿ ಬಂದಿದ್ದ ಹುಬ್ಬುಹಲ್ಲನ್ನೇ ಸಕಾರಾತ್ಮಕವಾಗಿ ಸ್ವೀಕರಿಸಿ, ಪ್ರಸಿದ್ಧ ನಟ ಚಾರ್ಲಿ ಚಾಪ್ಲಿನ್‌ರಿಂದ ಪ್ರೇರಣೆಗೊಂಡ ನರಸಿಂಹರಾಜು ಹಾಸ್ಯ ಪಾತ್ರಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಂಡವರು. ಹಾಸ್ಯ ಚಕ್ರವರ್ತಿ, ಹಾಸ್ಯ ರತ್ನ ಪ್ರಶಸ್ತಿಗೂ ಭಾಜನರಾಗಿ, ಡಾ.ರಾಜ್ ಅವರೇ ಇವರ ಕಾಲ್‌ಶೀಟ್ ನೋಡಿಕೊಂಡು ಸಮಯ ನಿಗದಿಪಡಿಸಿಕೊಳ್ಳುವಷ್ಟರ ಮಟ್ಟಿಗೆ ಹಾಸ್ಯ ಪಾತ್ರಧಾರಿಯಾಗಿ ವಿಜೃಂಭಿಸಿದ ನರಸಿಂಹರಾಜು 1979ರ ಜುಲೈ 11ರಂದು ಇಹಲೋಕ ತ್ಯಜಿಸುವುದಕ್ಕೂ ಮುಂಚೆ ಮದ್ರಾಸಿನಲ್ಲಿ ಸ್ವಂತ ಮನೆ ನಿರ್ಮಿಸಿಕೊಂಡ ಕನ್ನಡದ ಪ್ರಪ್ರಥಮ ನಟ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ರಂಗಮಂದಿರ ನಿರ್ಮಾಣಕ್ಕೆ ಗ್ರಹಣ ಹಿಡಿದಿರುವಂತೆ ಕಾಣುತ್ತೆ. ವಿಳಂಬಕ್ಕೆ ಕಾರಣರಾಗಿದ್ದ ಇಂಜಿನಿಯರ್‌ನನ್ನು ಬದಲಾಯಿಸಿದ್ದೆ. ಸೂಕ್ತ ಸಮಯದಲ್ಲಿ ಹಣ ಬಿಡುಗಡೆಗೆ ಕೆಲವು ಸಮಸ್ಯೆಗಳೂ ಇದ್ದವು. ಕೆ.ಷಡಕ್ಷರಿ ಮಾಜಿ ಶಾಸಕ 10 ವರ್ಷಗಳ ಹಿಂದಿನ ಅಂದಾಜು ಮೊತ್ತಕ್ಕೂ ಈಗಿನ ಕಾಮಗಾರಿಗೂ ತುಂಬ ವ್ಯತ್ಯಾಸವಿದೆ. ತಕ್ಷಣಕ್ಕೆ ಒಂದೂವರೆ ಕೋಟಿ ರೂ. ಬಿಡುಗಡೆ ಆದರೆ ಡಿಸೆಂಬರ್ ಅಂತ್ಯದೊಳಗೆ ನಾಟಕ ಪ್ರಯೋಗಕ್ಕೆ ವೇದಿಕೆ ಬಿಟ್ಟುಕೊಡಬಹುದು. ಉಳಿದ ಎಲಿವೇಷನ್ ಕಾಮಗಾರಿ ನಂತರ ಮಾಡಲು ಅವಕಾಶವಿದೆ. ಡಿ.ರಾಜಶೇಖರ್ ಯೋಜನಾ ವ್ಯವಸ್ಥಾಪಕ, ಜಿಲ್ಲಾ ನಿರ್ಮಿತಿ ಕೇಂದ್ರ