ಮಡಿಕೇರಿ:
ಸಂಸತ್ ಅಧಿವೇಶನದಲ್ಲಿ ಕೊಡವ ಕೌಟುಂಬಿಕ ಹಾಕಿ ಹಬ್ಬ ಗುರುವಾರ ಸದ್ದು ಮಾಡಿದೆ. ವಿಷಯ ಪ್ರಸ್ತಾಪಿಸಿದ ರಾಜ್ಯಸಭಾ ಸದಸ್ಯ ಅಜಯ್ ಮಖಾನ್, ಈ ವರ್ಷ ಕರ್ನಾಟಕದಲ್ಲಿ ಕೊಡವ ಹಾಕಿ ಪಂದ್ಯಾವಳಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ತನ್ನ ಛಾಪು ಮೂಡಿಸಿದೆ. ಇದು ಕೇಂದ್ರ ಸರ್ಕಾರದ ಯಾವುದೇ ಬೆಂಬಲವಿಲ್ಲದೆ ಸಾಧಿಸಿದ ಸಾಧನೆಯಾಗಿದೆ. ಆದರೆ ರಾಜ್ಯ ಸರ್ಕಾರ ತನ್ನ ಸಂಪೂರ್ಣ ಬೆಂಬಲವನ್ನು ನೀಡಿತು. ಇಂತಹ ಮಹತ್ವದ ಕ್ರೀಡಾಕೂಟಗಳಲ್ಲಿ ಕೇಂದ್ರ ಸರ್ಕಾರದ ಪಾಲ್ಗೊಳ್ಳುವಿಕೆಯ ತುರ್ತು ಅಗತ್ಯವನ್ನು ಇದು ಒತ್ತಿ ಹೇಳುತ್ತದೆ.
1997 ರಲ್ಲಿ ಕೇವಲ 60 ತಂಡಗಳೊAದಿಗೆ ಪ್ರಾರಂಭವಾದ ಕೊಡವ ಹಾಕಿ ಪಂದ್ಯಾವಳಿ ಈ ವರ್ಷ 4834 ಆಟಗಾರರೊಂದಿಗೆ 360 ತಂಡಗಳನ್ನು ಒಳಗೊಂಡAತೆ ಬೆಳೆದಿದೆ. ಇದು ವಿಶ್ವದ ಅತಿದೊಡ್ಡ ಪಂದ್ಯಾವಳಿಯಾಗಿದೆ. ಕೊಡವರ ಜನ್ಮಸ್ಥಳವಾದ ಕೊಡಗು ಜಿಲ್ಲೆಯನ್ನು ಭಾರತೀಯ ಹಾಕಿಯ ತೊಟ್ಟಿಲು ಎಂದು ಕರೆಯಲಾಗುತ್ತದೆ. ಈ ಜಿಲ್ಲೆ ಭಾರತ ಹಾಕಿ ತಂಡವನ್ನು ಪ್ರತಿನಿಧಿಸಿದ 50 ಕೊಡವರನ್ನು ನೀಡಿದೆ. ಅವರಲ್ಲಿ ಏಳು ಒಲಿಂಪಿಯನ್‌ಗಳಾದ ಗೋವಿಂದ, ಎಂ.ಪಿ.ಗಣೇಶ್, ಸೋಮಯ್ಯ ಮತ್ತಿತರರು ಇದ್ದಾರೆ. ಕ್ರೀಡಾ ಸಚಿವನಾಗಿದ್ದ ನಾನು ಕೊಡಗು ಜಿಲ್ಲೆಯ ಸಾಧನೆಗಳಿಂದ ಸ್ಫೂರ್ತಿ ಹೊಂದಿದ್ದೇನೆ ಮತ್ತು ಅದರ ಸಾಮರ್ಥ್ಯದ ಬಗ್ಗೆ ವಿಶ್ವಾಸ ಹೊಂದಿದ್ದೇನೆ.
ನಮ್ಮ ದೇಶದಲ್ಲಿ ಹಾಕಿಯ ಪ್ರಾಮುಖ್ಯತೆಯನ್ನು ಗಮನಿಸಿದರೆ, ಕೇಂದ್ರ ಸರ್ಕಾರವು ಈ ಮಹತ್ವದ ಸ್ಥಳಕ್ಕೆ ವಾರ್ಷಿಕ ಅನುದಾನ ಅಥವಾ ಒಂದು ಬಾರಿ ಮೂಲಸೌಕರ್ಯ ಅಭಿವೃದ್ಧಿಯನ್ನು ಒದಗಿಸಲು ಪರಿಗಣಿಸುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ. ಕೊಡಗು ಹಲವಾರು ಒಲಿಂಪಿಯನ್‌ಗಳು ಮತ್ತು ರಾಷ್ಟ್ರೀಯ ಆಟಗಾರರನ್ನು ದೇಶಕ್ಕೆ ಕೊಟ್ಟಿದೆ. ಈ ಜಿಲ್ಲೆಯನ್ನು ಭಾರತೀಯ ಹಾಕಿಯ ತೊಟ್ಟಿಲು ಎಂದು ಕರೆಯಲಾಗುತ್ತದೆ. ನಾನು ಕ್ರೀಡಾ ಸಚಿವನಾಗಿ ಕೂನೂರು ಜಿಲ್ಲೆಯಲ್ಲಿ ಮಹತ್ವದ ತರಬೇತಿ ಕೇಂದ್ರವನ್ನು ಸ್ಥಾಪಿಸಿದೆ. ಹಿಮಾಚಲ ಪ್ರದೇಶದಲ್ಲಿ ಮತ್ತೊಂದು ಇಂಥ ತರಬೇತಿ ಕೇಂದ್ರವಿದೆ. ಈ ಕೊಡಗು ಜಿಲ್ಲೆಯಲ್ಲೂ ಇಂಥ ತರಬೇತಿ ಕೇಂದ್ರ ಅಭಿವೃದ್ಧಿಪಡಿಸಬೇಕು ಎಂದು ಕ್ರೀಡಾ ಸಚಿವರನ್ನು ಒತ್ತಾಯಿಸಿದ್ದಾರೆ.