ಲಿಂಗಸುಗೂರು ತಾಲೂಕಿನ ಈಚನಾಳ ಗ್ರಾಮದ ಹೈಟೆಕ್ ಗ್ರಂಥಾಲಯಕ್ಕೆ ತಾಪಂ ಇಒ ಉಮೇಶ ಭೇಟಿ ನೀಡಿ ಪರಿಶೀಲಿಸಿದರು. ಪಿಡಿಒ ಮಹೇಶ, ಗ್ರಂಥಪಾಲಕಿ ಮೈತ್ರಾ ಮೇಟಿ ಇತರರಿದ್ದರು. 
ಜಿಲ್ಲೆ

ಈಚನಾಳ ಗ್ರಂಥಾಲಯಕ್ಕೆ ತಾಪಂ ಇಒ ಭೇಟಿ

ನರೇಶ್ ಕುಮಾರ್

ಲಿಂಗಸುಗೂರು: ತಾಲೂಕಿನ ಈಚನಾಳ ಗ್ರಾಮದಲ್ಲಿ ಅಗತ್ಯ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಹೈಟೆಕ್ ಗ್ರಂಥಾಲಯಕ್ಕೆ ತಾಪಂ ಇಒ ಉಮೇಶ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಂಥಾಲಯವು ಇಕ್ಕಟ್ಟಾದ ಸಂದಿಯಲ್ಲಿ ಪುಟ್ಟದಾದ ಕೊಠಡಿಯಲ್ಲಿ ನಡೆಸಲಾಗುತ್ತಿದ್ದು, ಗಾಳಿ, ಬೆಳಕು, ವಿದ್ಯುತ್ ಸಂಪರ್ಕ, ಶೌಚಗೃಹ, ಶುದ್ಧ ಕುಡಿವ ನೀರು, ಫ್ಯಾನ್, ಮಹಿಳೆಯರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಇಲ್ಲದೆ ಓದುಗರಿಗೆ ಮುಜುಗರ ಉಂಟು ಮಾಡಿದೆ.

ಈ ಕುರಿತು ವಿಜಯವಾಣಿ ‘ಅವ್ಯಸ್ಥೆಯಲ್ಲಿ ಅರಿವು ಕೇಂದ್ರ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೆ ತಾಪಂ ಇಒ ಉಮೇಶ, ಗ್ರಂಥಾಲಯಕ್ಕೆ ಭೇಟಿ ನೀಡಿ ಮೂಲ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು. ಗ್ರಾಪಂ ವ್ಯಾಪ್ತಿಯ ಬಡವಾಣೆಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಮೀಸಲಿರಿಸಿದ ಜಾಗ ಗುರುತಿಸಿ ಹೈಟೆಕ್ ಗ್ರಂಥಾಲಯಕ್ಕೆ ನೀಡುವಂತೆ ಪಿಡಿಒ ಶಿವಪ್ಪಗೆ ಸೂಚಿಸಿದರು.