ಚಿಕ್ಕೋಡಿ ಸಿಎಲ್‌ಇ ಸಂಸ್ಥೆಯ ಎಂ.ಕೆ.ಕವಟಗಿಮಠ ಶಾಲೆಯಲ್ಲಿ ಏರ್ಪಡಿಸಿದ್ದ ಪಾಕ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಯಾರಿಸಿ ತಂದ ಖಾದ್ಯಗಳನ್ನು ಶಕುಂತಲಾ ಡೋನವಾಡೆ ಹಾಗೂ ಸಾಗರ ಬಿಸ್ಕೋಪ್ ವೀಕ್ಷಿಸಿದರು. ಭಾರತಿ ಟವಳೆ, ಲಕ್ಷ್ಮೀ ನಾಯಕ ಇತರರಿದ್ದರು. 
ಜಿಲ್ಲೆ

ತುಸು ತಿನ್ನುವುದು ಲೇಸು

ರಾಘವೇಂದ್ರಗೌಡ ಭೀ ಪಾಟೀಲ್

ಚಿಕ್ಕೋಡಿ: ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಸೋಲು-ಗೆಲುವು ಭಾವಿಸದೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಬಿಜೆಪಿ ಚಿಕ್ಕೋಡಿ ಮಂಡಳದ ಮಹಿಳಾ ಮೋರ್ಚಾ ಅಧ್ಯಕ್ಷೆ ಶಕುಂತಲಾ ಡೋನವಾಡೆ ಹೇಳಿದರು.

ಪಟ್ಟಣದ ಸಿಎಲ್‌ಇ ಸಂಸ್ಥೆಯ ಎಂ.ಕೆ.ಕವಟಗಿಮಠ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪಾಕ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಕಸ ತಿನ್ನುವುದಕ್ಕಿಂತ ತುಸು ತಿನ್ನುವುದು ಲೇಸು. ಮನೆಯಲ್ಲಿ ಪೌಷ್ಟಿಕ ಆಹಾರ ತಯಾರಿಸಿ ಸೇವಿಸಬೇಕು ಎಂದರು.

ನಿರ್ಣಾಯಕರಾಗಿ ಲಕ್ಷ್ಮೀ ನಾಯಿಕ ಆಗಮಿಸಿದರು. ಸಾಗರ ಬಿಸ್ಕೋಪ್, ಭಾರತಿ ಟವಳೆ, ಸಿಎಲ್‌ಇ ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಎಸ್.ಕೆ.ಕೊಟ್ರೆ, ಎಸ್.ಎಸ್.ಮೆಟಗುಡ್ಡ, ಡಾ.ಎಸ್.ಎಸ್.ಉಕ್ಕಲಿ, ಸ್ಮಿತಾ ಶಿಂಧೆ, ಡಿ.ಎಸ್.ಕೋಳಿ, ಬಿ.ಡಿ.ರೊಖಡೆ ಇತರರಿದ್ದರು.